ಧನ್ಬಾದ್(ಜಾರ್ಖಂಡ್): ಸೀಬೆ ಮರವೇರಿದ್ದ ಬಾಲಕ ಕಾಲು ಜಾರಿ ಬಿದ್ದಿದ್ದು, ಕೆಳಗಿದ್ದ ಮೂರು ಕಬ್ಬಿಣದ ರಾಡುಗಳು ಆತನ ದೇಹಕ್ಕೆ ಹೊಕ್ಕಿವೆ. ಜಿಲ್ಲೆಯ ಕೋಯಲಾಂಚಲ್ನ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬಾಲಕನ ದೇಹ ಹೊಕ್ಕಿರುವ ರಾಡುಗಳು ವಿಷಯ ತಿಳಿದ ಕೂಡಲೇ ಸ್ಥಳೀಯರು, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸದ್ಯ ಆತನ ಸ್ಥಿತಿ ಗಂಭೀರವಾಗಿದೆ. ಅಸಂಬನಿ ಗ್ರಾಮದ 12 ವರ್ಷದ ಬಾಲಕ ಸೀಬೆ ಹಣ್ಣಿಗಾಗಿ ಮರವೇರಿದ್ದಾನೆ.
ಈ ವೇಳೆ ಕಾಲು ಜಾರಿ ಕೆಳಗೆ ಬಿದ್ದಿದ್ದು, ನೆಲದಲ್ಲಿದ್ದ ರಾಡುಗಳು ಬಾಲಕನ ದೇಹ ಸೇರಿವೆ. ಸ್ಥಳೀಯರು ಬ್ಲೇಡ್ನಿಂದ ರಾಡುಗಳನ್ನು ಕತ್ತರಿಸಿ, ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: Drugs Case: 2ನೇ ದಿನವೂ NCB ವಿಚಾರಣೆಗೆ ಹಾಜರಾದ ಅನನ್ಯಾ ಪಾಂಡೆ
ಈಗಾಗಲೇ ತಂದೆ ತೀರಿಕೊಂಡಿದ್ದು, ಕೂಲಿನಾಲಿ ಮಾಡಿ ತಾಯಿ ಮಗನನ್ನು ಸಾಕುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಈ ಘಟನೆ ಸಂಭವಿಸಿರೋದು ಆಕೆಯನ್ನು ಮತ್ತಷ್ಟು ದುಗುಡಕ್ಕೆ ದೂಡಿದಂತಾಗಿದೆ.