ನವದೆಹಲಿ: ಭಾರತದೊಂದಿಗೆ ಪಾಲುದಾರಿಕೆಯನ್ನು ಹೆಚ್ಚಿಸಲು ಜಪಾನ್‌ನಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಲಯಗಳ ನಡುವೆ ಸಂಪೂರ್ಣ ಒಪ್ಪಂದವಿದೆ. ಜಪಾನ್ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 5 ಟ್ರಿಲಿಯನ್ ಯೆನ್ ಹೂಡಿಕೆ ಮತ್ತು ಸಾಲ ನೀಡುವ ಗುರಿಯನ್ನು ಹೊಂದಿದೆ ಎಂದು ಜಪಾನ್‌ನ ಮಾಜಿ ಪ್ರಧಾನಿ ಯೊಶಿಹಿಡೆ ಸುಗಾ ಗುರುವಾರ ಹೇಳಿದ್ದಾರೆ.
ಭಾರತದಲ್ಲಿ ಹೂಡಿಕೆಗಳ ನಿಟ್ಟಿನಲ್ಲಿ ಜಪಾನ್‌ನಿಂದ 100 ಸದಸ್ಯರನ್ನು ಒಳಗೊಂಡ ವ್ಯಾಪಾರ ನಿಯೋಗದೊಂದಿಗೆ ಸುಗಾ ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತ-ಜಪಾನ್ @75: ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (CII) ಜಂಟಿಯಾಗಿ ಕೀಡಾನ್ರೆನ್ (ಜಪಾನ್ ಬ್ಯುಸಿನೆಸ್ ಫೆಡರೇಶನ್) ಆಯೋಜಿಸಿದ ಯೆನ್ 5 ಟ್ರಿಲಿಯನ್ ಪಾಲುದಾರಿಕೆ ಕುರಿತು ಭಾರತ - ಜಪಾನ್ ಬ್ಯುಸಿನೆಸ್ ಫೋರಂ ಉದ್ದೇಶಿಸಿ ಅವರು ಮಾತನಾಡಿದ್ದಾರೆ.
ಜಪಾನ್ - ಭಾರತ ಅಸೋಸಿಯೇಷನ್‌ನ ಅಧ್ಯಕ್ಷರೂ ಆಗಿರುವ ಸುಗಾ, ಜಪಾನ್‌ನಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಲಯದ ನಡುವೆ ಭಾರತದೊಂದಿಗೆ ಒಳಗೊಳ್ಳುವಿಕೆ ಮತ್ತು ಪಾಲುದಾರಿಕೆಯನ್ನು ಹೆಚ್ಚಿಸುವ ಬಗ್ಗೆ ಸಂಪೂರ್ಣ ಒಪ್ಪಂದವಿದೆ. ಕಳೆದ ವರ್ಷ ಜಪಾನ್ ಸರ್ಕಾರವು ಭಾರತದೊಂದಿಗಿನ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಮೂಲಕ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 5 ಟ್ರಿಲಿಯನ್ ಯೆನ್ ಹೂಡಿಕೆ ಮತ್ತು ಸಾಲ ನೀಡುವ ಗುರಿಯನ್ನು ಹೊಂದಿದೆ ಎಂದು ಪುನರುಚ್ಚರಿಸಿದರು.
ನಾವು ಭಾರತದೊಂದಿಗಿನ ನಮ್ಮ ಸಂಬಂಧವನ್ನು ಬಲಪಡಿಸಲು ಬಯಸುತ್ತೇವೆ. ನಾವು ಭಾರತದಲ್ಲಿ 5 ಟ್ರಿಲಿಯನ್ ಯೆನ್ ಹೂಡಿಕೆ ಮಾಡುವ ಉದ್ದೇಶವನ್ನು ಸ್ಥಾಪಿಸಿದ್ದೇವೆ. ಭಾರತವು ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಈಗಲೂ ಸಹ ಇದು ವೇಗವಾಗಿ ಬೆಳೆಯುತ್ತಿದೆ. ಜೊತೆಗೆ ಈ ವರ್ಷದ ಅಂತ್ಯದ ವೇಳೆಗೆ ಭಾರತವು ವಿಶ್ವದ ಅತಿದೊಡ್ಡ ಜನಸಂಖ್ಯೆಯಾಗುವ ನಿರೀಕ್ಷೆಯಿದೆ. ನಾನು ಭಾರತದ ಜೀವನೋತ್ಸಾಹವನ್ನು ನೋಡಿದ್ದೇನೆ. ಭಾರತೀಯ ಆರ್ಥಿಕತೆಯ ಗತಿಯನ್ನು ನೇರವಾಗಿ ಅನುಭವಿಸಲು ಸಾಧ್ಯವಾಗಿದೆ ಎಂದು ಸುಗಾ ಹೇಳಿದರು.
ಜಪಾನ್‌ನಲ್ಲಿ ಸಾರ್ವಜನಿಕರು ಮತ್ತು ಖಾಸಗಿ ವಲಯಗಳು ಭಾರತದೊಂದಿಗಿನ ಸಂಬಂಧಗಳನ್ನು ಬಲಪಡಿಸುವ ಪ್ರಾಮುಖ್ಯತೆಯ ಬಗ್ಗೆ ಸಂಪೂರ್ಣ ಒಪ್ಪಂದವನ್ನು ಹೊಂದಿವೆ. ನಿಮ್ಮ ಚಟುವಟಿಕೆಗಳು ನಮ್ಮ ಎರಡು ದೇಶಗಳ ನಡುವಿನ ಆರ್ಥಿಕ ಸಂಬಂಧಗಳ ಸ್ತಂಭಗಳು ಆಗಿರುತ್ತವೆ. ಜಪಾನ್-ಭಾರತ ಸಂಬಂಧಗಳ ಮತ್ತಷ್ಟು ಅಭಿವೃದ್ಧಿ ಮತ್ತು ಗಾಢವಾಗುವಿಕೆಗಾಗಿ ನೀವು (ಭಾರತೀಯ ಉದ್ಯಮದ ಪ್ರತಿನಿಧಿಗಳು) ನಮ್ಮನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೀರಿ ಎಂದು ನಾವು ಭಾವಿಸುತ್ತೇವೆ ಎಂದು ತಿಳಿಸಿದರು.
ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಆರ್.ದಿನೇಶ್ ಮಾತನಾಡಿ, ಉಭಯ ದೇಶಗಳ ನಡುವಿನ ಸಂಬಂಧವು ಸಮಾನ ಮೌಲ್ಯಗಳು, ಪರಸ್ಪರ ಗೌರವ ಮತ್ತು ಸಮೃದ್ಧ ಭವಿಷ್ಯದ ದೃಷ್ಟಿಕೋನದ ಆಧಾರದ ಮೇಲೆ ಎರಡು ದೇಶಗಳಿಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಮಾದರಿಯಾಗಿದೆ. ನಾವೀನ್ಯತೆ ಮತ್ತು ತಂತ್ರಜ್ಞಾನವು ಜಪಾನ್ ಮತ್ತು ಭಾರತದ ಭವಿಷ್ಯದ ಸಹಯೋಗಕ್ಕೆ ಪ್ರಮುಖವಾಗಿದೆ. ನಮ್ಮ ಎರಡೂ ಆರ್ಥಿಕತೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:2026ಕ್ಕೆ ಭಾರತದ E-commerce 150 ಬಿಲಿಯನ್ ಡಾಲರ್ಗೆ ಹೆಚ್ಚಳವಾಗುವ ನಿರೀಕ್ಷೆ