ನವದೆಹಲಿ: ಉಕ್ರೇನ್ ಮೇಲೆ ಯುದ್ಧ ಘೋಷಿಸಿರುವ ರಷ್ಯಾ ವಿರುದ್ಧ ವಿಶ್ವಸಂಸ್ಥೆಯ ಮತ್ತೊಂದು ಮತದಾನದಿಂದ ಭಾರತ ದೂರ ಉಳಿದಿದೆ.
ರಷ್ಯಾದ ಕ್ರಮಗಳ ಕುರಿತು ತನಿಖೆ ನಡೆಸಲು ಅಂತಾರಾಷ್ಟ್ರೀಯ ಸ್ವತಂತ್ರ ಆಯೋಗ ಸ್ಥಾಪಿಸುವ ತುರ್ತು ಅಗತ್ಯದ ಕುರಿತ ಮಾನವ ಹಕ್ಕುಗಳ ಮಂಡಳಿಯಲ್ಲಿನ ನಿರ್ಣಯದ ಮತದಾನಕ್ಕೆ ಭಾರತ ಗೈರಾಗಿದೆ.
47 ಸದಸ್ಯರ ಕೌನ್ಸಿಲ್‌ನಲ್ಲಿ 32 ದೇಶಗಳು ಸ್ವತಂತ್ರ ಆಯೋಗವನ್ನು ಸ್ಥಾಪಿಸುವ ತುರ್ತು ಅಗತ್ಯದ ಪರವಾಗಿ ಮತ ಚಲಾಯಿಸಿದರೆ, ರಷ್ಯಾ ಮತ್ತು ಎರಿಟ್ರಿಯಾ ವಿರುದ್ಧವಾಗಿ ಮತ ಚಲಾಯಿಸಿದವು. ಭಾರತ, ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ 13 ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ.
ರಷ್ಯಾ ವಿರುದ್ಧದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಎರಡು ಮಹತ್ವದ ಸಭೆ, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತದಾನದಲ್ಲಿ ಭಾರತ ತಟಸ್ಥ ನಿಲುವು ತಾಳಿದೆ.
ಇದನ್ನೂ ಓದಿ:ಉಕ್ರೇನ್ ಮೇಲೆ ರಷ್ಯಾ ಯುದ್ಧದ ವಿಚಾರದಲ್ಲಿ ಭಾರತದ ತಟಸ್ಥ ನಿಲುವೇಕೆ? ಇಲ್ಲಿದೆ ಉತ್ತರ