ಕರ್ನಾಟಕ

karnataka

ETV Bharat / bharat

ಮದುವೆಯಾಗದೇ ಒಟ್ಟಾಗಿ ಬಾಳುವುದು ಅಪರಾಧವಲ್ಲ; ಹೈಕೋರ್ಟ್​ ಮಹತ್ವದ ತೀರ್ಪು

ಲಿವ್​ ಇನ್ ರಿಲೇಶನಶಿಪ್​ ಇಟ್ಟುಕೊಳ್ಳುವುದು ಕಾನೂನುಬಾಹಿರವಲ್ಲ. ಹಾಗಂತ ಎಲ್ಲರೂ ಲಿವ್ ಇನ್ ರಿಲೇಶನಶಿಪ್​ ಒಪ್ಪಿಕೊಳ್ಳಬೇಕೆಂದಿಲ್ಲ, ಆದರೆ ಇದು ಕಾನೂನು ಬಾಹಿರವಲ್ಲ. ಮದುವೆಯಾಗದೇ ಒಟ್ಟಾಗಿ ವಾಸಿಸುವುದು ನಮ್ಮ ದೇಶದ ಕಾನೂನಿನಲ್ಲಿ ಅಪರಾಧವಲ್ಲ ಎಂದು ಹೈಕೋರ್ಟ್​ ಹೇಳಿದೆ.

Liv-in relationship is not a crime: Punjab Haryana High Court
ಮದುವೆಯಾಗದೆ ಒಟ್ಟಾಗಿ ಬಾಳುವುದು ಅಪರಾಧವಲ್ಲ; ಹೈಕೋರ್ಟ್​

By

Published : Jun 9, 2021, 6:00 PM IST

ಹರಿಯಾಣ: ಪ್ರತಿಯೊಬ್ಬರೂ ತಮಗೆ ಸೂಕ್ತವಾದ ಸಂಗಾತಿಯನ್ನು ಆರಿಸಿಕೊಳ್ಳಲು ಸ್ವತಂತ್ರರಾಗಿದ್ದಾರೆ. ಹೀಗೆ ಆರಿಸಿಕೊಳ್ಳಲಾದ ಸಂಗಾತಿಯ ಬಗ್ಗೆ ತನಿಖೆ ನಡೆಸುವುದು ಕೋರ್ಟ್​ ಕೆಲಸವಲ್ಲ ಎಂದು ಪಂಜಾಬ ಮತ್ತು ಹರಿಯಾಣ ಹೈಕೋರ್ಟ್​ ಹೇಳಿದೆ.

ಲಿವ್ ಇನ್ ರಿಲೇಶನಶಿಪ್​ನಲ್ಲಿ ಬದುಕುತ್ತಿದ್ದ ಜೋಡಿಗಳು ತಮಗೆ ರಕ್ಷಣೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್​, ಇಂಥ ಪ್ರಕರಣಗಳಲ್ಲಿ ಜೋಡಿಗಳಿಗೆ ರಕ್ಷಣೆ ನೀಡದ ಕಾರಣ ಅವರೇನಾದರೂ ಮರ್ಯಾದಾ ಹತ್ಯೆಗೀಡಾದರೆ ಅದು ಕಾನೂನಿನ ವೈಫಲ್ಯವಾಗುತ್ತದೆ ಎಂದು ತಿಳಿಸಿದೆ.

ಲಿವ್​ ಇನ್ ರಿಲೇಶನಶಿಪ್​ ಇಟ್ಟುಕೊಳ್ಳುವುದು ಕಾನೂನುಬಾಹಿರವಲ್ಲ. ಹಾಗಂತ ಎಲ್ಲರೂ ಲಿವ್ ಇನ್ ರಿಲೇಶನಶಿಪ್​ ಒಪ್ಪಿಕೊಳ್ಳಬೇಕೆಂದಿಲ್ಲ, ಆದರೆ, ಇದು ಕಾನೂನು ಬಾಹಿರವಲ್ಲ. ಮದುವೆಯಾಗದೇ ಒಟ್ಟಾಗಿ ವಾಸಿಸುವುದು ನಮ್ಮ ದೇಶದ ಕಾನೂನಿನಲ್ಲಿ ಅಪರಾಧವಲ್ಲ ಎಂದು ಹೈಕೋರ್ಟ್​ ಹೇಳಿದೆ.

ಲಿವ್​ ಇನ್​ ರಿಲೇಶನಶಿಪ್​ ಮಾದರಿಯಲ್ಲಿ ಒಟ್ಟಾಗಿ ವಾಸಿಸುತ್ತಿದ್ದ ಜೋಡಿಯೊಂದು ತಮಗೆ ರಕ್ಷಣೆ ನೀಡಬೇಕೆಂದು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಯುವತಿಗೆ 17 ವರ್ಷ 3 ತಿಂಗಳು ಹಾಗೂ ಯುವಕನಿಗೆ 20 ವರ್ಷ ವಯಸ್ಸಾಗಿದೆ. ಹೀಗಾಗಿ ಇವರಿಗೆ ಕಾನೂನಾತ್ಮಕ ರಕ್ಷಣೆ ನೀಡಕೂಡದು ಎಂದು ಪ್ರಕರಣದಲ್ಲಿ ಪಂಜಾಬ್​ ಸರ್ಕಾರ ವಾದ ಮಾಡಿತ್ತು.

ಇಂಥ ಪ್ರಕರಣಗಳಲ್ಲಿ ನ್ಯಾಯಾಲಯವು ರಕ್ಷಣೆ ನೀಡಲು ನಿರಾಕರಿಸಿದಲ್ಲಿ, ಪ್ರಜೆಗಳ ಸ್ವಾತಂತ್ರ್ಯ ಹಾಗೂ ಬದುಕುವ ಹಕ್ಕನ್ನು ಕಸಿದು ಕೊಂಡಂತಾಗುತ್ತದೆ ಎಂದು ಹೇಳಿದ ಹೈಕೋರ್ಟ್​ ಪೀಠ, ಜೋಡಿಗಳಿಗೆ ರಕ್ಷಣೆ ಅಗತ್ಯವಿದೆಯಾ ಎಂಬುದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭಟಿಂಡಾ ಎಸ್​ಎಸ್​ಪಿ ಅವರಿಗೆ ಸೂಚನೆ ನೀಡಿತ್ತು.

ABOUT THE AUTHOR

...view details