ಕರ್ನಾಟಕ

karnataka

ETV Bharat / bharat

ರಷ್ಯಾ-ಉಕ್ರೇನ್​ ನಡುವೆ ಬಿಕ್ಕಟ್ಟು: ಭಾರತದ ಕಚ್ಚಾ ತೈಲ ಆಮದು ವೆಚ್ಚ ದ್ವಿಗುಣ

ಮಾರ್ಚ್ 31ರಂದು ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಭಾರತದ ಕಚ್ಚಾ ತೈಲ ಆಮದು ವೆಚ್ಚ​ ದ್ವಿಗುಣಗೊಂಡು $119 ಶತಕೋಟಿಗೆ ತಲುಪಿದೆ.

ತೈಲ
ತೈಲ

By

Published : Apr 24, 2022, 5:47 PM IST

ನವದೆಹಲಿ: ರಷ್ಯಾ-ಉಕ್ರೇನ್​ ದೇಶಗಳ ನಡುವಿನ ಭೀಕರ ಯುದ್ಧದ ಪರಿಣಾಮ ಜಾಗತಿಕವಾಗಿ ಇಂಧನ ಬೆಲೆಗಳು ಗಗನಕ್ಕೇರಿವೆ. 2021-22 ಹಣಕಾಸು ವರ್ಷದಲ್ಲಿ ಭಾರತದ ಕಚ್ಚಾ ತೈಲ ಆಮದು ವೆಚ್ಚ ಸುಮಾರು $119 ಶತಕೋಟಿಗೆ ತಲುಪಿದ್ದು, ದ್ವಿಗುಣಗೊಂಡಿದೆ. ಪೆಟ್ರೋಲಿಯಂ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಘಟಕದ ಅಂಕಿಅಂಶಗಳ ಪ್ರಕಾರ, ವಿಶ್ವದ ಮೂರನೇ ಅತಿದೊಡ್ಡ ತೈಲ ಬಳಸುವ ಮತ್ತು ಆಮದು ಮಾಡಿಕೊಳ್ಳುವ ರಾಷ್ಟ್ರ ಭಾರತ 2021-22ರಲ್ಲಿ (ಏಪ್ರಿಲ್ 2021 ರಿಂದ ಮಾರ್ಚ್ 2022) $119.2 ಶತಕೋಟಿ ಹಣವನ್ನು ತೈಲದ ಮೇಲೆ ಖರ್ಚು ಮಾಡಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಇದು $62.2 ಶತಕೋಟಿಯಷ್ಟು ಹೆಚ್ಚಾಗಿದೆ.

14 ವರ್ಷಗಳ ಗರಿಷ್ಠ ಮಟ್ಟಕ್ಕೆ ಮಾರ್ಚ್‌ನಲ್ಲಿ $13.7 ಶತಕೋಟಿ ಹಣವನ್ನು ಭಾರತ ತೈಲ ಆಮದಿನ ಮೇಲೆ ವ್ಯಯಿಸಿದೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ $8.4 ಶತಕೋಟಿಯನ್ನು ಖರ್ಚು ಮಾಡಿದೆ. ಜನವರಿಯಲ್ಲಿ ತೈಲ ಬೆಲೆಗಳು ಏರಿಕೆಯಾಗಲು ಪ್ರಾರಂಭವಾಗಿದೆ. ಮಾರ್ಚ್ ಆರಂಭದಲ್ಲಿ ಪ್ರತಿ ಬ್ಯಾರೆಲ್‌ ಕಚ್ಚಾ ತೈಲಕ್ಕೆ $140 ತಲುಪುವ ಮೊದಲು ಹಿಂದಿನ ತಿಂಗಳಲ್ಲಿ ಪ್ರತಿ ಬ್ಯಾರೆಲ್‌ಗೆ $100ರ ಗಡಿಯಲ್ಲಿ ವ್ಯವಹಾರ ನಡೆಯುತ್ತಿತ್ತು. ಈಗ ಪ್ರತಿ ಬ್ಯಾರೆಲ್‌ಗೆ ಸುಮಾರು $106 ಇದೆ.

ದೇಶವು 2021-22ರಲ್ಲಿ 202.7 ಮಿಲಿಯನ್ ಟನ್‌ಗಳಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ 194.3 ಮಿಲಿಯನ್ ಟನ್‌ಗಳಿಂದ ಇದು ಹೆಚ್ಚಿದೆ. ಆದರೆ, 2019-20 ರಲ್ಲಿ ಸಾಂಕ್ರಾಮಿಕ ಪೂರ್ವದ 214.1 ಮಿಲಿಯನ್ ಟನ್‌ಗಳ ಬೇಡಿಕೆಗಿಂತ ಕಡಿಮೆಯಾಗಿದೆ. ವಿಶ್ವವು ಈಗ ಮತ್ತೆ ನಿಧಾನವಾಗಿ ಮೊದಲಿನಂತೆ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗುತ್ತಿದೆ. ಈ ನಡುವೆ ಬೇಡಿಕೆ-ಪೂರೈಕೆಯಲ್ಲಿ ಹೆಚ್ಚುತ್ತಿರುವ ಅಸಮತೋಲನವು ಒಂದು ರೀತಿಯಲ್ಲಿ ತೈಲ ಬೆಲೆ ಏರಿಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಇದನ್ನೂ ಓದಿ:ಸಣ್ಣ ಆನ್‌ಲೈನ್ ಪಾವತಿಯಿಂದ ದೊಡ್ಡ ಡಿಜಿಟಲ್ ಆರ್ಥಿಕತೆ ಸೃಷ್ಟಿ: ಮೋದಿ

ABOUT THE AUTHOR

...view details