ಹೈದರಾಬಾದ್ :ಚಿತ್ರನಟ, ನಿರ್ದೇಶಕ, ನಿರ್ಮಾಪಕ, ಸಾಹಿತಿಯಾಗಿ ಚಿತ್ರರಂಗವನ್ನು ಆಳುತ್ತಿರುವ ಬಹುಭಾಷಾ ನಟ ಕಮಲ್ ಹಾಸನ್ ರಾಜಕಾರಣದಲ್ಲಿ ಅತಿ ದೊಡ್ಡ ಹೆಜ್ಜೆ ಇಡಲು ಮುಂದಾಗಿದ್ದಾರೆ. ಮಕ್ಕಳ ನೀಧಿ ಮೈಯಂ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿರುವ ಅವರು, ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ತಲ್ಲೀನರಾಗಿರುವ ಅವರು ಈಗಾಗಲೇ ರಾಜ್ಯಾದ್ಯಂತ ಮಿಂಚಿನ ಸಂಚಾರ ನಡೆಸಿದ್ದಾರೆ. ಈಟಿವಿ ಭಾರತ್ನ ಹಿರಿಯ ವರದಿಗಾರರಾದ ಎಸ್.ಶ್ರೀನಿವಾಸನ್ ಅವರ ಜೊತೆ ತಮ್ಮ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಮಾತನಾಡಿದ್ದು, ಅವರ ಪಕ್ಷ ಬಿಜೆಪಿಯ ಬಿ ಟೀಂ ಎಂಬ ಸುದ್ದಿಯ ಬಗ್ಗೆಯೂ ಸ್ಪಷ್ಟಪಡಿಸಿದ್ದಾರೆ.
ಪ್ರಶ್ನೆ: ಕಮಲ್ ಹಾಸನ್ ಬಿಜೆಪಿಯ ಬಿ ಟೀಂ ಎಂಬ ಬಗ್ಗೆ ನಿಮ್ಮ ಮಾತು..
ನನ್ನನ್ನು ತಿಳಿದುಕೊಂಡಿರುವವರ ಬಗ್ಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತು. ನನ್ನ ಹೆಸರು ಕಮಲ್ ಹಾಸನ್. ನಿಮ್ಮ ಹೆಸರು K ಇಂದ ಆರಂಭವಾಗುತ್ತದೆ. ಆದ್ದರಿಂದ ಅನುಮಾನ ಪಡುತ್ತೇನೆ ಎಂದು ಹೇಳುವುದಾದರೆ ಅವರು ಅನುಮಾನ ಪಡುತ್ತಲೇ ಇರಲಿ. ನನ್ನ ಜೀವನ ಪರಿಚಯ ಇರುವವರು ಈ ರೀತಿ ಹೇಳಲು ಸಾಧ್ಯವಿಲ್ಲ. ನನ್ನ ಬಗ್ಗೆ ಅರಿವಿಲ್ಲದವರು ಈ ರೀತಿ ಹೇಳುತ್ತಾರೆ. ಅದೇ ಬಣ್ಣವನ್ನು ನನಗೆ ಹಚ್ಚಲಿ. ಅದು ಅಳಿಸಿ ಹೋಗಲಿದೆ.
ಪ್ರಶ್ನೆ: ಅರ್ಜಿಗಳಲ್ಲಿ ಜಾತಿ ಕಾಲಂಗಳನ್ನು ಡಿಲೀಟ್ ಮಾಡಿ, ಜಾತಿ ನಾಶ ಮಾಡಬಹುದೇ?
ಉತ್ತರ:ಅರ್ಜಿಯಲ್ಲಿ ಜಾತಿ ಕಾಲಂ ತೆಗೆದು ಹಾಕುವ ಆಲೋಚನೆಯನ್ನು ಅಪಹಾಸ್ಯ ಮಾಡಬಾರದು. “ಅರ್ಜಿಯಲ್ಲಿ ಜಾತಿಯ ಹೆಸರನ್ನು ತೆಗೆದು ಹಾಕಿದರೆ, ಜಾತಿಯನ್ನು ತೆಗೆದು ಹಾಕಲಾಗುತ್ತದೆಯೇ?” ಎಂದು ನೀವು ಹೇಳಿದಾಗ ಜಾತಿ ಯಥಾಸ್ಥಿತಿ ಮುಂದುವರಿಯಬೇಕೆಂದು ನೀವು ಬಯಸುತ್ತಿರುವಂತೆ ತೋರುತ್ತಿದೆ. ಜಾತಿಯನ್ನು ನಿರ್ಮೂಲನೆ ಮಾಡಲು ನೀವು ನನಗೆ ಸವಾಲು ಹಾಕುತ್ತಿದ್ದೀರಿ. ಸವಾಲು ನಮ್ಮದಾಗಬೇಕು. ಜಾತಿ ಮೂಲಕ ಆಟ ಆಡುವವರೆಗೆ ವಂಶಾವಳಿ ಇಲ್ಲ. ನಾವು ಅವರಿಗೆ ಜಾತಿ ಕಲಿಸಬಾರದು.
