ಕರ್ನಾಟಕ

karnataka

ETV Bharat / bharat

150 ರಾಷ್ಟ್ರಗಳಿಗೆ ವೈದ್ಯಕೀಯ​ ಸಹಕಾರ ನೀಡಿದ ಭಾರತ - ಭಾರತ 150 ರಾಷ್ಟ್ರಗಳಿಗೆ ವೈದ್ಯಕೀಯ​ ಸಹಕಾರ

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತ 150ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವೈದ್ಯಕೀಯ ಸರಬರಾಜು ಮತ್ತು ಉಪಕರಣಗಳನ್ನು ಒದಗಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ .ಜೈಶಂಕರ್ ತಿಳಿಸಿದ್ದಾರೆ.

Jaishankar
ಸಚಿವ ಎಸ್ .ಜೈಶಂಕರ್

By

Published : Jan 28, 2021, 6:26 AM IST

ನವದೆಹಲಿ: ವಿಶ್ವ ಕೊರೊನಾ ಸಾಂಕ್ರಾಮಿಕ ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತ 150ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವೈದ್ಯಕೀಯ ಸರಬರಾಜು ಮತ್ತು ಉಪಕರಣಗಳನ್ನು ಒದಗಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ .ಜೈಶಂಕರ್ ಹೇಳಿದ್ದಾರೆ.

ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಅಧ್ಯಯನ ಸಂಸ್ಥೆಯ 14 ನೇ ವಾರ್ಷಿಕ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, "ನಾವು ವ್ಯಾಕ್ಸಿನೇಷನ್ ಪ್ರಾರಂಭಿಸಿದ್ದರೂ ಸಹ, ನಮ್ಮ ನೆರೆಹೊರೆಯ ರಾಷ್ಟ್ರಗಳಿಗೆ ಭಾರತೀಯ ಲಸಿಕೆ ಸರಬರಾಜು ಪ್ರಾರಂಭವಾಗಿದೆ. ಇದು ಮುಂಬರುವ ದಿನಗಳಲ್ಲಿ ಇತರ ಪಾಲುದಾರ ರಾಷ್ಟ್ರಗಳಿಗೂ ಸರಬರಾಜಾಗುವ ನಿರೀಕ್ಷೆಯಿದೆ. ಗಂಭೀರ ಸಮಸ್ಯೆಗಳನ್ನು ಎದುರಿಸಲು ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ. ಈಗಾಗಲೇ ವೈದ್ಯಕೀಯ ಸರಬರಾಜು ಮತ್ತು ಉಪಕರಣಗಳನ್ನು 150 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಒದಗಿಸಲಾಗಿದೆ" ಎಂದಿದ್ದಾರೆ.

ಯುಎಸ್ ಆಡಳಿತದ ಬಗ್ಗೆ (ಅಧ್ಯಕ್ಷ ಜೋ ಬೈಡನ್) ಮಾತನಾಡಿದ ಅವರು, "ವಾಷಿಂಗ್ಟನ್ ಡಿಸಿಯಲ್ಲಿ ಹೊಸ ಆಡಳಿತವು ಅಧಿಕಾರ ವಹಿಸಿಕೊಂಡಂತೆ, ಅದು ಸೂಚಿಸುವ ಬದಲಾವಣೆಗಳ ಬಗ್ಗೆ ಜಗತ್ತು ಪ್ರತಿಬಿಂಬಿಸುವುದು ಸಹಜ. ಅಮೆರಿಕದ ರಾಜಕೀಯವನ್ನು ಅನುಸರಿಸುವವರು ಅದರ ನೀತಿಗಳನ್ನು ಒಪ್ಪುತ್ತಾರೆ. ಉಪಕ್ರಮಗಳು ಪುನರ್ನಿರ್ಮಾಣ ಮತ್ತು ಪುನರುಜ್ಜೀವನದ ಮೇಲೆ ಕೇಂದ್ರೀಕರಿಸುತ್ತವೆ" ಎಂದರು.

ABOUT THE AUTHOR

...view details