ಕರ್ನಾಟಕ

karnataka

ETV Bharat / bharat

ವ್ಯಾಕ್ಸಿನ್​ ಮೊದಲ ಡೋಸ್​ ಪಡೆದ ರಾಷ್ಟ್ರಗಳಲ್ಲಿ ಅಮೆರಿಕಾ ಹಿಂದಿಕ್ಕಿದ ಭಾರತ! - ಕೋವಿಡ್​ ಲಸಿಕೆ

ಮಾಹಿತಿಯ ಪ್ರಕಾರ, ಭಾರತದಲ್ಲಿ ಒಂದು ಡೋಸ್ ಲಸಿಕೆ ಪಡೆದವರ ಸಂಖ್ಯೆ 17.2 ಕೋಟಿ. ನಮ್ಮ ದೇಶದಲ್ಲಿ ಮೊದಲ ಬಾರಿಗೆ ಲಸಿಕೆ ಪಡೆದ ಜನರ ಸಂಖ್ಯೆಗೆ ಅನುಗುಣವಾಗಿ ನಾವು ಅಮೆರಿಕಾವನ್ನ ಹಿಂದಿಕ್ಕಿದ್ದೇವೆ..

ನೀತಿ ಆಯೋಗ
ನೀತಿ ಆಯೋಗ

By

Published : Jun 4, 2021, 9:35 PM IST

ನವದೆಹಲಿ :ಕೊರೊನಾ ಲಸಿಕೆಯ ಮೊದಲ ಡೋಸ್​ ಪಡೆದ ಜನರ ಸಂಖ್ಯೆಯಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಿದೆ ಎಂದು ಸದಸ್ಯ ಆರೋಗ್ಯ ನೀತಿ ಆಯೋಗದ ಡಾ.ವಿ ಕೆ ಕೇಲ್ ಹೇಳಿದ್ದಾರೆ.

"ಮಾಹಿತಿಯ ಪ್ರಕಾರ, ಭಾರತದಲ್ಲಿ ಒಂದು ಡೋಸ್ ಲಸಿಕೆ ಪಡೆದವರ ಸಂಖ್ಯೆ 17.2 ಕೋಟಿ. ನಮ್ಮ ದೇಶದಲ್ಲಿ ಮೊದಲ ಬಾರಿಗೆ ಲಸಿಕೆ ಪಡೆದ ಜನರ ಸಂಖ್ಯೆಗೆ ಅನುಗುಣವಾಗಿ ನಾವು ಅಮೆರಿಕಾವನ್ನ ಹಿಂದಿಕ್ಕಿದ್ದೇವೆ" ಎಂದು ಹೇಳಿದರು.

ವ್ಯಾಕ್ಸಿನೇಷನ್‌ನ ಹೆಚ್ಚಿನ ವ್ಯಾಪ್ತಿಯನ್ನು ಸಾಧಿಸಲು ದೇಶಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಇನ್ನು, ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿವೆ. 257 ಜಿಲ್ಲೆಗಳು 100ಕ್ಕೂ ಕಡಿಮೆ ಪ್ರಕರಣ ದಾಖಲಾಗುತ್ತಿವೆ. 377 ಜಿಲ್ಲೆಗಳಲ್ಲಿ ಪ್ರಸ್ತುತ ಶೇ.5ಕ್ಕಿಂತ ಕಡಿಮೆ ಪ್ರಕರಣ ಕಂಡು ಬಂದಿವೆ ಎಂದು ಹೇಳಿದರು.

ABOUT THE AUTHOR

...view details