ಛತರ್ಪುರ(ಮಧ್ಯ ಪ್ರದೇಶ):ಛತರ್ಪುರ ಜಿಲ್ಲೆಯ ಸಿವಿಲ್ ಲೈನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ವಿಡಿಯೋ ವೈರಲ್ ಆಗುತ್ತಿದೆ.
ಭೂ ವಿವಾದದಿಂದ ಎರಡು ಗುಂಪುಗಳ ನಡುವೆ ಗಲಾಟೆ ಆಗಿದೆ ಎಂದು ಹೇಳಲಾಗುತ್ತಿದೆ. ವಿಡಿಯೋದಲ್ಲಿ ಕೆಲವು ಜನರ ಕೈಯಲ್ಲಿ ಬಂದೂಕುಗಳು ಸಹ ಕಾಣಿಸಿಕೊಂಡಿವೆ. ಗುಂಡು ಕೂಡ ಹಾರಿಸಿದ್ದಾರೆ. ಗಲಾಟೆಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ.