ರಾಯಗಂಜ್ (ಪಶ್ಚಿಮ ಬಂಗಾಳ): ರಾಯಗಂಜ್ ಶಾಸಕ ಕೃಷ್ಣ ಕಲ್ಯಾಣಿ ಅವರ ಮನೆ ಮೇಲೆ ಬುಧವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೃಷ್ಣ ಕಲ್ಯಾಣಿ ಅವರ ಮನೆ, ಬುಲೆಟ್ ಶೋ ರೂಂ, ತೃಣಮೂಲ ಕಾಂಗ್ರೆಸ್ ಕಚೇರಿ, ಕಲ್ಯಾಣಿ ಸಾಲ್ವೆಕ್ಸ್, ಟ್ರೈಬ್ ಟಿವಿ, ವಾ ಬಜಾರ್, ಪಿಆರ್‌ಎಂ ಶಾಪಿಂಗ್ ಮಾಲ್, ರಿಲಯನ್ಸ್ ಸ್ಮಾರ್ಟ್ ಮತ್ತು ಕೃಷ್ಣ ಕಲ್ಯಾಣಿಯ ಎಲ್ಲಾ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಏಕಕಾಲದಲ್ಲಿ ದಾಳಿ ನಡೆಸಿತು.
ಇದರ ಬೆನ್ನಲ್ಲೆ ಜಾರಿ ನಿರ್ದೇಶನಾಲಯ ಕೂಡಾ ದಾಳಿ ನಡೆಸಿದೆ. ಐಟಿಯ ತಂಡವೊಂದು ಬುಧವಾರ ಬೆಳಗ್ಗೆ ಶಾಸಕರ ಮನೆ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಶಾಸಕರ ಮನೆಯಿಂದ ಹೊರ ಬರಲು ಯಾರಿಗೂ ಅವಕಾಶ ನೀಡಿಲ್ಲ. ತನಿಖಾಧಿಕಾರಿಗಳು ಹಲವು ಗಂಟೆಗಳ ಕಾಲ ಮನೆಯೊಳಗೆ ಇದ್ದರು. ವಿಚಾರಣೆ ವೇಳೆ ಎಲ್ಲರ ಫೋನ್ ಕಿತ್ತುಕೊಂಡಿದ್ದಾರೆ ಎಂಬುದು ವರದಿಯಾಗಿದೆ.
ದಾಳಿಗೆ ನಿಖರವಾದ ಕಾರಣ ತಿಳಿದಿಲ್ಲ- ಪ್ರದೀಪ್ ಕಲ್ಯಾಣಿ:ಆದರೆ, ಈ ದಾಳಿ ಯಾವ ಪ್ರಕರಣಕ್ಕೆ ಎಂಬುದು ಇನ್ನೂ ಕೂಡಾ ಸ್ಪಷ್ಟವಾಗಿಲ್ಲ. ತೃಣಮೂಲ ಕಾಂಗ್ರೆಸ್ ವಾರ್ಡ್ ನಂ.18ರ ಸಂಯೋಜಕ ಕೃಷ್ಣ ಕಲ್ಯಾಣಿ ಅವರ ಸಹೋದರ ಪ್ರದೀಪ್ ಕಲ್ಯಾಣಿ ಮಾತನಾಡಿ, ''ಐಟಿ ಅಧಿಕಾರಿಗಳು ಏಕಾಏಕಿ ಶಾಸಕರ ಮನೆಗೆ ಪ್ರವೇಶಿಸಿದ್ದಾರೆ. ಇಲಾಖೆ ಕಾರ್ಯ ರಾಜಕೀಯ ಪ್ರೇರಿತವಾಗಿದೆ. ಈ ದಾಳಿಯ ನಿಖರವಾದ ಕಾರಣವನ್ನು ಅರ್ಥಮಾಡಿಕೊಳ್ಳಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಸುವೇಂದು ಅಧಿಕಾರಿ ವಿಧಾನಸಭೆಯೊಳಗೆ ನನ್ನ ಅಜ್ಜನಿಗೆ ಬೆದರಿಕೆ ಹಾಕಿದ್ದರು" ಎಂದು ಅವರು ಹೇಳಿದರು.