ಕರ್ನಾಟಕ

karnataka

ETV Bharat / bharat

ದೇಶದಲ್ಲಿ 5,921 ಕೋವಿಡ್ ಪ್ರಕರಣ, 289 ಸೋಂಕಿತರ ಸಾವು - ಭಾರತದಲ್ಲಿ ಕೋವಿಡ್‌ ಪ್ರರಣಗಳು

ದೇಶದಲ್ಲಿ ಸತತ 27 ದಿನಗಳಿಂದ 1 ಲಕ್ಷಕ್ಕಿಂತ ಕಡಿಮೆ ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 5,921 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 289 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

India logs 5,921 new COVID-19 cases, 289 deaths
ದೇಶದಲ್ಲಿ 5,921 ಕೋವಿಡ್ ಪ್ರಕರಣ, 289 ಸೋಂಕಿತರ ಸಾವು

By

Published : Mar 5, 2022, 10:41 AM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 5,921 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 289 ಮಂದಿ ಸೋಂಕಿತರು ಮೃತಪಟ್ಟಿದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಒಟ್ಟಾರೆ ಕೋವಿಡ್‌ ಪ್ರಕರಣಗಳ ಸಂಖ್ಯೆ 4,29,57,477ಕ್ಕೆ ತಲುಪಿದ್ದು, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 63,878 ಇದೆ. ವೈರಸ್‌ ತಗುವಿ ಮೃತಪಟ್ಟವರ ಸಂಖ್ಯೆ 5,14,878 ಕ್ಕೆ ಏರಿಕೆಯಾಗಿದೆ.

ಸತತ 27 ದಿನಗಳಿಂದ 1 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ. ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಿದೆ. ಇದರಿಂದ ವೈರಸ್‌ನಿಂದ ಚೇತರಿಸಿಕೊಂಡವರ ಸಂಖ್ಯೆ 4,23,78,721ಕ್ಕೆ ಏರಿದೆ. ಆದರೆ, ಸಾವಿನ ಪ್ರಮಾಣವು ಶೇ.1.20 ರಷ್ಟಿದೆ ಎಂದು ಅಂಕಿ- ಅಂಶಗಳು ತೋರಿಸಿವೆ. ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಅಭಿಯಾನದಡಿ ಇದುವರೆಗೆ ದೇಶದಲ್ಲಿ ನಿರ್ವಹಿಸಲಾದ ಡೋಸ್‌ಗಳ ಸಂಚಿತ ಸಂಖ್ಯೆ 178.55 ಕೋಟಿ ಮೀರಿದೆ.

ಸೋಂಕಿನ ಸಂಖ್ಯೆ 2020ರ ಆಗಸ್ಟ್ 7ಕ್ಕೆ 20 ಲಕ್ಷ ಗಡಿ ದಾಟಿತ್ತು. ಆದರೆ, ರೀತಿ ಆಗಸ್ಟ್ 23ಕ್ಕೆ 30 ಲಕ್ಷ, ಸೆಪ್ಟೆಂಬರ್ 5ಕ್ಕೆ 40 ಲಕ್ಷ ಹಾಗೂ ಸೆಪ್ಟೆಂಬರ್ 16ಕ್ಕೆ 50 ಲಕ್ಷ ಪ್ರಕರಣಗಳು ದಾಖಲಾಗಿದ್ದವು.

ಸೆಪ್ಟೆಂಬರ್ 28ಕ್ಕೆ 60 ಲಕ್ಷ, ಅಕ್ಟೋಬರ್ 11ಕ್ಕೆ 70 ಲಕ್ಷ, ಅಕ್ಟೋಬರ್ 29ಕ್ಕೆ 80 ಲಕ್ಷ, ನವೆಂಬರ್ 20ಕ್ಕೆ 90 ಲಕ್ಷ ಹಾಗೂ ಡಿಸೆಂಬರ್ 19ಕ್ಕೆ 1 ಕೋಟಿಯ ಗಡಿ ದಾಟಿದೆ. ಕಳೆದ ಮೇ 4 ರಂದು ದೇಶವು ಎರಡು ಕೋಟಿ ಕೋವಿಡ್‌ ಪ್ರಕರಣಗಳ ಮೈಲಿಗಲ್ಲು ದಾಟಿದೆ.

ಇದನ್ನೂ ಓದಿ:ಕೋವಿಡ್‌ ವೇಳೆ 1,400 ಕಿ.ಮೀ ಸಂಚರಿಸಿ ಮಗನ ಕರೆತಂದ ತಾಯಿಗೆ ಮತ್ತೆ ಮಗ ಉಕ್ರೇನ್‌ನಲ್ಲಿ ಸಿಲುಕಿದ ಸಂಕಟ!

ABOUT THE AUTHOR

...view details