ಶ್ರೀನಗರ:ಕೊರೊನಾ ಕರ್ಫ್ಯೂ ಸಂದರ್ಭದಲ್ಲಿ ಇಸ್ರೇಲ್ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 17 ಯುವಕರನ್ನು ಬಂಧಿಸಿದ್ದ ಜಮ್ಮು-ಕಾಶ್ಮೀರ ಪೊಲೀಸರು ಇದೀಗ ಅವರನ್ನು ರಿಲೀಸ್ ಮಾಡಿದ್ದಾರೆ.
ಜಮ್ಮು-ಕಾಶ್ಮೀರ ಪೊಲೀಸರಿಂದ 17 ಯುವಕರ ಬಂಧನವಾಗಿತ್ತು. ಆದರೆ ಇಂದು ಅವರನ್ನ ಬಿಡುಗಡೆ ಮಾಡಲಾಗಿದೆ. ಪ್ಯಾಲೆಸ್ಟೈನ್ ಪರ ಬರಹ, ಚಿತ್ರ ಬಿಡಿಸಿದ್ದ ಕಲಾವಿದ ಮುದಾಸೀರ್ ಗುಲ್ ಸಹ ಇದರಲ್ಲಿ ಬಂಧನವಾಗಿದ್ದನು.
ಅವರಿಂದ ಮಾಹಿತಿ ಪಡೆದುಕೊಂಡ ಬಳಿಕ ಕುಟುಂಬಗಳಿಗೆ ಹಸ್ತಾಂತರ ಮಾಡಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಕೊರೊನಾ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಈ ವೇಳೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಸೆಕ್ಷನ್ 51 ಉಲ್ಲಂಘನೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯುವಕರು ದಾರಿ ತಪ್ಪದಂತೆ ನೋಡಿಕೊಳ್ಳಲು ಕುಟುಂಬಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
32 ವರ್ಷದ ಗುಲ್, ಆಳುತ್ತಿರುವ ಮಹಿಳೆಯ ಮುಖ ಪಾಲೆಸ್ಟೈನ್ ಧ್ವಜದಲ್ಲಿ ಚಿತ್ರಿಸಲಾಗಿದ್ದು, ನಾವು ಪ್ಯಾಲೆಸ್ಟೈನ್ ಎಂಬ ಪದವನ್ನ ದಪ್ಪವಾಗಿ ಬಿಳಿ ಅಕ್ಷರದಲ್ಲಿ ಬರೆದಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗುಲ್ ತಾಯಿ, ಕೆಲವರು ನಮ್ಮ ಮನೆಗೆ ಬಂದು ಚಿತ್ರ ಬಿಡಿಸುವಂತೆ ತಿಳಿಸಿದ್ದರು ಎಂದಿದ್ದಾರೆ. ಈ ವೇಳೆ ನನ್ನ ಮಗ ನಿರಾಕರಣೆ ಮಾಡಿದ್ದನು. ಆದರೆ ಅವರು ಭಾರತದ ವಿರುದ್ಧ ಇದರಲ್ಲಿ ಏನೂ ಇರುವುದಿಲ್ಲ ಎಂದು ಮನವರಿಕೆ ಮಾಡಿದ್ದರು ಎಂದಿದ್ದಾರೆ.
ಇದನ್ನೂ ಓದಿ: ಗಂಗಾ ನದಿಯಲ್ಲಿ ಮೃತದೇಹ: ಕೇಂದ್ರದಿಂದ ಬಿಹಾರ, ಉತ್ತರ ಪ್ರದೇಶಕ್ಕೆ ನೋಟಿಸ್
ಕಳೆದ ಕೆಲ ದಿನಗಳಿಂದ ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಗಾಜಾ ಸಿಟಿ ಮೇಲೆ ವೈಮಾನಿಕ ದಾಳಿ ನಡೆಸಿರುವ ಇಸ್ರೇಲ್ ಅನೇಕ ಕಟ್ಟಡ ನೆಲಸಮಗೊಳಿಸಿದೆ. ಘಟನೆ ವೇಳೆ ನೂರಾರು ಜನರು ಸಾವನ್ನಪ್ಪಿದ್ದಾರೆ.