ಕರ್ನಾಟಕ

karnataka

ETV Bharat / bharat

ಕೆಸರು ಗದ್ದೆಯಲ್ಲಿ ಕರಾವಳಿ ಯುವಕನೇ ಕಿಂಗ್‌.. ದೇಸಿ ಕಂಬಳದ ‘ಉಸೇನ್ ಬೋಲ್ಟ್​​​’ ಶ್ರೀನಿವಾಸ್​​ ಗೌಡ ಪಾರುಪತ್ಯ!! - kambala-star-srinivas-gowda

ಕಳೆದ ಕೆಲ ವಾರದ ಹಿಂದೆ ವೇಣೂರಿನಲ್ಲಿ‌ ನಡೆದ ಕಂಬಳದಲ್ಲಿ 8.89 ಸೆಕೆಂಡು​​ಗಳಲ್ಲಿ 100 ಮೀಟರ್​ ಗುರಿ ಮುಟ್ಟಿಸಿದ್ದರೆ, ಮಾರ್ಚ್ 28ರಂದು ಬಂಟ್ವಾಳದ ಕಕ್ಯಪದವು ಸತ್ಯ-ಧರ್ಮ ಜೋಡುಕೆರೆಯ ಕಂಬಳದಲ್ಲಿ 100 ಮೀಟರ್ ಗುರಿಯನ್ನು ಕೇವಲ 8.78 ಸೆಕೆಂಡ್​​​ಗಳಲ್ಲಿ ತಲುಪಿ ಗಮನ ಸೆಳೆದಿದ್ದಾರೆ..

kambala-star-srinivas-gowda
ಕಂಬಳ ಗದ್ದೆಯ ‘ಉಸೇನ್ ಬೋಲ್ಟ್​​​’ ಶ್ರೀನಿವಾಸ್​​ ಗೌಡ

By

Published : Apr 14, 2021, 6:08 AM IST

ಮಂಗಳೂರು (ದಕ್ಷಿಣ ಕನ್ನಡ) :ಕರಾವಳಿ ಕಂಬಳದಲ್ಲಿ ಕಟ್ಟುಮಸ್ತಿನ ದೇಹದ ಶ್ರೀನಿವಾಸ್​ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಇವರು ಕಂಬಳ ಗದ್ದೆಯ ಉಸೇನ್ ಬೋಲ್ಟ್ ಅಂತಾನೇ ಫೇಮಸ್. ಕಂಬಳದಲ್ಲಿ ಕೋಣಗಳನ್ನು ಓಡಿಸುವಲ್ಲಿ ಇವರದ್ದು ವಿಶೇಷ ಹೆಸರು. ಹಿಂದೊಮ್ಮೆ ಇವರ ದಾಖಲೆಯ ಓಟ ಕಂಡು ಇಡೀ ದೇಶವೇ ಇವರತ್ತ ನೋಡುವಂತಾಗಿತ್ತು.

ಕಂಬಳ ಗದ್ದೆಯ ‘ಉಸೇನ್ ಬೋಲ್ಟ್​​​’ ಶ್ರೀನಿವಾಸ್​​ ಗೌಡ..

ಕಳೆದ 8 ವರ್ಷಗಳಿಂದ ಕಂಬಳ ಓಟಗಾರನಾಗಿ ಶ್ರೀನಿವಾಸ್​ ಗೌಡ ಗುರುತಿಸಿಕೊಂಡರೂ, 2020 ಫೆಬ್ರವರಿ 1ರಂದು ಮಂಗಳೂರಿನ ಐಕಳಬಾವ ಕಾಂತಬಾರೆ-ಬೂದಬಾರೆ ಜೋಡುಕರೆ ಕಂಬಳದಲ್ಲಿ ಮಾಡಿರುವ ಸಾರ್ವಕಾಲಿಕ ದಾಖಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವ್ರಿಗೆ ಜನಪ್ರಿಯತೆ ತಂದುಕೊಟ್ಟಿದೆ.

