ಕರ್ನಾಟಕ

karnataka

ETV Bharat / bharat

ಯುವಜನತೆಗೆ ನಿರಂತರ ರೋಜಗಾರ್ ಮೇಳ: 71 ಸಾವಿರ ನೇಮಕಾತಿ ಪತ್ರ ಹಸ್ತಾಂತರಿಸಿದ ಮೋದಿ - ಈಟಿವಿ ಭಾರತ ಕನ್ನಡ

ಜಮ್ಮು ಮತ್ತು ಕಾಶ್ಮೀರ, ಲಡಾಖ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು, ಚಂಡೀಗಢದಲ್ಲಿ ಸಹ ರೋಜ್‌ಗಾರ್ ಮೇಳಗಳನ್ನು ಆಯೋಜಿಸಿ ಸಾವಿರಾರು ಯುವಕರಿಗೆ ಉದ್ಯೋಗಗಳನ್ನು ಹಸ್ತಾಂತರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಉದ್ಯೋಗ ಮೇಳಗಳು ಡಬಲ್ ಎಂಜಿನ್ ಸರ್ಕಾರಗಳ ಡಬಲ್ ಪ್ರಯೋಜನ: ಪ್ರಧಾನಿ ಮೋದಿ
http://10.10.50.85:6060/reg-lowres/22-November-2022/modi-rozgar1_2211newsroom_1669099145_373.jpg

By

Published : Nov 22, 2022, 12:37 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 71,000 ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಲ್ಲಿ ಎನ್‌ಡಿಎ ಆಡಳಿತವಿರುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದೇ ರೀತಿಯ ಅಭಿಯಾನಗಳನ್ನು ನಡೆಸಲಾಗಿದೆ ಎಂದು ಹೇಳಿದರು.

ಇದು ಡಬಲ್ ಎಂಜಿನ್ ಸರ್ಕಾರಗಳ ಡಬಲ್ ಪ್ರಯೋಜನವಾಗಿದೆ. ಯುವಕರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸುವ ಅಭಿಯಾನವು ನಿರಂತರ ರೀತಿಯಲ್ಲಿ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರ ಆಯೋಜಿಸಿದ್ದ ಎರಡನೇ ‘ರೋಜ್‌ಗಾರ್ ಮೇಳ’ (ಉದ್ಯೋಗ ಮೇಳ) ಉದ್ದೇಶಿಸಿ ಮೋದಿ ನುಡಿದರು.

ಇತ್ತೀಚೆಗಷ್ಟೇ ಹಿಮಾಚಲದಲ್ಲಿ ನಡೆದ ಚುನಾವಣೆ ಮತ್ತು ಗುಜರಾತ್‌ನಲ್ಲಿ ಮುಂಬರುವ ಚುನಾವಣೆ ಸೇರಿದಂತೆ ಹಲವು ವಿಧಾನಸಭಾ ಚುನಾವಣೆಗಳಲ್ಲಿ ಡಬಲ್ ಇಂಜಿನ್ ಸರ್ಕಾರ ಬಿಜೆಪಿಗೆ ಪ್ರಚಾರದ ವಿಷಯವಾಗಿದೆ.

ಪ್ರಧಾನಮಂತ್ರಿಗಳು ಒಟ್ಟು 71,056 ಹೊಸ ನೇಮಕಾತಿ ಪತ್ರಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿತರಿಸಿದರು. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಹೊರತುಪಡಿಸಿ ದೇಶಾದ್ಯಂತ 45 ಸ್ಥಳಗಳಲ್ಲಿ ನೇಮಕಾತಿ ಪತ್ರಗಳ ಭೌತಿಕ ಪ್ರತಿಗಳನ್ನು ಹಸ್ತಾಂತರಿಸಲಾಗಿದೆ.

ಕಳೆದ ಒಂದು ತಿಂಗಳಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳು ಸಾವಿರಾರು ನೇಮಕಾತಿ ಪತ್ರಗಳನ್ನು ನೀಡಿವೆ. ಕೆಲ ದಿನಗಳ ಹಿಂದೆ, ಉತ್ತರ ಪ್ರದೇಶ ಸರ್ಕಾರವು ಹಲವಾರು ಯುವಕರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು, ಚಂಡೀಗಢದಲ್ಲಿ ಸಹ ರೋಜ್‌ಗಾರ್ ಮೇಳಗಳನ್ನು ಆಯೋಜಿಸಿ ಸಾವಿರಾರು ಯುವಕರಿಗೆ ಉದ್ಯೋಗಗಳನ್ನು ಹಸ್ತಾಂತರಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಗೋವಾ ಮತ್ತು ತ್ರಿಪುರಾ ಸರ್ಕಾರಗಳು ಕ್ರಮವಾಗಿ ನವೆಂಬರ್ 24 ಮತ್ತು ನವೆಂಬರ್ 28 ರಂದು ರೋಜಗಾರ್ ಮೇಳ ಆಯೋಜಿಸುತ್ತಿವೆ ಎಂದು ಅವರು ಹೇಳಿದರು. ಯುವಕರು ದೇಶದ ದೊಡ್ಡ ಶಕ್ತಿಯಾಗಿದ್ದು, ಅವರ ಪ್ರತಿಭೆಯನ್ನು ರಾಷ್ಟ್ರ ನಿರ್ಮಾಣದಲ್ಲಿ ಬಳಸಿಕೊಳ್ಳುವಂತೆ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಮೋದಿ ಹೇಳಿದರು.

ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಜನರ ನೇಮಕಾತಿಯನ್ನು ಮಿಷನ್ ಮೋಡ್ ನಲ್ಲಿ ಕೈಗೊಳ್ಳುವಂತೆ ಮೋದಿ ಅವರು ಜೂನ್‌ನಲ್ಲಿ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳಿಗೆ ಸೂಚಿಸಿದ್ದರು.

ರೋಜ್‌ಗಾರ್ ಮೇಳದೊಂದಿಗೆ ಪ್ರಧಾನಿ ಮೋದಿ ಮಂಗಳವಾರ ಕರ್ಮಯೋಗಿ ಪ್ರಾರಂಭ್ ಮಾಡ್ಯೂಲ್‌ಗೆ ಚಾಲನೆ ನೀಡಿದರು.

ಇದನ್ನೂ ಓದಿ: ಜಾತಿ, ಧರ್ಮ ಆಧಾರದಲ್ಲಿ ಮತಪಟ್ಟಿಯಿಂದ ಯಾರ ಹೆಸರನ್ನೂ ಕೈಬಿಟ್ಟಿಲ್ಲ: ಚುನಾವಣಾ ಆಯೋಗ

ABOUT THE AUTHOR

...view details