ರಾಂಚಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯ ಅಕ್ಟೋಬರ್ 9ರಂದು ಜಾರ್ಖಂಡ್ನ ರಾಜಧಾನಿ ರಾಂಚಿಯ ಜೆಎಸ್‌ಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕಾಗಿ ಗುರುವಾರದಿಂದಲೇ (ಅಕ್ಟೋಬರ್ 6) ಟಿಕೆಟ್ ಮಾರಾಟ ಆರಂಭವಾಗಿದೆ. ಈ ಬಾರಿಯ ಅತಿ ಕಡಿಮೆ ದರದ ಟಿಕೆಟ್ 1,100 ರೂಪಾಯಿದಾದರೇ, ದುಬಾರಿ ಟಿಕೆಟ್ ಹತ್ತು ಸಾವಿರ ರೂಪಾಯಿಗಳಾಗಿವೆ. ಟಿಕೆಟ್ ದರವನ್ನ ರಾಜ್ಯ ಕ್ರಿಕೆಟ್ ಮಂಡಳಿ ನಿಗದಿ ಪಡಿಸಿದೆ.
ಕೊರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಈ ಕ್ರೀಡಾಂಗಣದಲ್ಲಿ ಒಂದೇ ಒಂದು ಪಂದ್ಯವು ನಡೆದಿರಲಿಲ್ಲ ಇದೀಗ ಹಲವು ದಿನಗಳ ನಂತರ ಈ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಟಿಕೆಟ್ ಖರೀದಿಸಲು ಆರಂಭಿಸಿದ್ದಾರೆ.
ಒಬ್ಬರಿಗೆ ಮೂರು ಟಿಕೆಟ್‌ಗಳು: ಅಕ್ಟೋಬರ್ 6, 7 ಮತ್ತು ಅಕ್ಟೋಬರ್ 8 ರಂದು ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಟಿಕೆಟ್ ಕೌಂಟರ್ ತೆರೆದಿರುತ್ತದೆ. ಮಧ್ಯಾಹ್ನ ಊಟದ ಸಮಯ 1ಘಂಟೆಯಿಂದ 2ಗಂಟೆ ಹೊರತು ಪಡೆಸಿ ಸಂಜೆ 4 ಗಂಟೆ ವರೆಗೆ ಕೌಂಟರ್ ತೆರೆದಿರಲಾಗುತ್ತದೆ. ಆಧಾರ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಪಂದ್ಯದ ಟಿಕೆಟ್‌ಗಳನ್ನು ನೀಡಲಾಗುತ್ತದೆ. ಇನ್ನು ವ್ಯಕ್ತಿಗೆ ಮೂರು ಟಿಕೆಟ್‌ಗಳು ಮಾತ್ರ ನಿಗದಿ ಪಡಿಸಲಾಗಿದ್ದು, ಆನ್ಲೈನ್ ಮೂಲಕವು ಟಿಕೆಟ್ ಖರೀದಿಸಬಹುದಗಾಗಿದೆ.
ಪಂದ್ಯಕ್ಕಾಗಿ ಮೂರು ಪಿಚ್ಗಳು ಸಿದ್ಧ: ಪಂದ್ಯಕ್ಕಾಗಿ ಕ್ರೀಡಾಂಗಣದಲ್ಲಿ ಮೂರು ಪಿಚ್ಗಳನ್ನ ಸಿದ್ದ ಪಡಿಸಲಾಗಿದ್ದು, ಒಂದು ಪಿಚ್ನಲ್ಲಿ ಪಂದ್ಯ ನಡೆಯಲಿದ್ದು, ಬಿಸಿಸಿಐ ತಂಡ ಬಂದು ಪರಿಶೀಲಿಸಿದ ಬಳಿಕ ಯಾವ ಪಿಚ್ ಪಂದ್ಯಕ್ಕೆ ಸೂಕ್ತ ಎಂದು ನಿರ್ಧರಿಸಲಾಗುತ್ತದೆ.
ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸ ಬಹುದು ಎಂದು ಹವಮಾನ ಇಲಾಖೆ ತಿಳಿಸಿದೆ. ಅ.9 ರಂದು ಮಧ್ಯಾಹ್ನ 12 ಗಂಟೆಯಿಂದ ರಾಂಇಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದಕ್ಕಾಗಿ ಜೆಎಸ್‌ಸಿಎ ಆಡಳಿತ ಮಂಡಳಿ ಸಕಲ ಸಿದ್ಧತೆಗಳನ್ನು ನಡೆಸಿದೆ.
ನಿಗದಿಯಾಗಿರುವ ಟಿಕೆಟ್ ದರಗಳು: ವಿಂಗ್ ಎ ಶ್ರೇಣಿ - ರೂ 1,100, ವಿಂಗ್ ಎ, ಕೆಳ ಶ್ರೇಣಿಗೆ - ರೂ 1,400, ವಿಂಗ್ ಸಿ, ಕೆಳ ಶ್ರೇಣಿ - ರೂ 1,400, ವಿಂಗ್ ಸಿ, ಮೇಲಿನ ಶ್ರೇಣಿ - ರೂ 1,100, ವಿಂಗ್ ಬಿ, ಮೇಲಿನ ಶ್ರೇಣಿ - 1,500 ರೂಪಾಯಿ, ವಿಂಗ್ ಬಿ, ಲೋವರ್ ಟೈರ್ - 1,900 ರೂ, ವಿಂಗ್ ಡಿ, ಲೋವರ್ ಟೈರ್ - 1,800 ರೂ, ವಿಂಗ್ ಡಿ, ಮೇಲಿನ ಶ್ರೇಣಿ - 1,700 ರೂ.ಗಳನ್ನು ನಿಗದಿಪಡಿಸಲಾಗಿದೆ. ಇದಲ್ಲದೇ ಪ್ರೀಮಿಯಂ ಟೆರೇಸ್ - 2 ಸಾವಿರ, ಪ್ರೆಸಿಡಂಟ್ ಆವರಣ - 10 ಸಾವಿರ, ಆತಿಥ್ಯ ಬಾಕ್ಸ್ - 5 ಸಾವಿರ, ಕಾರ್ಪೋರೇಟ್ ಬಾಕ್ಸ್ - 4,500, ಕಾರ್ಪೋರೇಟ್ ಲಾಂಜ್ - 8,000 ರೂ., ಎಂಎಂ ಧೋನಿ ಪೆವಿಲಿಯನ್ ಮತ್ತು ಐಷಾರಾಮಿ ಪಾರ್ಲರ್ಗೆ - 6 ಸಾವಿರ ರೂ. ನಿಗದಿ ಪಡಿಸಲಾಗಿದೆ.
ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಇದುವರೆಗೆ ನಡೆದ ಅಂತಾರಾಷ್ಟ್ರೀಯ ಪಂದ್ಯಗಳು: 2016ರಲ್ಲಿ ಈ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ನಡೆದಿತ್ತು. ಇದರ ನಂತರ 2017 ಅ.7ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ T20 ಪಂದ್ಯ ನಡೆಯಿತು. 2019 ನ.19ರಂದು ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ T-20 ಪಂದ್ಯ ನಡೆದಿದತ್ತು. ಇನ್ನು ಜೆಎಸ್‌ಸಿಎ ಸ್ಟೇಡಿಯಂನಲ್ಲಿ ಈವರೆಗೂ ಒಟ್ಟು ಹತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆದಿವೆ.
ಇದನ್ನೂ ಓದಿ:ಬೊಗಳುವ ನಾಯಿಯಿಂದ ದೂರವಿರಿ.. ಟ್ರೋಲ್ಗೆ ವೇಗಿ ಜಸ್ಪ್ರೀತ್ ಬೂಮ್ರಾ ತಿರುಗೇಟು