ಕೊಯಮತ್ತೂರು (ತಮಿಳುನಾಡು):ದೇಶದ ಪ್ರಗತಿಗೆ ಆದಾಯ ತೆರಿಗೆ ಬಹಳ ಮುಖ್ಯ ಹಾಗೂ 21ನೇ ಶತಮಾನವು ಜ್ಞಾನ ಆಧಾರಿತ ಯುಗವಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕೊಯಂಬತ್ತೂರಿನಲ್ಲಿ ಇಂದು ನಡೆದ ಸುಗುಣ ಗ್ರೂಪ್‌ನ ಸಂಸ್ಥಾಪಕ ದಿ.ಜಿ.ರಾಮಸ್ವಾಮಿ ನಾಯ್ಡು ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ರಾಮಸ್ವಾಮಿ ಪ್ರತಿಮೆ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ಸಿಎಂ ಬೊಮ್ಮಾಯಿ, ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕು ಸಾಧ್ಯ ಎಂಬ ಕನ್ನಡ ಮಾತುಗಳೊಂದಿಗೆ ಅವರು ತಮ್ಮ ಭಾಷಣ ಆರಂಭಿಸಿದರು. ರಾಮಸ್ವಾಮಿ ಅವರನ್ನು ಯಶಸ್ವಿ ಉದ್ಯಮಿ ಎಂದು ಕೊಂಡಾಡಿದರು. ಅಲ್ಲದೇ, ಕೊಯಮತ್ತೂರಿನಲ್ಲಿ ತಾವು ಕಳೆದ ದಿನಗಳ ನೆನಪುಗಳನ್ನು ಹಂಚಿಕೊಂಡರು.