ಪ್ರಶ್ನೆ: ಮನೆ ಕೆಲಸ ಮಾಡುವವರಿಗೆ ತಿಂಗಳ ವೇತನದ ಬಗ್ಗೆ ಮಾತನಾಡಿದ್ದೀರಿ.. ಇದು ಮಹಿಳಾ ಸಬಲೀಕರಣಕ್ಕೆ ವಿರುದ್ಧವಾಗುವುದಿಲ್ಲವೇ?
ಉತ್ತರ:ನಾವು ಆರ್ಥಿಕತೆಗೆ ಗೃಹಿಣಿಯರ ಕೊಡುಗೆ ಗುರುತಿಸಿದ್ದೇವೆ. ಮನೆ ಕೆಲಸ ಮಾಡುವವರಿಗೆ ತಿಂಗಳ ವೇತನ ನೀಡುವುದರಿಂದ ಅವರನ್ನು ಹೊರಗೆ ಬಂದು ಕೆಲಸ ಮಾಡಬೇಡಿ ಎಂದು ಅರ್ಥವಲ್ಲ. ಅವರೂ ವಿದ್ಯಾಭ್ಯಾಸ ಮಾಡಬಹುದು. ಎಲ್ಲಿ ಬೇಕಾದರೂ ಕೆಲಸ ಮಾಡಬಹುದು.
ಮನೆಕೆಲಸದವರಿಗೆ ತಿಂಗಳ ವೇತನ ನೀಡದೇ ಇರುವುದು ನಾವು ಈವರೆಗೆ ಗಮನಿಸಲಿಲ್ಲ. ಇದು ನಮ್ಮ ಮೂರ್ಖತನ. ಅವರಿಗೂ ಕೆಲಸದ ಸಮಯವನ್ನು ನಿಗದಿ ಮಾಡಲಾಗುತ್ತದೆ. ನೂರು ವರ್ಷದ ಹಿಂದೆ ಕಾರ್ಮಿಕರಿಗೆ ಎಂಟು ಗಂಟೆಯ ಅವಧಿ ನೀಡಿದ್ದು ಅಚ್ಚರಿ ಮೂಡಿಸಿದಂತೆಯೇ, ಮನೆಕೆಲಸದವರಿಗೆ ವೇತನ ಮತ್ತು ಸಮಯ ನಿಗದಿ ಅಚ್ಚರಿ ಮೂಡಿಸುತ್ತದೆ. ಈ ನಿರ್ಧಾರ ಸರಿಯಾಗಿದೆ.
ಪ್ರಶ್ನೆ: ಶೋಷಿತ ವರ್ಗದ ಸಮುದಾಯಗಳು ರಾಜ್ಯಾದ್ಯಂತ ಹರಡಿವೆ. ನೀವು ಅವರ ಪರ ನಿಲ್ಲಲು ಸಾಧ್ಯವೇ?
ಉತ್ತರ:ಶೋಷಿತ ವರ್ಗದ ಜನರು ಬೇರೆ ಯಾವುದೋ ಗ್ರಹದಿಂದ ಬಂದವರಲ್ಲ. ಅವರು ನನ್ನ ಸಹೋದರರು. ಇತಿಹಾಸದಲ್ಲಿ ನಡೆದ ತಪ್ಪುಗಳಿಂದ, ಜಾತಿವಾದಿ ನೀತಿಯಿಂದಾಗಿ ಶೋಷಿತರು ಸೃಷ್ಟಿಯಾಗಿದ್ದಾರೆ. ಅದನ್ನು ಸರಿ ಮಾಡುವುದು ನನ್ನ ಕರ್ತವ್ಯ, ನಮ್ಮ ಕರ್ತವ್ಯ. ಎಲ್ಲರೂ ಅಭಿವೃದ್ಧಿ ಹೊಂದುವ ತನಕ, ನಮ್ಮ ಪ್ರಯತ್ನ ಮುಂದುವರೆಸುತ್ತೇವೆ.