ಇಸ್ಲಾಮಾಬಾದ್: ತಮ್ಮ ನಾಯಕ ರಿಜ್ವಿಯನ್ನು ಬಂಧಿಸಿದ ನಂತರ ಪಾಕಿಸ್ತಾನದಲ್ಲಿ ಟಿಎಲ್‌ಪಿ ಉಗ್ರ ಪ್ರತಿಭಟನೆ ನಡೆಸುತ್ತಿದ್ದು, ಅವರ ನೂರಾರು ಬೆಂಬಲಿಗರು ಬೀದಿಗಿಳಿದು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಪಾಕ್ನಲ್ಲಿ ಉಗ್ರ ಸ್ವರೂಪಕ್ಕೆ ತಿರುಗಿದ ಪ್ರತಿಭಟನೆ ತೆಹ್ರೀಕ್-ಎ-ಲ್ಯಾಬೈಕ್ ಪಾಕಿಸ್ತಾನದ (ಟಿಎಲ್‌ಪಿ) ಮುಖ್ಯಸ್ಥ ಸಾದ್ ಹುಸೇನ್ ರಿಜ್ವಿ ಅವರ ಬಂಧನ ವಿರೋಧಿಸಿ ಕಳೆದ ವಾರ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆದ ನಡೆಯುತ್ತಿದೆ. ಈ ಮಧ್ಯೆ ಟ್ವಿಟರ್‌ನಲ್ಲಿ ವಿಡಿಯೋವೊಂದು ಹರಿದಾಡ್ತಿದೆ. ವಿಡಿಯೋದಲ್ಲಿ ರೇಂಜರ್‌ನ ಸಮವಸ್ತ್ರದಲ್ಲಿರುವ ವ್ಯಕ್ತಿಯೋರ್ವ ಪಾಕಿಸ್ತಾನ ಸೇನೆಯನ್ನು ಟಿಎಲ್‌ಪಿಯನ್ನು ಬೆಂಬಲಿಸುವಂತೆ ಕೇಳಿಕೊಳ್ಳುವುದನ್ನು ಕಾಣಬಹುದು. ಆದರೆ, ಟ್ವೀಟ್ ಮಾಡಲಾದ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.
ವ್ಯಕ್ತಿಯೋರ್ವನಿಂದ ವಿಡಿಯೋ ಸಂದೇಶ ಬಿಡುಗಡೆ ವಿಡಿಯೋದಲ್ಲಿರುವ ವ್ಯಕ್ತಿ ಪಾಕಿಸ್ತಾನ ಸೇನೆಯ ಸಿಬ್ಬಂದಿ ತಮ್ಮ ಕೆಲಸ ಉಳಿಸಿಕೊಳ್ಳಲು ಅಥವಾ ಅಗ್ಗದ ಜನಪ್ರಿಯತೆ ಗಳಿಸಲು ಇಸ್ಲಾಂ ಧರ್ಮದ ವಿರುದ್ಧ ಹೋಗಬೇಡಿ ಎಂದು ಹೇಳಿದ್ದಾನೆ. "ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ನಿಮ್ಮ ಕಮಾಂಡರ್‌ಗಳ ಆದೇಶಗಳನ್ನು ನೀವು ಅನುಸರಿಸಬೇಕಾಗಿಲ್ಲ. ನೀವು ಅವರ ಮಾತನ್ನು ಕೇಳಿ ಆದರೆ ಅನುಸರಿಸಬೇಡಿ. ನಿಮ್ಮ ಕಾರ್ಯಗಳು ತೆಹ್ರೀಕ್-ಇ-ಲ್ಯಾಬೈಕ್ ಜನರಿಗೆ ಹಾನಿಯಾಗದಂತೆ ನೋಡಿಕೊಳ್ಳಿ" ಎಂದು ವ್ಯಕ್ತಿ ವಿಡಿಯೋದಲ್ಲಿ ಹೇಳಿದ್ದಾರೆ. ಈ ಮಧ್ಯೆ ಪಾಕ್ನಲ್ಲಿ ಪ್ರತಿಭಟನೆಗಳು ತೀವ್ರ ಸ್ವರೂಪಕ್ಕೆ ತಿರುಗಿದ್ದು, ಇದುವರೆಗೆ ಆರು ಪೊಲೀಸರ ಸಾವಿಗೆ ಕಾರಣವಾಗಿವೆ.
ರಿಜ್ವಿಯನ್ನ ಬಿಡುಗಡೆಗೊಳಿಸುವಂತೆ ಪಾಕ್ನಲ್ಲಿ ಪ್ರತಿಭಟನೆ ಪ್ರವಾದಿಗಳ ಕುರಿತು ಫ್ರಾನ್ಸ್ನ ನಿಯತಕಾಲಿಕೆಯೊಂದು ಅವಹೇಳನಕಾರಿ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿರುವ ಹಿನ್ನೆಲೆ ಪಾಕಿಸ್ತಾನದಲ್ಲಿರುವ ಫ್ರಾನ್ಸ್ ದೇಶದ ರಾಯಭಾರಿಯನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಗಳು ಭುಗಿಲೆದ್ದವು. ಲಾಹೋರ್‌ನಿಂದ ಇಸ್ಲಾಮಾಬಾದ್‌ಗೆ ಪ್ರತಿಭಟನಾ ಮೆರವಣಿಗೆ ಘೋಷಿಸಿದ ನಂತರ ರಿಜ್ವಿಯನ್ನು ಪೊಲೀಸರು ಬಂಧಿಸಿದ್ದು, ತಮ್ಮ ನಾಯಕನನ್ನು ಬಿಡುಗಡೆ ಮಾಡುವಂತೆ ಪ್ರತಿಭಟನಾಕಾರರು ಹೋರಾಟ ತೀವ್ರಗೊಳಿಸಿದ್ದಾರೆ.