ನವದೆಹಲಿ:ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಜಾವೆಲಿನ್ ಥ್ರೋದಲ್ಲಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸುಮಿತ್ ಆಂಟಿಲ್ ಸೇರಿದಂತೆ ನಾಲ್ವರನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಶುಕ್ರವಾರ ಅಭಿನಂದಿಸಿದರು.
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಆಟಗಾರರನ್ನು ಅಭಿನಂದಿಸಲು ಸಣ್ಣ ಕಾರ್ಯಕ್ರಮವನ್ನು ಆಯೋಜಿಸಿ ಮಾತನಾಡಿದ ಠಾಕೂರ್, ಜಾವೆಲಿನ್ ಭಾರತದಲ್ಲಿ ಕ್ರಿಕೆಟ್ ಬ್ಯಾಟ್ನಷ್ಟು ಜನಪ್ರಿಯವಾಗಲಿ ಎಂದು ಆಶಿಸಿದರು.
ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆದ್ದ ನಂತರ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲೂ ನಾಲ್ವರು ಜಾವೆಲಿನ್ ಥ್ರೋ ವಿಭಾಗದಲ್ಲಿ ಪದಕಗಳನ್ನು ಗೆದ್ದಿರುವುದನ್ನೂ ಕೂಡಾ ಅನುರಾಗ್ ಠಾಕೂರ್ ಉಲ್ಲೇಖಿಸಿದ್ದಾರೆ.
ರಾಷ್ಟ್ರೀಯ ಕ್ರೀಡಾ ದಿನದಂದು, ಭಾರತವು ನಾಲ್ಕು ಪದಕಗಳನ್ನು ಗೆದ್ದುಕೊಂಡಿತು ಮತ್ತು ಮೇಜರ್ ಧ್ಯಾನ್ ಚಂದ್ ಜೀ ಅವರಿಗೆ ಇದಕ್ಕಿಂತ ಉತ್ತಮವಾದ ಗೌರವ ನೀಡಲು ಸಾಧ್ಯವಿಲ್ಲ. ಸರ್ಕಾರ ಮತ್ತು ನ್ಯಾಷನಲ್ ಸ್ಪೋರ್ಟ್ಸ್ ಫೆಡರೇಷನ್ ಬೆಂಬಲದೊಂದಿಗೆ ಕ್ರೀಡಾಪಟುಗಳ ಶ್ರಮವೂ ಅಧಿಕವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರೋತ್ಸಾಹವು ಒಂದು ಪ್ರೇರಕ ಶಕ್ತಿಯಾಗಿದೆ ಠಾಕೂರ್ ಹೇಳಿದ್ದಾರೆ.
ಸರ್ಕಾರವು ದೇಶದಲ್ಲಿ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತದೆ. TOPS (Target Olympic Podium Scheme) ಮುಂತಾದ ಯೋಜನೆಗಳ ಮೂಲಕ, ಕ್ರೀಡಾಪಟುಗಳನ್ನು ಕೇಂದ್ರ ಸರ್ಕಾರ ಬೆಂಬಲಿಸುತ್ತಿದೆ ಎಂದು ಅನುರಾಗ್ ಹೇಳಿದ್ದಾರೆ.
ಇದೇ ವೇಳೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ಯಾರಾ ಒಲಿಂಪಿಕ್ಸ್ನ ಪಟುಗಳು ಮಾತನಾಡಿ, ತಮ್ಮ ಅಭಿಪ್ರಾಯವನ್ನು, ಸರ್ಕಾರ ತಮಗೆ ನೀಡಿದ ಬೆಂಬಲದ ಕುರಿತು ಕೆಲ ಮಾತುಗಳನ್ನು ಮಾತನಾಡಿದರು.
ಇದನ್ನೂ ಓದಿ:ಒಳ ಉಡುಪಿನಲ್ಲೇ ರೈಲಿನೊಳಗೆ ತಿರುಗುತ್ತಿರುವ ಜೆಡಿಯು ಶಾಸಕ : ಫೋಟೋ ವೈರಲ್