ತಿರುನೆಲ್ವೇಲಿ(ತಮಿಳುನಾಡು): ಭಾರತಕ್ಕೆ ಒಂದು ಸಂಸ್ಕೃತಿ, ಇತಿಹಾಸ ಮತ್ತು ಭಾಷೆ ಇದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಅಲ್ಲಗಳೆದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನಮ್ಮ ದೇಶವು ಬಹು ಸಂಸ್ಕೃತಿ, ಇತಿಹಾಸ ಮತ್ತು ವಿವಿಧ ಭಾಷೆಗಳನ್ನು ಹೊಂದಿದೆ. ಆದನ್ನು ಪ್ರಧಾನ ಮಂತ್ರಿ ಗೌರವಿಸುವಂತೆ ಒತ್ತಾಯಿಸಿದರು.
ಭಾರತ ಬಹು ಸಂಸ್ಕೃತಿ ದೇಶ.. ಪ್ರಧಾನಿಯವರೇ, ಎಲ್ಲರನ್ನೂ ಗೌರವಿಸಿ : ಪಿಎಂ ವಿರುದ್ಧ ರಾಹುಲ್ ವಾಗ್ದಾಳಿ - ತಮಿಳುನಾಡು ವಿಧಾನಸಭಾ ಚುನಾವಣೆ
ತಮಿಳು ಸಂಸ್ಕೃತಿ ಭಾರತೀಯ ಸಂಸ್ಕೃತಿಯಲ್ಲವೇ?, ಭಾರತವು ಅನೇಕ ರೀತಿಯ ಸಂಸ್ಕೃತಿ, ಇತಿಹಾಸ ಮತ್ತು ಭಾಷೆಗಳನ್ನು ಹೊಂದಿದೆ. ಪ್ರಧಾನಿ ಮೋದಿಯವರು ಪ್ರತಿ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು..
ತಿರುನೆಲ್ವೇಲಿಯಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತಕ್ಕೆ ಒಂದು ಸಂಸ್ಕೃತಿ, ಒಂದು ಇತಿಹಾಸ ಮತ್ತು ಒಂದು ಭಾಷೆ ಇದೆ ಎಂದು ಪ್ರಧಾನಿ ಹೇಳುತ್ತಾರೆ. ತಮಿಳು ಇತಿಹಾಸವು ಭಾರತೀಯ ಇತಿಹಾಸವಲ್ಲವೇ? ಅಥವಾ ತಮಿಳು ಸಂಸ್ಕೃತಿ ಭಾರತೀಯ ಸಂಸ್ಕೃತಿಯಲ್ಲವೇ?, ಭಾರತವು ಅನೇಕ ರೀತಿಯ ಸಂಸ್ಕೃತಿ, ಇತಿಹಾಸ ಮತ್ತು ಭಾಷೆಗಳನ್ನು ಹೊಂದಿದೆ. ಪ್ರಧಾನಿ ಮೋದಿಯವರು ಪ್ರತಿ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು" ಎಂದು ರಾಹುಲ್ ಗಾಂಧಿ ಹೇಳಿದರು.
ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ ನಿನ್ನೆ ಘೋಷಿಸಿದೆ. 234 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಕಾಂಗ್ರೆಸ್-ಡಿಎಂಕೆ ಮತ್ತು ಬಿಜೆಪಿ-ಎಐಎಡಿಎಂಕೆ ಮೈತ್ರಿಯು ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಲಿವೆ.