ಬಾರಾಮುಲ್ಲಾ(ಜಮ್ಮು-ಕಾಶ್ಮೀರ):ದೇಶಾದ್ಯಂತ ಮೈ ಕೊರೆಯುವ ಚಳಿ ಆರಂಭವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶ ಕಾಯುವ ಯೋಧರು ಮೈಮರಗಟ್ಟಿಸುವ ಹಿಮದಲ್ಲೇ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಮಹತ್ವದ ಮಾನವೀಯ ಕಾರ್ಯ ಮಾಡಿ, ದೇಶದ ಜನರ ಮೆಚ್ಚುಗೆ ಜೊತೆ ಪ್ರೀತಿಗೆ ಪಾತ್ರರಾಗಿದ್ದಾರೆ.
ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಕಡಿದಾದ ಪ್ರದೇಶವಾಗಿರುವ ಘಾಗ್ಗರ್ ಹಳ್ಳಿಯಲ್ಲೂ ಭಾರಿ ಹಿಮಪಾತವಾಗುತ್ತಿದ್ದು, ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನ ಸ್ಟ್ರೆಚರ್ ಮೂಲಕ ಬಾರಾಮುಲ್ಲಾದ ಸಲ್ಸಾನ್ವರೆಗೂ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಸುರಿಯುತ್ತಿರುವ ಹಿಮದಲ್ಲೇ ಹೊತ್ತುಕೊಂಡು ಸಾಗಿರುವ ಯೋಧರ ವಿಡಿಯೋ ಇದೀಗ ವೈರಲ್ ಆಗಿದೆ.