ಅಮರಾವತಿ: ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ (YSRCP) ಭರ್ಜರಿ ಜಯ ಸಾಧಿಸಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಪಕ್ಷವು ಮಂಡಲ್ ಪರಿಷತ್ ಪ್ರಾದೇಶಿಕ ಕ್ಷೇತ್ರಗಳಲ್ಲಿ (MPTC) ಶೇಕಡಾ 90 ರಷ್ಟು ಮತ್ತು ಜಿಲ್ಲಾ ಪರಿಷತ್‌ನ ಪ್ರಾದೇಶಿಕ ಕ್ಷೇತ್ರಗಳಲ್ಲಿ (ZPTC) ಶೇಕಡಾ 99 ರಷ್ಟು ಗೆಲುವು ಸಾಧಿಸಿದೆ.
ಏಪ್ರಿಲ್ 8 ರಂದು 515 ZPTC ಮತ್ತು 7,220 MPTC ಗಳಿಗೆ ಚುನಾವಣೆ ನಡೆಸಲಾಗಿತ್ತು. ಏಪ್ರಿಲ್ 10 ರಂದು ಚುನಾವಣಾ ಫಲಿತಾಂಶ ಘೋಷಿಸಲು ಚುನಾವಣಾ ಆಯೋಗ ನಿರ್ಧರಿಸಿತ್ತು. ಆದರೆ, ಚುನಾವಣಾ ಆಯೋಗ ವೇಳಾಪಟ್ಟಿ ಘೋಷಿಸಿದ ಬಳಿಕ ರಾಜ್ಯ ಸರ್ಕಾರವು ಮಾದರಿ ನೀತಿ ಸಂಹಿತೆ ಪಾಲಿಸಿಲ್ಲ ಎಂದು ಆರೋಪಿಸಿ ತೆಲುಗುದೇಶಂ ಪಕ್ಷ ಮತ್ತು ಬಿಜೆಪಿ ಆಂಧ್ರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು. ಈ ಹಿನ್ನೆಲೆ ಮತ ಎಣಿಕೆ ಸ್ಥಗಿತಗೊಳಿಸಲಾಗಿತ್ತು.