ಅಲಪ್ಪುಳ(ಕೇರಳ): ಹೈಕೋರ್ಟ್ ನ್ಯಾಯಾಧೀಶರುಗಳ 'ಒಳಉಡುಪು ಕೇಸರಿ' ಎಂದು ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ನಾಯಕ ಯಾಹ್ಯಾ ತಂಗಳ್ ವಿವಾದಿತ ಹೇಳಿಕೆ ನೀಡಿದ್ದಾನೆ. ಇತ್ತೀಚೆಗೆ ಪಿಎಫ್‌ಐ ನಡೆಸಿದ ರ್‍ಯಾಲಿಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮೀಯರ ವಿರುದ್ಧ ಬಾಲಕನೋರ್ವ ಸಂಘಟನೆಯ ಕಾರ್ಯಕರ್ತನ ಹೆಗಲ ಮೇಲೆ ಕುಳಿತು ಅತ್ಯಂತ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕೇರಳ ಹೈಕೋರ್ಟ್, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಿಎಫ್‌ಐ ನಾಯಕನೋರ್ವ ಇದೀಗ ನ್ಯಾಯಾಧೀಶರ ವಿರುದ್ಧವೇ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾನೆ.
ಅಲಪ್ಪುಳಾದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ತಂಗಳ್, 'ಇತ್ತೀಚೆಗಿನ ದಿನಗಳಲ್ಲಿ ನ್ಯಾಯಾಲಯಗಳಿಗೆ ಬಹುಬೇಗನೆ ಆಘಾತ ಉಂಟಾಗುತ್ತಿದೆ. ಅಲಪ್ಪುಳಾದಲ್ಲಿ ನಡೆದ ರ್ಯಾಲಿಯಲ್ಲಿ ಮೊಳಗಿದ ಘೋಷಣೆಗಳನ್ನು ಕೇಳಿ ಹೈಕೋರ್ಟ್ ನ್ಯಾಯಾಧೀಶರಿಗೆ ಆಘಾತವಾಗಿದೆ. ಇದಕ್ಕೇನು ಕಾರಣ ಗೊತ್ತೇ? ಏಕೆಂದರೆ, ಅವರ ಒಳಉಡುಪು ಕೇಸರಿ. ಒಳಉಡುಪು ಕೇಸರಿಯಾಗಿರುವ ಕಾರಣ ಬೇಗನೆ ಬಿಸಿಯಾಗುತ್ತದೆ. ಅದು ನಿಮಗೆ ಸುಟ್ಟಿರುವ ಅನುಭವ ನೀಡುವುದಲ್ಲದೆ ತೊಂದರೆ ಕೊಡುತ್ತದೆ' ಎಂದು ಹೇಳಿದ್ದಾನೆ.