ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಮೊದಲ ಬಾರಿಗೆ ಭಯೋತ್ಪಾದನೆಯ ವಿರುದ್ಧ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಿದ್ದಾರೆ. ವಿಶ್ವಸಂಸ್ಥೆಯ ಸೆಕ್ಯುರಿ ಕೌನ್ಸಿಲ್ನಲ್ಲಿ ಮಾತನಾಡಿದ ಅವರು, ಲಷ್ಕರ್-ಇ-ತೊಯ್ಬಾ ಮತ್ತು ಜೈಶ್-ಇ-ಮೊಹಮ್ಮದ್ನಂತಹ ಭಯೋತ್ಪಾದಕ ಸಂಘಟನೆಗಳು ಕೆಲ ರಾಷ್ಟ್ರಗಳ ಪ್ರೋತ್ಸಾಹದಿಂದ ಅಫ್ಘಾನಿಸ್ತಾನ ಹಾಗೂ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದರು.
ಪ್ರಸ್ತುತ ಸಂದರ್ಭದಲ್ಲಿ ಕೋವಿಡ್ ದೊಡ್ಡ ಭಯೋತ್ಪಾದನೆ. ಕೋವಿಡ್ ಇರುವವರೆಗೂ ನಾವು ಯಾರೂ ಸುರಕ್ಷಿತವಲ್ಲ. ಆದರೆ, ಕೆಲ ರಾಷ್ಟ್ರಗಳ ನಮ್ಮ ಸಾಮರ್ಥ್ಯವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಪರೋಕ್ಷವಾಗಿ ವಿರೋಧಿಗಳ ವಿರುದ್ಧ ಬೆಟ್ಟು ಮಾಡಿದರು.
ಜುಲೈ 28 ರಂದು ಟಿಯಾನ್ಜಿನ್ನಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಮುಲ್ಲಾ ಅಬ್ದುಲ್ ಘನಿ ಬರದಾರ್ ನೇತೃತ್ವದ ತಾಲಿಬಾನ್ ನಿಯೋಗವನ್ನು ಭೇಟಿಯಾಗಿದ್ದರು. ಈ ಮೂಲಕ ಅವರು ಭಯೋತ್ಪಾದನೆಗೆ ಬೆಂಬಲ ನೀಡಿದರು. ಈ ವೇಳೆ ಯಿ, ಅಫ್ಘಾನಿಸ್ತಾನವು ಅಫ್ಘಾನ್ ಜನರಿಗೆ ಸೇರಿದ್ದು, ಅದರ ಭವಿಷ್ಯವು ತನ್ನದೇ ಜನರ ಕೈಯಲ್ಲಿರಬೇಕು ಎಂದು ಹೇಳಿದ್ದರು.
ಇದನ್ನೂ ಓದಿ: ಕಾಬೂಲ್ನಲ್ಲಿದ್ದಾರೆ 5,200 ಅಮೆರಿಕ ಯೋಧರು, ಏರ್ಪೋರ್ಟ್ ಸುರಕ್ಷಿತ: US ಆರ್ಮಿ ಮೇಜರ್ ಜನರಲ್
ಅಫ್ಘಾನಿಸ್ತಾನದಿಂದ ಅಮೆರಿಕ ಮತ್ತು ನ್ಯಾಟೋ ಪಡೆಗಳ ಹಿಂತೆಗೆತವು ಅಮೆರಿಕದ ವೈಫಲ್ಯವನ್ನು ತೋರಿಸುತ್ತದೆ. ರಾಷ್ಟ್ರೀಯ ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಸಾಧಿಸಲು ಆಫ್ಘನ್ ಜನರಿಗೆ ಈಗ ಒಂದು ಪ್ರಮುಖ ಅವಕಾಶವಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.