ಕರೀಂನಗರ, ತೆಲಂಗಾಣ:ಜಿಲ್ಲೆಯಲ್ಲಿ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಸರ್ಕಾರಿ ಕಾಲೇಜ್ವೊಂದರಲ್ಲಿ ಆಯೋಜಿಸಿದ್ದ ಒಂದು ಸಣ್ಣ ಕಾರ್ಯಕ್ರಮದಲ್ಲಿ ಬಾಲಕಿಯೊಬ್ಬಳು ಡ್ಯಾನ್ಸ್ ಮಾಡುತ್ತಲೇ ಪ್ರಾಣ ಕಳೆದುಕೊಂಡಿರುವ ದುಃಖದ ವಿಚಾರ ಬೆಳಕಿಗೆ ಬಂದಿದೆ.
16 ವರ್ಷದ ಬಾಲಕಿ ಸಾವು:ಕರೀಂನಗರ ಜಿಲ್ಲೆಯ ಗಂಗಾಧರ ತಾಲೂಕಿನ ನ್ಯಾಲಕೊಂಡಪಲ್ಲಿಯ ಸರ್ಕಾರಿ ಕಾಲೇಜುವೊಂದರಲ್ಲಿ ಇಂಟರ್ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಾಹಿತಿ ಪ್ರಕಾರ, ಇಲ್ಲಿನ ವೆಂಕಟಾಯಪಲ್ಲಿ ಗ್ರಾಮದ ಗುಂಡು ಅಂಜಯ್ಯ ಮತ್ತು ಶಾರದಾಳ ಅವರ ಪುತ್ರಿ ಪ್ರದೀಪ್ತಿ (16) ಸರ್ಕಾರಿ ಕಾಲೇಜ್ನಲ್ಲಿ ಇಂಟರ್ ಪ್ರಥಮ ವರ್ಷ ಓದುತ್ತಿದ್ದರು.
ಶುಕ್ರವಾರದಂದು ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಿಮಿತ್ತ ಪ್ರದೀಪ್ತಿ ಸಹ ವಿದ್ಯಾರ್ಥಿಗಳೊಂದಿಗೆ ನೃತ್ಯ ಮಾಡುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಕಾಲೇಜಿನ ವೈದ್ಯ ಸಿಬ್ಬಂದಿ ಸಿಪಿಆರ್ ಮಾಡಿಸಿ ಚಿಕಿತ್ಸೆ ಕೊಡಿಸಿದರು. ಆದ್ರೂ ಸಹ ಪ್ರಯೋಜನವಾಗಲಿಲ್ಲ.
ಪ್ರದೀಪ್ತಿಯನ್ನು ಕರೀಂನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯಲಾಗಿತ್ತು. ಆದರೆ ಆಕೆ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಚಿಕ್ಕಂದಿನಿಂದಲೂ ಪ್ರದೀಪ್ತಿ ಅವರ ಹೃದಯದಲ್ಲಿ ರಂಧ್ರವಿದ್ದು, ಶಸ್ತ್ರಚಿಕಿತ್ಸೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದರು. ಪಾಲಕರಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗದೇ ದಿನಗಳನ್ನು ಮುಂದುಡುತ್ತಾ ಬಂದಿದ್ದರು.
ವೈದ್ಯರ ಸಲಹೆಗಳೇನು?: ಹೃದ್ರೋಗದಿಂದ ಬಳಲುತ್ತಿರುವ ಮಕ್ಕಳು ಯಾವುದೇ ಸಂದರ್ಭದಲ್ಲೂ ಅತಿಯಾದ ವ್ಯಾಯಾಮ ಮಾಡಬಾರದು ಎಂದು ಮಕ್ಕಳ ಹೃದ್ರೋಗ ತಜ್ಞ ಡಾ.ಕೋನೇಟಿ ನಾಗೇಶ್ವರ್ ರಾವ್ ಸಲಹೆ ನೀಡಿದ್ದಾರೆ.
ತೀವ್ರ ಪರಿಶ್ರಮಕ್ಕೆ ಒಳಗಾದಾಗ ಹೃದಯ ವೈಫಲ್ಯದ ಅಪಾಯವಿದೆ. ಕರೀಂನಗರದಲ್ಲಿ ಡ್ಯಾನ್ಸ್ ಮಾಡುವಾಗ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಕ್ಕಳಲ್ಲಿ ಸುಮಾರು 50 ವಿಧದ ಹೃದ್ರೋಗಗಳಿವೆ. ಈ ರೋಗಗಳಲ್ಲಿ ಹೃದಯದಲ್ಲಿ ರಂಧ್ರವನ್ನು ಒಳಗೊಂಡಿದೆ. ಈ ರಂಧ್ರದಿಂದ ದೇಹ ಮತ್ತು ಶ್ವಾಸಕೋಶಕ್ಕೆ ಹೋಗುವ ರಕ್ತನಾಳಗಳಲ್ಲಿ ಅಡಚಣೆಗಳಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.