ನೋಯ್ಡಾ, ಉತ್ತರ ಪ್ರದೇಶ :ನೋಯ್ಡಾದ ಸೆಕ್ಟರ್ 137 ರ ಸೊಸೈಟಿಯಲ್ಲಿ 73 ವರ್ಷದ ಮಹಿಳೆಯೊಬ್ಬರು ಅವರು ಹೋಗುತ್ತಿದ್ದ ಲಿಫ್ಟ್ ಕುಸಿದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಘಟನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ವೃದ್ಧೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ನೋಯ್ಡಾದ ಪೊಲೀಸ್ ಸ್ಟೇಷನ್ ಸೆಕ್ಟರ್ 142 ವ್ಯಾಪ್ತಿಯ ಪ್ಯಾರಾಸ್ ಟಿಯೆರಾ ಸೊಸೈಟಿಯಲ್ಲಿ ಈ ದುರಂತ ಸಂಭವಿಸಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಮೃತರ ಕುಟುಂಬಸ್ಥರು ದೂರು ನೀಡಿದ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಕಟ್ಟಡದ ಎತ್ತರದ ಮಹಡಿಯಲ್ಲಿ ಲಿಫ್ಟ್ ಇತ್ತು. ಅಜ್ಜಿ ಕೆಳಗಿಳಿಯುವಾಗ ಹಠತ್ತಾಗಿ ಕುಸಿತಗೊಂಡಿದೆ. ಆದರೆ ಲಿಫ್ಟ್ ನೆಲಕ್ಕೆ ಅಪ್ಪಳಿಸದೇ ಮಧ್ಯದ ಮಹಡಿಗಳಲ್ಲಿ ಸಿಲುಕಿಕೊಂಡಿತು. ಈ ಘಟನೆ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಸಂಭವಿಸಿದೆ. ಘಟನೆಯ ನಂತರ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ನೋಯ್ಡಾ ಸೊಸೈಟಿಯಲ್ಲಿ ಲಿಫ್ಟ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ನಂತರ ಮತ್ತು ಅದರ ಕೇಬಲ್ ಕಟ್ ಆದ ನಂತರ ವಯಸ್ಸಾದ ಮಹಿಳೆ ಆಘಾತಕ್ಕೊಳಗಾಗಿದ್ದರು. ಲಿಫ್ಟ್ ಪತನದ ಸಮಯದಲ್ಲಿ ಮಹಿಳೆಗೆ ಹೃದಯಾಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅದು ಅಂತಿಮವಾಗಿ ಅವರ ಸಾವಿಗೆ ಕಾರಣವಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾಖಲಾದ ಕೂಡಲೇ ವೃದ್ಧೆ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಖಂಡಿಸಿ ಬಹುಮಹಡಿ ವಸತಿ ಸಮುಚ್ಚಯದ ನಿವಾಸಿಗಳು ಪ್ರತಿಭಟನೆ ನಡೆಸಿದರು ಮತ್ತು ಅಲ್ಲಿ ವಾಸಿಸುವ ಕುಟುಂಬಗಳ ಸುರಕ್ಷತೆಗೆ ಆಡಳಿತವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಓದಿ:Remi Lucidi died: ಸ್ಟಂಟ್ ಮಾಡುತ್ತ 68ನೇ ಮಹಡಿಯಿಂದ ಬಿದ್ದು ಸಾವಿಗೀಡಾದ ಸ್ಟಂಟ್ ಮ್ಯಾನ್ ರೆಮಿ ಲುಸಿಡಿ
ಸರ್ಕಾರಿ ಆಸ್ಪತ್ರೆಯಲ್ಲಿ ತಿಂಗಳಿನಿಂದ ಕೆಟ್ಟಿರುವ ಲಿಫ್ಟ್ : ಸರ್ಕಾರಿ ಆಸ್ಪತ್ರೆಗಳೆಂದರೆ ರೋಗಿಗಳು ಅಲ್ಲಿಗೆ ತೆರಳಿ ಚಿಕಿತ್ಸೆ ಪಡೆಯಲು ಹಿಂಜರಿಯುತ್ತಾರೆ. ಬಹುತೇಕರು ಉತ್ತಮ ಚಿಕಿತ್ಸೆ ದೊರೆಯುತ್ತೆ ಎಂದು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವುದುಂಟು. ಕೆಲವರು ಖಾಸಗಿ ಆಸ್ಪತ್ರೆಗಳಿಗೆ ತೆರಳುವಷ್ಟು ದುಡ್ಡು ನಮ್ಮ ಬಳಿ ಇಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿ, ಸರ್ಕಾರಿ ಆಸ್ಪತ್ರೆಗೆ ಹೋದರೆ ಕೆಲವೆಡೆ ನರಕಯಾತನೆಯ ಅನುಭವ ಆದ ಪ್ರಕರಣಗಳು ಆಗಾಗ್ಗೆ ಕಂಡುಬರುತ್ತವೆ. ಇಂತಹದ್ದೇ ಒಂದು ಕೇಸ್ ಕೇರಳದ ಕಾಸರಗೋಡಿನಲ್ಲಿ ಬೆಳಕಿಗೆ ಬಂದಿತ್ತು.
ಹೌದು, ಕಾಸರಗೋಡು ಜನರಲ್ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆಸ್ಪತ್ರೆಯ ಲಿಫ್ಟ್ ಕೆಟ್ಟಿರುವುದರಿಂದ ಡಿಸ್ಚಾರ್ಜ್ ಆದ ರೋಗಿಯೊಬ್ಬರನ್ನು ಕಾರ್ಮಿಕರು ಆರನೇ ಮಹಡಿಯಿಂದ ನೆಲಮಹಡಿಗೆ ಹೊತ್ತುಕೊಂಡು ಬಂದಿರುವ ಘಟನೆ ಜಿಲ್ಲೆಯಲ್ಲಿ ನಡೆದಿತ್ತು. . ಅಲ್ಲಿನ ಜನರಲ್ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದ ಲಿಫ್ಟ್ ಕೆಟ್ಟಿದ್ದು, ರೋಗಿಗಳು ಪರದಾಡುವಂತಾಗಿತ್ತು. ಈಗ ಆ ಲಿಫ್ಟ್ ಸರಿ ಪಡಿಸಲಾಗಿದೆ ಎನ್ನಲಾಗ್ತಿದೆ.