ಎರ್ನಾಕುಲಂ(ಕೇರಳ):ಮಹಿಳೆ ತಾನು ಗರ್ಭ ಧರಿಸಬೇಕೇ ಬೇಡವೇ ಎಂಬುದು ಆಕೆಯ ನಿರ್ಧಾರಕ್ಕೆ ಬಿಟ್ಟಿದ್ದು. ಇದರಲ್ಲಿ ಯಾರೂ ಒತ್ತಾಯ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿತು. ಅವಿವಾಹಿತ ಯುವತಿ ತನ್ನ ಸ್ನೇಹಿತನಿಂದ ಗರ್ಭ ಧರಿಸಿದ್ದು, ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಯ ವೇಳೆ ಕೋರ್ಟ್ ಈ ತೀರ್ಪು ನೀಡಿದೆ.
ಅವಿವಾಹಿತೆಯಾಗಿರುವ ಎಂಬಿಎ ವಿದ್ಯಾರ್ಥಿನಿ ತನ್ನ ಸ್ನೇಹಿತನ ಸಖ್ಯದಿಂದ ಗರ್ಭ ಧರಿಸಿದ್ದು, 26 ವಾರಗಳ ಗರ್ಭಿಣಿಯಾಗಿದ್ದಾರೆ. ಅಚ್ಚರಿ ಅಂದ್ರೆ ತಾನು ಗರ್ಭಿಣಿಯಾಗಿದ್ದೇನೆ ಎಂಬುದು ಯುವತಿಗೆ ಕಳೆದ ತಿಂಗಳಷ್ಟೇ ಗೊತ್ತಾಗಿತ್ತು. ಹೀಗಾಗಿ ಯುವತಿ ತನಗೆ ಈಗಲೇ ಮಗುವಿಗೆ ಜನ್ಮ ನೀಡಲು ಇಷ್ಟವಿಲ್ಲ. ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಳು.
ವಿಚಾರಣೆ ನಡೆಿಸಿದ ಕೋರ್ಟ್ ಹೆಣ್ಣು ಜನ್ಮ ನೀಡುವ, ತಿರಸ್ಕರಿಸುವ ಸಂಪೂರ್ಣ ಹಕ್ಕು ಹೊಂದಿದ್ದಾಳೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇಷ್ಟವಿಲ್ಲದ ಗರ್ಭ ಧರಿಸಿದರೆ ಆಕೆ ಮಾನಸಿಕವಾಗಿ ಕುಗ್ಗುತ್ತಾಳೆ. ಹೀಗಾಗಿ ಆಕೆಯ ಆಯ್ಕೆಗೆ ಅವಕಾಶವಿದೆ ಎಂದು ಹೇಳಿತು.