ದೇಶದ ಪ್ರತಿಷ್ಠಿತ ಖಾಸಗಿ ಬ್ಯಾಂಕ್ಗಳಲ್ಲೊಂದಾದ ಕರ್ಣಾಟಕ ಬ್ಯಾಂಕ್‌ನ ದೇಶದ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೆ ಅರ್ಜಿ ಕರೆಯಲಾಗಿದೆ. ಒಟ್ಟು 341 ಹುದ್ದೆಗಳು ಖಾಲಿ ಇದ್ದು, ಆಗಸ್ಟ್ 12ರಿಂದ ಅರ್ಜಿ ಸ್ವೀಕಾರ ಪ್ರಾರಂಭವಾಗಿದೆ. ಆ.26 ರವರೆಗೆ ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳು ಯಾವುವು?:ಮ್ಯಾನೇಜರ್, ಪ್ರೊಬೇಷನರಿ ಆಫೀಸರ್, ಸ್ಪೆಷಲಿಸ್ಟ್ ಆಫೀಸರ್, ಕ್ಲರ್ಕ್, ಆಫೀಸ್ ಅಸಿಸ್ಟೆಂಟ್.
ವಯೋಮಿತಿ:ಆಗಸ್ಟ್ 1ಕ್ಕೆ ಅನ್ವಯವಾಗುವಂತೆ ಗರಿಷ್ಟ ವಯೋಮಿತಿ 28 ವರ್ಷ. ಪರಿಶಿಷ್ಟ ಜಾತಿ ಮತ್ತು ಪ.ಪಂಗಡದವರಿಗೆ ಹೆಚ್ಚುವರಿ 5 ವರ್ಷ ಅಂದರೆ 33 ವರ್ಷ ಗರಿಷ್ಟ ವಯೋಮಿತಿ ನಿಗದಿ.
ವಿದ್ಯಾರ್ಹತೆ:ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ. ಬಿ.ಟೆಕ್, ಎಂ.ಟೆಕ್, ಎಂಸಿಎ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ:ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಸಲ್ಲಿಸಬೇಕಾಗಿದ್ದು, ಸಾಮಾನ್ಯ ವರ್ಗ 800 ರೂ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು 700 ರೂಪಾಯಿ ಶುಲ್ಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ:ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಸೆಪ್ಟಂಬರ್ ತಿಂಗಳಿನಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ದಿನಾಂಕ ನಿಗದಿಯಾಗಿಲ್ಲ.
ಪರೀಕ್ಷಾ ಕೇಂದ್ರಗಳು:ಬೆಂಗಳೂರು, ಮೈಸೂರು, ಹೈದರಾಬಾದ್, ಮುಂಬೈ, ಚೆನ್ನೈ, ದೆಹಲಿ ಮತ್ತು ದೇಶದ ಇತರ ಪ್ರಮುಖ ನಗರಗಳಲ್ಲಿ ಪರೀಕ್ಷೆ.
ಕಾರ್ಯ ನಿರ್ವಹಿಸುವ ಸ್ಥಳ:ಆಯ್ಕೆಯಾದ ಅಭ್ಯರ್ಥಿಗಳು ಸೂಚಿಸಿದ ಶಾಖೆಯಲ್ಲಿ ಅಂದರೆ ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಬೇಕಿದೆ.
ವೇತನ:ಹುದ್ದೆಯ ಆಧಾರದ ಮೇಲೆ ಮಾಸಿಕ ವೇತನ ನಿಗದಿ.
ವರ್ಗವಾರು ವಯೋಮಿತಿ ಸಡಿಲಿಕೆಗಳು, ಪರೀಕ್ಷೆಯ ಪಠ್ಯಕ್ರಮ, ಪರೀಕ್ಷಾ ಮಾದರಿ ಸೇರಿದಂತೆ ಇತರೆ ಹೆಚ್ಚಿನ ಮಾಹಿತಗಾಗಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ www.karnatakabank.comಗೆ ಭೇಟಿ ನೀಡಿ.
ಪದವಿ ಆಗಿದೆಯೇ? ಬೆಂಗಳೂರಿನಲ್ಲಿದೆ ಉದ್ಯೋಗವಕಾಶ:ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯಲ್ಲಿ (ಐಎಸ್ಇಸಿ) ಕಾರ್ಯ ನಿರ್ವಹಿಸಲು ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು (ಎನ್ಎಫ್ಎಚ್ಎಸ್) ಯೋಜನೆ ನಿರ್ವಹಣೆ ಉದ್ದೇಶಕ್ಕೆ ಈ ಹುದ್ದೆಗಳ ಭರ್ತಿ ನಡೆಸುತ್ತಿದೆ. ಹುದ್ದೆಯ ವೇತನ ಸೇರಿ ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.