ಬೆಂಡೆಕಾಯಿ ಕೆಜಿಗೆ 200ರೂ: 'ಲೇಡಿ ಫಿಂಗರ್' ಬೆಲೆ ಕೇಳಿ ಬಾಯಿ ಮೇಲೆ ಕೈ ಇಟ್ಟುಕೊಂಡ ಗ್ರಾಹಕರು!
ಲಖನೌದ ದುಬಗ್ಗಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ. ಬೆಂಡೆಕಾಯಿ ಬೆಲೆ ಪ್ರತಿ ಕೆಜಿಗೆ 200 ರೂ.ಗಳಾಗಿದ್ದು ತರಕಾರಿ ಕೊಳ್ಳಲು ಬಂದ ಜನ ಬಾಯಿ ಮೇಲೆ ಬೆರಳಿಟ್ಟುಕೊಳ್ಳತಿದ್ದಾರೆ.
ಬೆಂಡೆಕಾಯಿ ಕೆಜಿಗೆ 200ರೂ
By
Published : Jan 11, 2021, 1:34 PM IST
ಲಖನೌ(ಉತ್ತರಪ್ರದೇಶ): ಚಳಿಯಲ್ಲಿ ನಡುಗುತ್ತಿರೂ ಲಖನೌ ಜನತೆಗೆ ತರಕಾರಿ ಬೆಲೆಗಳು ಬಿಸಿ ಮುಟ್ಟಿಸುತ್ತಿವೆ. ಎಲೆಕೋಸು, ಬಟಾಣಿ, ಪಾಲಕ್ ಸೊಪ್ಪು, ಟೊಮೇಟೊ ಬೆಲೆಗಳೇನೋ ಸ್ಥಿರವಾಗಿವೆ ಆದ್ರೆ, ಬೆಂಡೆಕಾಯಿ ಬೆಲೆ ಮಾತ್ರ 200 ರೂ ಗೆ ಏರಿದೆ.
ಸುಮಾರು 4 ದಿನಗಳಿಂದಲೂ ಈ ಬೆಂಡೆಕಾಯಿ(ಲೇಡಿ ಫಿಂಗರ್) ಬೆಲೆ 200 ರೂಪಾಯಿಯೇ ಇದ್ದು, ಗ್ರಾಹಕರು ಬೆಂಡೆಕಾಯಿ ಬೆಲೆ ಕೇಳಿ ಬಾಯಿ ಮೇಲೆ ಕೈ ಇಟ್ಟು ನಿಟ್ಟುಸಿರು ಬಿಡುತ್ತಿದ್ದಾರೆ.