ಹೈದರಾಬಾದ್(ತೆಲಂಗಾಣ): ಹೈದರಾಬಾದ್ ಮೂಲದ ಔಷಧ ತಯಾರಕ ಕಂಪನಿ ಹೆಟೆರೊ ಡ್ರಗ್ಸ್ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧಕಾರ್ಯ ಮುಂದುವರೆಸಿರುವುದಾಗಿ ತಿಳಿದು ಬಂದಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಐಟಿ ಅಧಿಕಾರಿಗಳ ವಿವಿಧ ತಂಡ ಸನತ್ನಗರದ ಸಂಸ್ಥೇಯ ಕಾರ್ಪೋರೇಟ್ ಕಚೇರಿ ಮತ್ತು ಜೀಡಿಮೆಟ್ಲಾದಲ್ಲಿರುವ ಉತ್ಪಾದನಾ ಕೇಂದ್ರಗಳ ಮೇಲೆ ದಾಳಿ ನಡೆಸಿ, ಶೋಧಕಾರ್ಯ ನಡೆಸುತ್ತಿವೆ. ಇದರ ಜೊತೆಗೆ ಹೆಟೆರೊ ಸಿಇಒ ಮತ್ತು ನಿರ್ದೇಶಕರ ಕಚೇರಿ ಹಾಗೂ ನಿವಾಸಗಳ ಮೇಲೂ ದಾಳಿ ನಡೆಸಲಾಗಿದ್ದು, ಶೋಧಕಾರ್ಯ ಮುಂದುವರೆದಿದೆ.