ನವದೆಹಲಿ: ಕಳೆದ 39 ದಿನಗಳಿಂದ ದೈನಂದಿನ ಕೋವಿಡ್ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಹೆಚ್ಚಾಗಿದೆ. ನಿನ್ನೆ 78,190 ಮಂದಿ ವೈರಸ್ನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಹೊರಬಂದಿದ್ದು, 53,256 ಕೇಸ್ಗಳು ಪತ್ತೆಯಾಗಿದೆ. 88 ದಿನಗಳ ಬಳಿಕ ದೇಶದಲ್ಲಿ ಅತಿ ಕಡಿಮೆ ಕೊರೊನಾ ಪ್ರಕರಣಗಳು ವರದಿಯಾಗಿದೆ.
ಇತ್ತ ಕೋವಿಡ್ ಮರಣ ಪ್ರಮಾಣವೂ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 1422 ಜನರು ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲೀಗ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 2,99,35,22 ಹಾಗೂ ಮೃತರ ಸಂಖ್ಯೆ 3,88,135ಕ್ಕೆ ಏರಿಕೆಯಾಗಿದೆ.
ಆದರೆ ಒಟ್ಟು ಸೋಂಕಿತರ ಪೈಕಿ ಶೇ.96.36 ರಷ್ಟು ಅಂದರೆ 2,88,44,199 ಮಂದಿ ಗುಣಮುಖರಾಗಿದ್ದು, 7,02,887 ಕೇಸ್ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.