ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಆಕ್ಷೇಪಾರ್ಹ ಹೇಳಿಕೆಗಳು ಮಾಲ್ಡೀವ್ಸ್ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಈಗ ಭಾರತ ಸರ್ಕಾರವು ಮಾಲ್ಡೀವ್ಸ್‌ನ ಹೈಕಮಿಷನರ್‌ಗೆ ಸಮನ್ಸ್ ನೀಡಿದೆ. ಭಾರತ ಸರ್ಕಾರದಿಂದ ಸಮನ್ಸ್ ಪಡೆದ ನಂತರ, ಮಾಲ್ಡೀವ್ಸ್ ಹೈ ಕಮಿಷನರ್ ಇಬ್ರಾಹಿಂ ಸಾಹಿಬ್ ಅವರು ಭಾರತೀಯ ವಿದೇಶಾಂಗ ಸಚಿವಾಲಯ ತಲುಪಿದರು. ಸ್ಪಷ್ಟನೆ ನೀಡಿದ ಬಳಿಕ ಅವರು ಇಲ್ಲಿಂದ ನಿರ್ಗಮಿಸಿದರು. ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ.
ಮಾಲ್ಡೀವ್ಸ್‌ನ ಮಹಿಳಾ ಸಚಿವೆ ಮರಿಯಮ್ ಶಿಯುನಾ ಅವರು ಪ್ರಧಾನಿ ಮೋದಿಯವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದರು. ಭಾರತವು ಮಾಲ್ಡೀವ್ಸ್‌ನ ಮೊಹಮ್ಮದ್ ಮುಯಿಝೂ ಸರ್ಕಾರದೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿತ್ತು. ಸಚಿವರ ಹೇಳಿಕೆಗೆ ಮಾಲೆಯಲ್ಲಿರುವ ಭಾರತೀಯ ಹೈಕಮಿಷನರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಭಾರತದ ಆಕ್ಷೇಪದ ನಂತರ, ಮಾಲ್ಡೀವ್ಸ್ ಸರ್ಕಾರ ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿಕೆ ನೀಡಿತು.
ನಂತರ, ಭಾರತದ ತೀವ್ರ ಆಕ್ಷೇಪದ ನಂತರ ಕ್ರಮ ಕೈಗೊಂಡ ಮಾಲ್ಡೀವ್ಸ್ ಸರ್ಕಾರವು ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಸಚಿವೆ ಮರ್ಯಾಮ್ ಶಿಯುನಾ, ಮಲ್ಶಾ ಷರೀಫ್ ಮತ್ತು ಮಹಜೂಮ್ ಮಜೀದ್ ಅವರನ್ನು ಅಮಾನತುಗೊಳಿಸಿತು. ಮಾಲ್ಡೀವ್ಸ್ ಸರ್ಕಾರದ ವಕ್ತಾರ ಸಚಿವ ಇಬ್ರಾಹಿಂ ಖಲೀಲ್ ಅವರು ವಿವಾದಾತ್ಮಕ ಕಾಮೆಂಟ್‌ಗಳಿಗೆ ಕಾರಣವಾದ ಮೂವರು ಸಚಿವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಸ್ಥಾನದಿಂದ ಅಮಾನತುಗೊಳಿಸಲಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದರು.