ನವದೆಹಲಿ: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 10,302 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 267 ಜನರು ಬಲಿಯಾಗಿದ್ದಾರೆ. ಇದೀಗ ದೇಶದ ಒಟ್ಟು ಕೇಸ್ಗಳ ಸಂಖ್ಯೆ 3,44,99,925 ಹಾಗೂ ಮೃತರ ಸಂಖ್ಯೆ 4,65,349ಕ್ಕೆ ಏರಿಕೆಯಾಗಿದೆ (Total number of corona cases and deaths in India).
ನಿನ್ನೆ ಒಂದೇ ದಿನ 11,787 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದಿದ್ದು, ಇಲ್ಲಿಯವರೆಗೆ ಶೇ.98.29 ಅಂದರೆ ಒಟ್ಟು 3,39,09,708 ಜನರು ವೈರಸ್ನಿಂದ ಚೇತರಿಸಿಕೊಂಡಿದ್ದಾರೆ (India's covid recovery rate) ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Ministry of Health and Family Welfare) ಮಾಹಿತಿ ನೀಡಿದೆ.
ಇದನ್ನೂ ಓದಿ: Anantapur Building Collapse: ಆಂಧ್ರದಲ್ಲಿ ವರುಣನ ರೌದ್ರಾವತಾರ.. ಅನಂತಪುರದಲ್ಲಿ ಕಟ್ಟಡ ಕುಸಿದು ಮೂವರು ಬಲಿ