ಔರಂಗಾಬಾದ್: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪಕ್ಷಗಳನ್ನು ಒಗ್ಗೂಡಿಸಲು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ಒಂದು ದಿನದ ನಂತರ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಪ್ರಯೋಗಗಳನ್ನು ಅವರು ಈ ಮೊದಲೂ ಮಾಡಿದ್ದಾರೆ. ಆದ್ರೆ ಅವು ವಿಫಲವಾಗಿವೆ ಎಂದಿದ್ದಾರೆ.
ಔರಂಗಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಈ ರೀತಿ ಭೇಟಿಯಾಗುವುದು ಹೊಸದಲ್ಲ. ರಾವ್ ಅವರು 2014 ಮತ್ತು 2019 ರ ನಡುವೆ ಸಿಎಂ ಆಗಿದ್ದಾಗಲೂ ಭೇಟಿಯಾಗಿದ್ದರು ಎಂದರು.
ಇದನ್ನೂ ಓದಿ: ಆಶಿಶ್ ಮಿಶ್ರಾಗೆ ಜಾಮೀನು: ಸುಪ್ರೀಂಕೋರ್ಟ್ ಮೊರೆ ಹೋದ ರೈತರ ಕುಟುಂಬಸ್ಥರು