ನವದೆಹಲಿ: ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಸಂಬಂಧ ಮತ್ತು ಬಾಂಧವ್ಯವನ್ನು ಹೊಂದುವ ಮೂಲಕ, ಯಾವುದೇ ಅನಿಶ್ಚಿತ ದಾಳಿ ನಡೆಸುವ ದೇಶಗಳನ್ನು ನಾವು ಹಿಮ್ಮೆಟ್ಟಿಸಬಹುದಾಗಿದೆ ಎಂದು ವಾಯುಪಡೆಯ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಹೇಳಿದ್ದಾರೆ.
ನಮ್ಮ ನೆರೆಯ ದೇಶವು ಅಸ್ಥಿರ ಮತ್ತು ಅನಿಶ್ಚಿತತೆಯನ್ನು ಮುಂದುವರೆಸಿದೆ. ಇಂತಹ ಸಂದರ್ಭದಲ್ಲಿ ನಾವು ಇತರ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಮತ್ತು ಮೌಲ್ಯಗಳನ್ನು ಹಂಚಿಕೊಳ್ಳುವ ಮೂಲಕ ನಾವು ನಮ್ಮ ಸಾಮೂಹಿಕ ಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ತಿಳಿಸಿದ್ದಾರೆ.
ದೆಹಲಿಯ ಏರ್‌ಫೋರ್ಸ್ ಆಡಿಟೋರಿಯಂನಲ್ಲಿ ಉದಯೋನ್ಮುಖ ವಿಶ್ವ ಕ್ರಮದಲ್ಲಿ ಭಾರತದ ಶ್ರೇಷ್ಠತೆಯ ಕುರಿತು ಸೆಂಟರ್ ಫಾರ್ ಏರ್ ಪವರ್ ಸ್ಟಡೀಸ್ (ಸಿಎಪಿಎಸ್) ಆಯೋಜಿಸಿದ್ದ 19 ನೇ ಸುಬ್ರೋತೋ ಮುಖರ್ಜಿ ಸೆಮಿನಾರ್‌ನಲ್ಲಿ ಅವರು ಮಾತನಾಡಿದರು.