ಹಿರಿಯ ವಿಭಾಗದಲ್ಲಿ 142.50 ಮೀಟರ್ ಉದ್ದದ ಕಂಬಳದ ಕೆರೆಯನ್ನು ಇವರು ಕೇವಲ 13.46 ಸೆಕೆಂಡ್​​​​ಗಳಲ್ಲಿ ಗುರಿ ಮುಟ್ಟಿ ದಾಖಲೆ ಬರೆದಿದ್ದರು. ಇದೀಗ ತಮ್ಮದೇ ದಾಖಲೆಯನ್ನು ಮುರಿದು ಮತ್ತೆ ಸುದ್ದಿಯಲ್ಲಿದ್ದಾರೆ.

ಕಳೆದ ಕೆಲ ವಾರದ ಹಿಂದೆ ವೇಣೂರಿನಲ್ಲಿ‌ ನಡೆದ ಕಂಬಳದಲ್ಲಿ 8.89 ಸೆಕೆಂಡು​​ಗಳಲ್ಲಿ 100 ಮೀಟರ್​ ಗುರಿ ಮುಟ್ಟಿಸಿದ್ದರೆ, ಮಾರ್ಚ್ 28ರಂದು ಬಂಟ್ವಾಳದ ಕಕ್ಯಪದವು ಸತ್ಯ-ಧರ್ಮ ಜೋಡುಕೆರೆಯ ಕಂಬಳದಲ್ಲಿ 100 ಮೀಟರ್ ಗುರಿಯನ್ನು ಕೇವಲ 8.78 ಸೆಕೆಂಡ್​​​ಗಳಲ್ಲಿ ತಲುಪಿ ಗಮನ ಸೆಳೆದಿದ್ದಾರೆ.

ಅಷ್ಟೇ ಅಲ್ಲ, ಕಂಬಳ ಗದ್ದೆಯಲ್ಲಿ ಹಲವು ದಾಖಲೆ ಬರೆದಿರುವ ಇವರಿಗೆ ಸಿಎಂ ಯಡಿಯೂರಪ್ಪ 3 ಲಕ್ಷ ರೂ. ನಗದು ಬಹುಮಾನ ನೀಡಿದ್ದರು. ಈ ಬಾರಿಯ 7 ಕಂಬಳಗಳಲ್ಲಿ 18 ಪದಕಗಳನ್ನು ಗೆಲ್ಲುವ ಮೂಲಕ ಅತೀ ಹೆಚ್ಚು ಪದಕ ಪಡೆದ ಕಂಬಳ ಓಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕಳೆದ ವರ್ಷವೂ 15 ಕಂಬಳಗಳಲ್ಲಿ 46 ಪದಕಗಳನ್ನು ಗೆದ್ದು ಚಾಂಪಿಯನ್‌ ಆಗಿ ಹೊರ ಹೊಮ್ಮಿದ್ದರು.

ಶ್ರೀನಿವಾಸ ಗೌಡರ ಸಾಧನೆ ಕಂಡು ಮಹೀಂದ್ರಾ ಗ್ರೂಪ್​ನ ಅಧ್ಯಕ್ಷ ಆನಂದ್ ಮಹೀಂದ್ರಾ ಪ್ರಶಂಸೆ ವ್ಯಕ್ತಪಡಿಸಿದ್ದರು. ಇಂತಹ ಪ್ರತಿಭೆಗೆ ಕ್ರೀಡಾಂಗಣದಲ್ಲೂ ಅವಕಾಶ ನೀಡಬೇಕು ಎಂದು ಸಲಹೆ ಕೊಟ್ಟಿದ್ದರು. ಕೇಂದ್ರ ಕ್ರೀಡಾ ಸಚಿವ ಕಿರನ್ ರಿಜಿಜು ತರಬೇತಿ ನೀಡುವುದಾಗಿಯೂ ತಿಳಿಸಿದ್ದರು.

ABOUT THE AUTHOR

...view details