ಕರ್ನಾಟಕ

karnataka

ETV Bharat / bharat

ಆಕಾಶ್​​-ಎನ್​ಜಿ ಕ್ಷಿಪಣಿ ಪರೀಕ್ಷೆ ಯಶಸ್ವಿ: ರಕ್ಷಣಾ ಪಡೆಗಳ ಬತ್ತಳಿಕೆಗೆ ಮತ್ತಷ್ಟು ಬಲ - ಆಕಾಶ್​​-ಎನ್​ಜಿ ಕ್ಷಿಪಣಿ ಪರೀಕ್ಷೆ ಯಶಸ್ವಿ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ಆಕಾಶ್​-ಎನ್​ಜಿ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ. ಎರಡನೇ ದಿನದಲ್ಲಿ ನಡೆದ ಎರಡನೇ ಯಶಸ್ವಿ ಪ್ರಯೋಗ ಇದಾಗಿದೆ.

Akash-NG
Akash-NG

By

Published : Jul 23, 2021, 5:11 PM IST

ನವದೆಹಲಿ:ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆಕಾಶ್-ಎನ್‌ಜಿ (ಹೊಸ ತಂತ್ರಜ್ಞಾನ) ಕ್ಷಿಪಣಿ ಪರೀಕ್ಷೆಯನ್ನು ಒಡಿಶಾ ಕರಾವಳಿಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿ ನಡೆಸಿದೆ. ಹೆಚ್ಚಿನ ಕೌಶಲದಿಂದ ವೈಮಾನಿಕ ದಾಳಿಯನ್ನು ತಡೆಯುವ ಉದ್ದೇಶದಿಂದ ರಕ್ಷಣಾ ಪಡೆಗಳು ಈ ಕ್ಷಿಪಣಿಯನ್ನು ಬಳಸಲಿದೆ.

ಇದನ್ನೂ ಓದಿ: ಟ್ವಿಟರ್‌ ಎಂಡಿ ಮನೀಶ್​ಗೆ ಕರ್ನಾಟಕ ಹೈಕೋರ್ಟ್​ನಿಂದ ರಿಲೀಫ್

ಇತ್ತೀಚೆಗೆ ಕಡಿಮೆ ತೂಕದ ಮ್ಯಾನ್-ಪೋರ್ಟಬಲ್ ಆ್ಯಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿ ಪರೀಕ್ಷೆಯನ್ನು (ಎಂಪಿಎಟಿಜಿಎಂ) ಯಶಸ್ವಿಯಾಗಿ ನಡೆಸಲಾಗಿತ್ತು. ಈ ಕ್ಷಿಪಣಿಯನ್ನು ಥರ್ಮಲ್ ಸೈಟ್‌ನೊಂದಿಗೆ ಸಂಯೋಜಿಸಲಾದ ಮ್ಯಾನ್-ಪೋರ್ಟಬಲ್ ಉಡಾವಣೆ ವಾಹಕದಿಂದ ಪರೀಕ್ಷೆ ನಡೆಸಲಾಗಿದೆ. ಕ್ಷಿಪಣಿ ನೇರ ದಾಳಿಯಲ್ಲಿ ತನ್ನ ಗುರಿಮುಟ್ಟಿತ್ತು. ಇದು ಸುಮಾರು 30 ಕಿಲೋ ಮೀಟರ್ ಟಾರ್ಗೆಟ್‌​​ ರೇಂಜ್​ ಹೊಂದಿತ್ತು ಎಂದು ಡಿಆರ್‌ಡಿಒ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details