ಚೆನ್ನೈ (ತಮಿಳುನಾಡು): ಚೆನ್ನೈನಲ್ಲಿ ನಡೆಯುತ್ತಿರುವ ವಾಕೋ ಇಂಡಿಯಾ ಸೀನಿಯರ್ಸ್ ಹಾಗೂ ಮಾಸ್ಟರ್ಸ್ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ದುರಂತ ನಡೆದಿದೆ. ಪಂದ್ಯಾವಳಿಯಲ್ಲಿ ತಲೆಗೆ ಪೆಟ್ಟು ಬಿದ್ದು ಅರುಣಾಚಲ ಪ್ರದೇಶದ ಕಿಕ್ಬಾಕ್ಸರ್ 24 ವರ್ಷದ ಯೋರಾ ತಾಡೆ ಮೃತಪಟ್ಟಿದ್ದಾರೆ.
ಇಲ್ಲಿನ ನೆಹರೂ ಸ್ಟೇಡಿಯಂನಲ್ಲಿ ಚಾಂಪಿಯನ್ಶಿಪ್ನಲ್ಲಿ ಯೋರಾ ತಾಡೆ ಕಳೆದ ಭಾನುವಾರದಿಂದ ಭಾಗವಹಿಸಿದ್ದರು. ಕಾದಾಟದ ವೇಳೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.