ಕರ್ನಾಟಕ

karnataka

ETV Bharat / bharat

ಭಾರತ ತನ್ನ ಸೈನಿಕರನ್ನು ಶ್ರೀಲಂಕಾಕ್ಕೆ ಕಳುಹಿಸುತ್ತಿಲ್ಲ: ಹೈಕಮಿಷನ್‌ ಸ್ಪಷ್ಟನೆ - ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಹೇರಲಾಗಿರುವ ತುರ್ತು ಪರಿಸ್ಥಿತಿ

ದ್ವೀಪ ರಾಷ್ಟ್ರದಲ್ಲಿ ಹೇರಲಾಗಿರುವ 'ತುರ್ತು ಪರಿಸ್ಥಿತಿ'ಯ ನಡುವೆ ಶ್ರೀಲಂಕಾಕ್ಕೆ ತನ್ನ ಸೈನಿಕರನ್ನು ಕಳುಹಿಸುತ್ತಿದೆ ಎಂಬ ವರದಿಯನ್ನು ಭಾರತ ತಳ್ಳಿಹಾಕಿದೆ.

ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಹೇರಲಾಗಿರುವ ತುರ್ತು ಪರಿಸ್ಥಿತಿ
ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಹೇರಲಾಗಿರುವ ತುರ್ತು ಪರಿಸ್ಥಿತಿ

By

Published : Apr 3, 2022, 7:38 AM IST

ನವದೆಹಲಿ: ನೆರೆಯ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿಯಿದ್ದು ಈ ನಡುವೆ ತನ್ನ ಸೈನಿಕರನ್ನು ಶ್ರೀಲಂಕಾಕ್ಕೆ ಕಳುಹಿಸುತ್ತಿದೆ ಎಂಬ ವರದಿಯನ್ನು ಭಾರತ ಅಲ್ಲಗಳೆದಿದೆ. ಈ ಕುರಿತಾಗಿ ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನ್ ಸ್ಪಷ್ಟಪಡಿಸಿದೆ. 'ಭಾರತವು ತನ್ನ ಸೈನಿಕರನ್ನು ಶ್ರೀಲಂಕಾಕ್ಕೆ ಕಳುಹಿಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದು ಆಧಾರರಹಿತ' ಎಂದು ತಿಳಿಸಿದ್ದಾರೆ.

ದೇಶದಲ್ಲಿ ಅಶಾಂತಿಯನ್ನು ತಡೆಯಲು ಶ್ರೀಲಂಕಾ ಸರ್ಕಾರವು ಶನಿವಾರ ಸಂಜೆ 6 ರಿಂದ ಕರ್ಫ್ಯೂ ಘೋಷಿಸಿದೆ. ಕಳೆದ ಸೋಮವಾರ ಬೆಳಗ್ಗೆ 6 ರಿಂದ ಲಂಕಾ ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಈ ದುರಂತ ಉಂಟಾಗಿದೆ.

ಇದನ್ನೂ ಓದಿ: IPL 2022: ಗಿಲ್‌, ಲಾಕಿ ಫರ್ಗ್ಯುಸನ್ ಆಟಕ್ಕೆ ತತ್ತರಿಸಿದ ಡೆಲ್ಲಿ; ಗುಜರಾತ್‌ ಟೈಟನ್ಸ್‌ಗೆ ಗೆಲುವು

ರಾಜಧಾನಿಯಲ್ಲಿ ನೂರಾರು ಪ್ರತಿಭಟನಾಕಾರರು ಜಮಾಯಿಸಿದ ನಂತರ ರಾಜಪಕ್ಸೆ ಸಾರ್ವಜನಿಕ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಆರ್ಥಿಕ ನೀತಿಗಳ ಕಳಪೆ ನಿರ್ವಹಣೆ ಅವ್ಯವಸ್ಥೆ ಸೃಷ್ಟಿಸಿದೆ ಎಂದು ಆರೋಪಿಸಿ ಜನರು, ಸರ್ಕಾರದ ವಿರುದ್ಧ ಪ್ರತಿಭಟಿಸುವ ಭಾಗವಾಗಿ ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರು.

For All Latest Updates

ABOUT THE AUTHOR

...view details