ಹೈದರಾಬಾದ್(ತೆಲಂಗಾಣ):ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ಗೆ ಮಾದಕದ್ರವ್ಯ ಸಾಗಿಸುತ್ತಿದ್ದ ಅಂತಾರಾಷ್ಟ್ರೀಯ ಇಬ್ಬರು ಪೆಡ್ಲರ್ಗಳನ್ನು ಹೈದರಾಬಾದ್ನಲ್ಲಿ ಸೋಮವಾರ ಬಂಧಿಸಲಾಗಿದೆ. ಬಂಧಿತರು ತಮಿಳುನಾಡು ಮೂಲದವರು ಎಂದು ಗುರುತಿಸಲಾಗಿದೆ. 9 ಕೋಟಿ ಮೌಲ್ಯದ 8.5 ಕೆಜಿ ಮಾದಕ ವಸ್ತು ಸೇರಿದಂತೆ ಮತ್ತಿತರ ಮಾದಕದ್ರವ್ಯವನ್ನು ವಶಕ್ಕೆ ಪಡೆಯಲಾಗಿದೆ.
4 ದಿನಗಳ ಹಿಂದೆ ತಮಿಳುನಾಡಿನಿಂದ ಹೈದರಾಬಾದ್ಗೆ ಬಂದ ಪೆಡ್ಲರ್ಗಳು ಇಲ್ಲಿನ ವ್ಯಕ್ತಿಗೆ ಈ ಮಾದಕವಸ್ತುವನ್ನು ಸರಬರಾಜು ಮಾಡಿದ್ದಾರೆ. ಬಳಿಕ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ಗೆ ಕಳುಹಿಸಬೇಕಿದ್ದ ಮಾದಕವಸ್ತುವನ್ನು ಹೈದರಾಬಾದ್ ಮತ್ತು ಪುಣೆಯ ಕೊರಿಯರ್ ಪಾರ್ಸೆಲ್ ಏಜೆನ್ಸಿಗಳ ಮೂಲಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ಗೆ ಸಾಗಿಸಲು ಬಟ್ಟೆಯೊಂದಿಗೆ ಪ್ಲಾಸ್ಟಿಕ್ ಕವರ್ಗಳಲ್ಲಿ ತಲಾ 200 ಗ್ರಾಂ ಡ್ರಗ್ಗಳನ್ನು ಹಾಕಿ ಪೆಟ್ಟಿಗೆಯ ಒಳಗಡೆ ಬಚ್ಚಿಟ್ಟಿದ್ದರು.
ಈ ಮಾಹಿತಿ ಅರಿತ ಪೊಲೀಸರು, ಆರೋಪಿಗಳು ಉಳಿದುಕೊಂಡಿದ್ದ ಲಾಡ್ಜ್ ಮೇಲೆ ದಾಳಿ ಮಾಡಿ, ಇಬ್ಬರನ್ನು ಹಿಡಿದು ಅವರ ಬಳಿಯಿದ್ದ 8.5 ಕಿಲೋಗ್ರಾಂ ಡ್ರಗ್ಸ್, 4 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿದ್ದಾರೆ. ಈ ವರ್ಷ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ಗೆ ಸುಮಾರು 70 ಕೆಜಿ ಡ್ರಗ್ಸ್ ಕಳುಹಿಸಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನಗಳ ಕಾರ್ಗೋದಲ್ಲಿ ಸಾಗಣೆ:ಬಂಧಿತ ಪೆಡ್ಲರ್ಗಳು ಈ ಡ್ರಗ್ಸ್ ಕಳುಹಿಸಲು ನಾನಾ ತಂತ್ರ ರೂಪಿಸುತ್ತಿದ್ದರು. ಪುಣೆ, ಹೈದರಾಬಾದ್ನಲ್ಲಿರುವ ಅಂತಾರಾಷ್ಟ್ರೀಯ ಕೊರಿಯರ್ ಸೇವೆಗಳನ್ನು ಬಳಸಿಕೊಂಡು, ಅದರಲ್ಲಿ ಕಳುಹಿಸಲಾಗುತ್ತಿದ್ದ ಬಟ್ಟೆ, ಬಳೆಯ ಬಾಕ್ಸ್ಗಳು, ಬೇಬಿ ವೇರ್ ಗಿಫ್ಟ್ ಪ್ಯಾಕ್ಗಳು ಇತ್ಯಾದಿಗಳಲ್ಲಿ ಅನ್ನು ರಹಸ್ಯವಾಗಿ ಬಚ್ಚಿಟ್ಟು, ನಕಲಿ ವಿಳಾಸದ ಪುರಾವೆಗಳನ್ನು ನೀಡಿ ಪಾರ್ಸೆಲ್ ಮಾಡಲಾಗುತ್ತಿತ್ತು.
ಓದಿ:ಮೊರ್ಬಿ ಸೇತುವೆ ದುರಂತ: ಸಂತ್ರಸ್ತರಿಗೆ ₹4 ಲಕ್ಷ ಹೆಚ್ಚುವರಿ ಪರಿಹಾರ, ಪುರಸಭೆ ವಿಸರ್ಜನೆ