ಜಲಂಧರ್: ಅಡುಗೆ ಅನಿಲದ ಸೋರಿಯಿಂದ ಬೆಂಕಿ ಹೊತ್ತಿಕೊಂಡು ಪತಿ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಹೆಂಡತಿಗೆ ಸುಟ್ಟಗಾಯಗಳಾಗಿರುವ ಘಟನೆ ಲಮ್ಮಾ ಗ್ರಾಮದ ಚೌಕ್ ಪ್ರದೇಶದಲ್ಲಿ ನಡೆದಿದೆ.
ಜಲಂಧರ್ ಕಮಿಷನರೇಟ್ ಎಡಿಸಿಪಿ ವಾನ್ ಸೊಹೈಲ್ ಮಿರ್ ಈ ಬಗ್ಗೆ ಮಾಹಿತಿ ನೀಡಿದ್ದು, ಬಿಹಾರದ ವಲಸಿಗ ರಾಜ್ ಕುಮಾರ್ ಇಲ್ಲಿ ಬಾಡಿಗೆ ಮನೆ ತೆಗೆದುಕೊಂಡು ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಗ್ಯಾಸ್ ಅವರ ಕೋಣೆಯಲ್ಲಿ ರಾತ್ರಿಯಿಡೀ ಸೋರಿಕೆಯಾಗಿದೆ. ಇದರ ಬಗ್ಗೆ ಅರಿವಿರದೇ ಬೆಳಗ್ಗೆ ಎಂದಿನಂತೆ ಗ್ಯಾಸ್ ನಲ್ಲಿ ಅಡುಗೆ ಮಾಡಲು ಬೆಂಕಿ ಹಚ್ಚಿದಾಗ ದಿಢೀರನೆ ಬೆಂಕಿ ಆವರಿಸಿ ಇಡೀ ಮನೆ ಸುಟ್ಟುಹೋಗಿದೆ ಎಂದು ತಿಳಿಸಿದ್ದಾರೆ.