ಕರ್ನಾಟಕ

karnataka

ETV Bharat / bharat

5 ಐಟಿ ಕಂಪನಿಗಳಿಂದ 96,000 ಉದ್ಯೋಗಿಗಳ ನೇಮಕಾತಿಗೆ ಯೋಜನೆ: ನಾಸ್ಕಾಮ್

ಕೈಗಾರಿಕೆಗಳಾದ್ಯಂತ, ವಿಶೇಷವಾಗಿ ಟೆಕ್ ವಲಯದಲ್ಲಿ ಯಾಂತ್ರೀಕೃತಗೊಂಡ ಲಾಭಗಳು ಹೆಚ್ಚಾಗುವುದರಿಂದ ದೇಶೀಯ ಸಾಫ್ಟ್‌ವೇರ್ ಸಂಸ್ಥೆಗಳು 2022 ರ ವೇಳೆಗೆ 3 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಲು ಸಜ್ಜಾಗಿದೆ. ಫಿನಾನ್ಶಿಯಲ್​ ಈಯರ್ 2021 ರಲ್ಲಿ 1,38,000 ಉದ್ಯೋಗಿಗಳನ್ನು ನೇಮಕ ಮಾಡಿದೆ ಎಂದು ನಾಸ್ಕಾಮ್ ಹೇಳಿಕೆಯಲ್ಲಿ ತಿಳಿಸಿದೆ.

ನಾಸ್ಕಾಮ್
ನಾಸ್ಕಾಮ್

By

Published : Jun 17, 2021, 9:52 PM IST

Updated : Jun 17, 2021, 10:31 PM IST

ನವದೆಹಲಿ:ಭಾರತೀಯ ಅಗ್ರ 5 ಐಟಿ ಕಂಪನಿಗಳು 2021-22ರ ಅವಧಿಯಲ್ಲಿ 96,000 ನುರಿತ ಉದ್ಯೋಗಿಗಳನ್ನು ಸೇರಿಸಲು ಯೋಜಿಸುತ್ತಿದೆ ಎಂದು ಐಟಿ ಉದ್ಯಮ ಸಂಸ್ಥೆಯ ಮಂಡಳಿ ನಾಸ್ಕಾಮ್​​ ಹೇಳಿದೆ. ಕೈಗಾರಿಕೆಗಳಾದ್ಯಂತ, ವಿಶೇಷವಾಗಿ ಟೆಕ್ ವಲಯದಲ್ಲಿ ಯಾಂತ್ರೀಕೃತಗೊಂಡ ಲಾಭಗಳು ಹೆಚ್ಚಾಗುವುದರಿಂದ ದೇಶೀಯ ಸಾಫ್ಟ್‌ವೇರ್ ಸಂಸ್ಥೆಗಳು 2022 ರ ವೇಳೆಗೆ 3 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಲು ಸಜ್ಜಾಗಿದೆ ಎಂದು ಬ್ಯಾಂಕ್ ಆಫ್ ಅಮೆರಿಕ ನೀಡಿದ ವರದಿಯ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ.

"ತಂತ್ರಜ್ಞಾನದ ವಿಕಸನ ಮತ್ತು ಹೆಚ್ಚುತ್ತಿರುವ ಯಾಂತ್ರೀಕೃತ ವ್ಯವಸ್ಥೆಯು ಐಟಿ ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ. ಉದ್ಯಮವು ನುರಿತ ಪ್ರತಿಭೆಗಳ ನೇಮಕಕ್ಕೆ ಸಹಾಯಕವಾಗುತ್ತದೆ. ಫಿನಾನ್ಶಿಯಲ್​ ಈಯರ್​ 2021 ರಲ್ಲಿ 1,38,000 ಉದ್ಯೋಗಿಗಳನ್ನು ನೇಮಕ ಮಾಡಿದೆ" ಎಂದು ನಾಸ್ಕಾಮ್ ಹೇಳಿಕೆಯಲ್ಲಿ ತಿಳಿಸಿದೆ.

2021-22ರಲ್ಲಿ ದೃಢ ನೇಮಕ ಯೋಜನೆಗಳನ್ನು ಹೊಂದಿದ್ದಾರೆ ಎಂದು ಪ್ರತಿಪಾದಿಸಿದ್ದು, ಅಗ್ರ 5 ಭಾರತೀಯ ಐಟಿ ಕಂಪನಿಗಳು 96,000 ಉದ್ಯೋಗಿಗಳನ್ನು ಸೇರಿಸಲು ಯೋಜಿಸುತ್ತಿವೆ.

2,50,000 ಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ಡಿಜಿಟಲ್ ಕೌಶಲ್ಯಗಳ ಮೇಲೆ ನಿರ್ಧರಿಸಿ ನೇಮಿಸಲಾಗಿದೆ. ಇನ್ನು 40,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಸ ಡಿಜಿಟಲ್-ತರಬೇತಿ ಪಡೆದ ಪ್ರತಿಭೆಗಳಾಗಿ ನೇಮಿಸಿಕೊಳ್ಳಲಾಗಿದೆ. ಐಟಿ ಉದ್ಯಮವು 2025 ರ ವೇಳೆಗೆ 300-350 ಶತಕೋಟಿ ಡಾಲರ್ ಆದಾಯದ ದೃಷ್ಟಿಯನ್ನು ಪೂರೈಸುವ ಹಾದಿಯಲ್ಲಿದೆ "ಎಂದು ನಾಸ್ಕಾಮ್ ಹೇಳಿದೆ. ಮಾರ್ಚ್ 2021ರ ವೇಳೆಗೆ ಐಟಿ-ಬಿಪಿಎಂ ವಲಯವು ಒಟ್ಟಾರೆ 4.5 ಮಿಲಿಯನ್ ಜನರನ್ನು ನೇಮಿಸಿಕೊಂಡಿದೆ.

ಐದು ಭಾರತೀಯ ಐಟಿ ಕಂಪನಿಯಲ್ಲಿ 96 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡುವ ಮೂಲಕ ಹಣಕಾಸು ವರ್ಷ 2022ರ ವೇಳೆಗೆ 17 ಬಿಲಿಯನ್ ಡಾಲರ್‌ ಆರ್ಥಿಕತೆ ಸಾಧಿಸುವ ಗುರಿ ಹೊಂದಲಾಗಿದೆ. ಇನ್ನು ಶೇ.67 ಕಂಪನಿ ಸಿಇಒಗಳು 2021ರಲ್ಲಿ ಹೆಚ್ಚಿನ ಆರ್ಥಿಕ ಬೆಳವಣಿಗೆ ಸಾಧಿಸಲು ಪಣತೊಟ್ಟಿದ್ದಾರೆ ಎನ್ನಲಾಗಿದೆ. ಇನ್ನು 2025 ರ ವೇಳೆಗೆ 300ರಿಂದ 350 ಬಿಲಿಯನ್​ ಡಾಲರ್​ (22 ಲಕ್ಷ ಕೋಟಿ) ಆರ್ಥಿಕ ಪ್ರಗತಿ ಸಾಧಿಸುವ ಗುರಿ ಹೊಂದಿದ್ದಾರೆ ಎಂದು ನಾಸ್ಕಾಮ್​ ತಿಳಿಸಿದೆ.

Last Updated : Jun 17, 2021, 10:31 PM IST

ABOUT THE AUTHOR

...view details