ಭೂಪಾಲ್:ಮಧ್ಯಪ್ರದೇಶದ 28 ವಿಧಾನಸಭಾ ಸ್ಥಾನಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದ್ದು, ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.
ಬಿರುಸಾಗಿ ಸಾಗಿದೆ ಮಧ್ಯಪ್ರದೇಶ ಉಪ ಚುನಾವಣೆ: 28 ವಿಧಾನಸಭಾ ಸ್ಥಾನಗಳಿಗೆ ಮತದಾನ
ಮಧ್ಯಪ್ರದೇಶದ 28 ವಿಧಾನಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಇದೇ ನವೆಂಬರ್ 10 ರಂದು ಉಪ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಇದುವರೆಗೂ ಶೇ 11.43 ರಷ್ಟು ಮತದಾನವಾಗಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ 22 ಶಾಸಕರು 2020 ರ ಮಾರ್ಚ್ನಲ್ಲಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಹಿನ್ನೆಲೆ ಈ ಉಪಚುನಾವಣೆ ನಡೆಯುತ್ತಿದೆ. ಜ್ಯೋತಿರಾದಿತ್ಯ ಸಿಂಧಿಯಾ ಅವರ ನಾಯಕತ್ವ ಮಧ್ಯಪ್ರದೇಶದಲ್ಲಿ 15 ತಿಂಗಳ ಕಮಲ್ ನಾಥ್ ಸರ್ಕಾರವನ್ನ ಉರುಳಿಸಿದ್ದರು.
ನಂತರ ಪುನಃ ಮೂವರು ಕಾಂಗ್ರೆಸ್ ಎಂಎಲ್ಎಗಳು ಬಿಜೆಪಿ ಸೇರಿದ ಹಿನ್ನೆಲೆ ಪಕ್ಷ ತೊರೆದ ಶಾಸಕರ ಸಂಖ್ಯೆ 25 ಕ್ಕೇರಿತು. ನಂತರ ಮೂರು ಜನ ಹಾಲಿ ಸದಸ್ಯರು ಮರಣ ಹೊಂದಿದ್ದರು. ಹೀಗಾಗಿ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಅಧಿಕಾರ ವಹಿಸಿಕೊಳ್ಳಲು ಕಾರಣವಾಯ್ತು. ಇದುವರೆಗೂ ಮಧ್ಯಪ್ರದೇಶದಲ್ಲಿ ಶೇ 11.43 ರಷ್ಟು ಮತದಾನವಾಗಿದೆ.