ನವದೆಹಲಿ: ಕಳೆದ 2 ತಿಂಗಳಿಂದ ಭಾರತದಲ್ಲಿ ಪತ್ತೆಯಾಗುತ್ತಿರುವ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ (COVID Cases) ಕಡಿಮೆಯಿದೆ. ಆದರೆ, ಸಾವಿನ ಸಂಖ್ಯೆ(COVID Deaths)ಯಲ್ಲಿ ಇಳಿಕೆಯಾಗುತ್ತಿಲ್ಲ. 150 ರಿಂದ 800ರ ವರೆಗೂ ಸಾವಿನ ಸಂಖ್ಯೆ ವರದಿಯಾಗುತ್ತಿದೆ.
ಬುಧವಾರ ಒಂದೇ ದಿನ 11,919 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 470 ಮಂದಿ ವೈರಸ್ನಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶದ ಒಟ್ಟು ಕೇಸ್ಗಳ ಸಂಖ್ಯೆ 3,44,78,517 ಆಗಿದ್ದರೆ, ಮೃತರ ಸಂಖ್ಯೆ 4,64,623ಕ್ಕೆ ಏರಿಕೆಯಾಗಿದೆ.
ಇಲ್ಲಿಯವರೆಗೆ ಶೇ.98.28 ರಷ್ಟು (India's COVID recovery rate) ಅಂದ್ರೆ 3,38,85,132 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆ್ಯಕ್ಟಿವ್ ಕೇಸ್ಗಳ ಪ್ರಮಾಣ ಶೇ.0.37ಕ್ಕೆ ಕೆಳಗಿಳಿದಿದ್ದು, ಸದ್ಯ 1,36,308 ಕೇಸ್ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ (Ministry of Health and Family Welfare) ಮಾಹಿತಿ ನೀಡಿದೆ.