ಕರ್ನಾಟಕ

karnataka

ETV Bharat / bharat

ಜಿಯೋ ಬಳಕೆದಾರರಿಗೆ Good News: ವಾಟ್ಸ್​ಆ್ಯಪ್​ನಲ್ಲಿ ಲಸಿಕೆ ಲಭ್ಯತೆ ಮಾಹಿತಿ ಉಚಿತ! - ಕೋವಿಡ್​ ಲಸಿಕೆ ಸುದ್ದಿ

ರಿಲಯನ್ಸ್ ಜಿಯೋ ವಾಟ್ಸ್​ಆ್ಯಪ್​ ಚಾಟ್‌ಬಾಟ್ ಮೂಲಕ ಕೋವಿಡ್​ ಲಸಿಕೆ ಲಭ್ಯತೆಯ ಬಗ್ಗೆ ಮಾಹಿತಿ ನೀಡಲು ಪ್ರಾರಂಭಿಸಿದೆ.

jio-users-to-get-covid-19-vaccine-availability-info-via-whatsapp
ಜಿಯೋ ಬಳಕೆದಾರರು ವಾಟ್ಸ್​ಆ್ಯಪ್​ನಲ್ಲಿ ಪಡೆಯಬಹುದು ಕೊರೊನಾ ಲಸಿಕೆ ಲಭ್ಯತೆ ಮಾಹಿತಿ!

By

Published : Jun 9, 2021, 7:17 PM IST

ನವದೆಹಲಿ: ನೀವು ಲಸಿಕೆ ಪಡೆಯಬೇಕಾ? ಹಾಗಾದರೆ ನಿಮ್ಮ ಸೇವೆಗೆ ಜಿಯೋ ಸಿದ್ಧವಾಗಿದೆ. ಜಿಯೋ ಬಳಕೆದಾರರಿಗೆ ಇತರ ಗ್ರಾಹಕ ಸೇವೆಗಳ ಜೊತೆಗೆ ವಾಟ್ಸ್​ಆ್ಯಪ್​ ಚಾಟ್‌ಬಾಟ್ ಮೂಲಕ ಲಸಿಕೆ ಲಭ್ಯತೆಯ ಬಗ್ಗೆ ಮಾಹಿತಿ ನೀಡಲು ಪ್ರಾರಂಭಿಸಿದೆ. ಈ ವಿಷಯವನ್ನು ರಿಲಯನ್ಸ್​ ಜಿಯೋ ತಿಳಿಸಿದೆ.

ಹೊಸ ಸೇವೆಯ ಮೂಲಕ ಕೋವಿಡ್ ಲಸಿಕೆಯ ಲಭ್ಯತೆಯನ್ನ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಒನ್​ಟೈಮ್​ ಪಾಸ್​ವರ್ಡ್​ ಮೂಲಕ ಈ ಮಾಹಿತಿಯನ್ನ ಸುಲಭವಾಗಿ ಪಡೆದುಕೊಳ್ಳಬಹುದು. "ಜಿಯೋ ಬಳಕೆದಾರರು ಈಗ ವಾಟ್ಸ್​ಆ್ಯಪ್​ ರೀಚಾರ್ಜ್ ಮಾಡಲು, ಪಾವತಿ ಮಾಡಲು, ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ಮತ್ತು ಇತರರಲ್ಲಿ ಜಿಯೋ ಚಾಟ್‌ಚಾಟ್​ ಬಾಟ್​​​​ನಲ್ಲಿ ಬಳಸಬಹುದು. ಇದು COVID-19 ಲಸಿಕೆ ಲಭ್ಯತೆಯ ಮಾಹಿತಿಯನ್ನು ಸಹ ಒದಗಿಸುತ್ತಿದೆ ಎಂದು ಮೂಲವು ಸುದ್ದಿಸಂಸ್ಥೆಯೊಂದಕ್ಕೆ ಸ್ಪಷ್ಟಪಡಿಸಿದೆ.

700770007 ನಂಬರ್​ಗೆ ಹಾಯ್​ ಎಂದು ಟೈಪ್​ ಮಾಡುವ ಮೂಲಕ ಸೇವೆಯನ್ನು ಪಡೆಯಬಹುದು. ಚಾಟ್‌ಬಾಟ್ ಇತರ ಮೊಬೈಲ್ ನೆಟ್‌ವರ್ಕ್‌ಗಳಲ್ಲಿನ ಬಳಕೆದಾರರಿಗೆ ಹಾಗೂ ಲಸಿಕೆ-ಸಂಬಂಧಿತ ಮಾಹಿತಿಗಾಗಿ ಮತ್ತು ಜಿಯೋ ಖಾತೆಯನ್ನು ರೀಚಾರ್ಜ್ ಮಾಡಲು ಕೆಲಸ ಮಾಡುತ್ತದೆ. ಇತರ ಅಧಿಕೃತ ಆನ್‌ಲೈನ್ ಪೋರ್ಟಲ್‌ಗಳಂತಲ್ಲದೆ, ಬಳಕೆದಾರರು ಚಾಟ್‌ನಲ್ಲಿ 'ಪಿನ್‌ಕೋಡ್' ಅನ್ನು ಪೋಸ್ಟ್ ಮಾಡುವ ಮೂಲಕ ಮತ್ತು ನೀವಿರುವ ಪ್ರದೇಶದ ಪಿನ್‌ಕೋಡ್ ಟೈಪ್ ಮಾಡುವ ಮೂಲಕ ಲಸಿಕಾ ಕೇಂದ್ರ ಮತ್ತು ಲಭ್ಯತೆಯನ್ನ ತಿಳಿದುಕೊಳ್ಳಬಹುದು.

ಜಿಯೋ ಬಳಕೆದಾರರು ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ಸೇವೆ, ಜಿಯೋ ಸಿಮ್, ಜಿಯೋ ಫೈಬರ್, ಜಿಯೋಮಾರ್ಟ್ ಮತ್ತು ಚಾಟ್​​​ಬಾಟ್​ನಲ್ಲಿ ಅಂತಾರಾಷ್ಟ್ರೀಯ ರೋಮಿಂಗ್ ಸೇವೆಯನ್ನ ಸುಲಭವಾಗಿ ಪಡೆದುಕೊಳ್ಳಬಹುದು. ಜಿಯೋ ಅಲ್ಲದ ನೆಟ್‌ವರ್ಕ್ ಅಥವಾ ನೋಂದಾಯಿಸದ ಸಂಖ್ಯೆಯಿಂದ ಪ್ರವೇಶಿಸಿದರೆ ಖಾತೆ - ಸಂಬಂಧಿತ ಮಾಹಿತಿಯನ್ನು ನೀಡಬೇಕಾಗುತ್ತದೆ.

ಬೇಗನೇ ಬರ್ತೀವಿ, ನೀ ಮನೆಗೆ ಹೋಗಿ ಅಪ್ಪ ಅಂದವರು.. ಅಮ್ಮನ ಬಳಿ ಹೋಗಿ ಬಿಟ್ಟರು

ABOUT THE AUTHOR

...view details