ಕರ್ನಾಟಕ

karnataka

By

Published : Oct 23, 2022, 6:59 AM IST

ETV Bharat / bharat

ಇತಿಹಾಸ ಬರೆದ ಇಸ್ರೋ: 36 ಉಪಗ್ರಹಗಳ ಕಕ್ಷೆ ಸೇರಿಸಿದ ಬಹುಭಾರದ LVM3-M2 ರಾಕೆಟ್

ಇಸ್ರೋ ಸಂಸ್ಥೆಯು ಆಂಧ್ರದ ಶ್ರೀಹರಿಕೋಟಾದಿಂದ ತನ್ನ ಅತ್ಯಂತ ಭಾರವಾದ ರಾಕೆಟ್‌ನಲ್ಲಿ ವಾಣಿಜ್ಯ ಬಳಕೆಯ 36 ಬ್ರಾಡ್‌ಬ್ಯಾಂಡ್ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆ ಸೇರಿಸಿದೆ.

satellites carried on the rocket LVM3
ಉಪಗ್ರಹಗಳ ಉಡಾವಣೆ

ಶ್ರೀಹರಿಕೋಟ(ಆಂಧ್ರ ಪ್ರದೇಶ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಭಾನುವಾರ ಮಧ್ಯರಾತ್ರಿ 12.07ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಅತ್ಯಂತ ಭಾರವಾದ ರಾಕೆಟ್ LVM3-M2ಯನ್ನು ಯಶಸ್ವಿಯಾಗಿ ಉಡಾಯಿಸಿತು. ಇದೇ ಮೊದಲ ಬಾರಿಗೆ ಈ ರಾಕೆಟ್‌ನಲ್ಲಿ ವಾಣಿಜ್ಯ ಬಳಕೆಯ 36 ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹಗಳ ಉಡ್ಡಯನ ಮಾಡಿ ಇಸ್ರೋ ಹೊಸ ಇತಿಹಾಸವನ್ನೂ ರಚಿಸಿದೆ.

ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್), ಬಾಹ್ಯಾಕಾಶ ಇಲಾಖೆ ಅಡಿಯಲ್ಲಿರುವ ಕೇಂದ್ರೀಯ ಸಾರ್ವಜನಿಕ ವಲಯದ ಉದ್ಯಮ. ಇಸ್ರೋದ ಎಲ್‌ವಿಎಂ3ನಲ್ಲಿ ಒನ್‌ ವೆಬ್‌ ಲಿಯೊ ಉಪಗ್ರಹಗಳನ್ನು ಉಡಾವಣೆ ಮಾಡಲು ಲಂಡನ್-ಪ್ರಧಾನ ಕಚೇರಿಯ ನೆಟ್‌ವರ್ಕ್‌ ಆಕ್ಸೆಸ್ ಅಸೋಸಿಯೇಟೆಡ್ ಲಿಮಿಟೆಡ್ (ಒನ್ ವೆಬ್‌) ನೊಂದಿಗೆ ಎರಡು ಉಡಾವಣಾ ಸೇವಾ ಒಪ್ಪಂದಗಳಿಗೆ ಸಹಿ ಹಾಕಿತ್ತು. ಒನ್‌ ವೆಬ್‌ ಒಂದು ಖಾಸಗಿ ಉಪಗ್ರಹ ಸಂವಹನ ಕಂಪನಿ. ಇದರಲ್ಲಿ ಭಾರತದ ಭಾರ್ತಿ ಎಂಟರ್‌ಪ್ರೈಸಸ್ ಪ್ರಮುಖ ಹೂಡಿಕೆದಾರ ಮತ್ತು ಷೇರುದಾರ ಕೂಡಾ ಹೌದು.

ವಿಶೇಷತೆ:ಈ ರಾಕೆಟ್ 8,000 ಕೆ.ಜಿ.ವರೆಗಿನ ಉಪಗ್ರಹಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಎಲ್‌ವಿಎಂ 3ನ ಚೊಚ್ಚಲ ವಾಣಿಜ್ಯ ಮಿಷನ್ ಮತ್ತು ಎನ್‌ಎಸ್‌ಐಎಲ್‌ನ ಮೊದಲ ಉಡಾವಣಾ ವಾಹನ ಆಗಿರುವುದರಿಂದ ಈ ಕಾರ್ಯಾಚರಣೆ ಮಹತ್ವ ಪಡೆದಿದೆ. ಬಾಹ್ಯಾಕಾಶ ಸೇವೆಗಳ ಜಾಗತಿಕ ಕಡಿಮೆ-ವೆಚ್ಚದ ಪೂರೈಕೆದಾರರಾಗಿ ಇಸ್ರೋ 31 ಸಣ್ಣ ಉಪಗ್ರಹಗಳನ್ನು ಜೂನ್ 2017ರಲ್ಲಿ ಯುರೋಪಿಯನ್ ರಾಷ್ಟ್ರಗಳಿಗಾಗಿ ಉಡಾವಣೆ ಮಾಡಿತ್ತು.

ಹೊಸ ಮತ್ತು ಅತ್ಯಂತ ಭಾರವಿರುವ ಈ ರಾಕೆಟ್ ಒಂದು ದೊಡ್ಡ ಫ್ಲಾಟ್‌ಬೆಡ್ ಟ್ರಕ್‌ನ ತೂಕಕ್ಕೆ ಸಮಾನವಾದ ನಾಲ್ಕು ಟನ್‌ಗಳ ಉಪಗ್ರಹವನ್ನು ಸಾಗಿಸಬಲ್ಲದು. 2014 ರಲ್ಲಿ, ಭಾರತವು $74 ಮಿಲಿಯನ್ ವೆಚ್ಚದಲ್ಲಿ ಮಂಗಳ ಗ್ರಹಕ್ಕೆ ಉಪಗ್ರಹ ಕಳುಹಿಸಿತ್ತು. ಅಮೆರಿಕ ಬಾಹ್ಯಾಕಾಶ ಸಂಸ್ಥೆಯಾದ NASA ತನ್ನ MAVEN ಮಾರ್ಸ್ ಮಿಷನ್‌ಗೆ $671 ಮಿಲಿಯನ್‌ ಖರ್ಚು ಮಾಡಿತ್ತು.

ಇದನ್ನೂ ಓದಿ:ಇಸ್ರೋದಿಂದ ಅತೀ ಚಿಕ್ಕ ರಾಕೆಟ್​ ಉಡ್ಡಯನ ಯಶಸ್ವಿ; ಅಂತಿಮ ಹಂತದಲ್ಲಿ ದತ್ತಾಂಶ ನಷ್ಟ

ABOUT THE AUTHOR

...view details