ಖಾರ್ಗೋನ್ (ಮಧ್ಯಪ್ರದೇಶ):ನಕಲಿ ನೋಟು ಮುದ್ರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಧ್ಯಪ್ರದೇಶದ ಖಾರ್ಗೋನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ನಾಲ್ಕು ಲಕ್ಷ ರೂ. ಮೌಲ್ಯದ ನೋಟುಗಳು, ಸ್ಕ್ಯಾನರ್, ಪ್ರಿಂಟರ್ ಮತ್ತು ಮುದ್ರಣ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.
ರಾಕೇಶ್ ಅಲಿಯಾಸ್ ಪ್ರಕಾಶ್ ಜಾಧವ್ (32) ಮತ್ತು ವಿಕ್ಕಿ ಅಲಿಯಾಸ್ ವಿವೇಕ್ (25) ಎಂಬುವವರೇ ಬಂಧಿತರ ಆರೋಪಿಗಳು. ಈ ನಕಲಿ ನೋಟು ಮುದ್ರಣದ ಮಾಸ್ಟರ್ ಮೈಂಡ್ ರಾಕೇಶ್ ಎನ್ನಲಾಗಿದೆ. ಇಂಜಿನಿಯರ್ ಆಗಿದ್ದ ಕೊರೊನಾ ಲಾಕ್ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದ. ಬಿಡುವಿನ ವೇಳೆಯಲ್ಲಿ ಆನ್‌ಲೈನ್ ಗೇಮ್‌ಗಳನ್ನು ಆಡುವ ಚಟಕ್ಕೆ ಬಿದ್ದಿದ್ದ. ಆನ್‌ಲೈನ್ ಆಟದ ಚಟ ರಾಕೇಶ್ನನ್ನು ಲಕ್ಷಗಟ್ಟಲೆ ಸಾಲಗಾರನನ್ನಾಗಿ ಮಾಡಿತ್ತು. ಸಾಲ ಮರುಪಾವತಿಸಲು ನಕಲಿ ನೋಟು ಮುದ್ರಿಸುವ ದಂಧೆ ಆರಂಭಿಸಿದ್ದ ಎಂದು ತನಿಖೆ ವೇಳೆ ಬಯಲಿಗೆ ಬಂದಿದೆ.
ಲಾಕ್ಡೌನ್ನಲ್ಲಿ ಕೆಲಸ ಕಳೆದುಕೊಂಡ ಇಂಜಿನಿಯರ್, ನಕಲಿ ನೋಟುಗಳ ಮುದ್ರಣದ ಮೊರೆ ಹೋದ! ಯೂಟ್ಯೂಬ್ ನೋಡಿ ನೋಟು ಮುದ್ರಿಸುವುದು ಕಲಿತ!: ಆನ್‌ಲೈನ್ ಗೇಮ್ ಆಡುವುದರ ಜೊತೆಗೆ ಯೂಟ್ಯೂಬ್ ಸಹ ಆರೋಪಿ ನೋಡುತ್ತಿದ್ದ. ಕೆಲಸ ಕಳೆದುಕೊಂಡು ಸಾಲ ಹೆಚ್ಚಾದ ಮೇಲೆ ರಾಕೇಶ್ ಮನಸ್ಸಿನಲ್ಲಿ ನಕಲಿ ನೋಟುಗಳನ್ನು ಮುದ್ರಿಸುವ ಯೋಚನೆ ಮೂಡಿದೆ. ಅಂತೆಯೇ, ನಕಲಿ ನೋಟು ಮುದ್ರಿಸುವ ಮಾರ್ಗವನ್ನು ಯೂಟ್ಯೂಬ್ ನೋಡಿ ಕಲಿತಿದ್ದ. ಇದರ ಮೂಲಕವೇ ಐನೂರು, ಇನ್ನೂರು ಮತ್ತು ನೂರರ ನಕಲಿ ನೋಟುಗಳನ್ನು ಮುದ್ರಿಸುವುದರಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
8 ಲಕ್ಷ ರೂ. ಖೋಟಾ ನೋಟುಗಳ ಚಲಾವಣೆ: ಆರೋಪಿ ರಾಕೇಶ್ ಎಷ್ಟು ಚತುರನಾಗಿದ್ದನೆಂದರೆ ನಕಲಿ ನೋಟು ಚಲಾವಣೆಗೆ ಗ್ರಾಮೀಣ ಪ್ರದೇಶ ಹಾಗೂ ಪೆಟ್ರೋಲ್ ಪಂಪ್‌ಗಳನ್ನು ಆಯ್ಕೆಕೊಳ್ಳುತ್ತಿದ್ದ. ಅಲ್ಲದೇ, ಅಸಲಿ ತೂಕದ ನೋಟಿಗೆ ತೂಕಕ್ಕೆ 85 ರಿಂದ 90 ಗ್ರಾಂನ ಎ-4 ಅಳತೆಯ ಪೇಪರ್ ಬಳಸಿ ನಕಲಿ ನೋಟು ಮುದ್ರಣ ಮಾಡುತ್ತಿದ್ದ. ರಾಕೇಶ್ ಮತ್ತು ಆತನ ಸಹಚರರು ಇದುವರೆಗೆ ಮಾರುಕಟ್ಟೆಯಲ್ಲಿ 8 ಲಕ್ಷ ರೂಪಾಯಿ ನಕಲಿ ನೋಟುಗಳನ್ನು ಚಲಾಯಿಸಿದ್ದಾರೆ. ಈ ನಕಲಿ ನೋಟುಗಳ ಚಲಾವಣೆಗಾಗಿ 8 ಜನರ ಪ್ರತ್ಯೇಕ ತಂಡ ಕಾರ್ಯನಿರ್ವಹಿಸುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಜನ್ಮ ದಿನ ಆಚರಿಸಲು ಬಂದು ಜೈಲು ಸೇರಿದ ಖ್ಯಾತ ಯೂಟ್ಯೂಬರ್!