ಕರ್ನಾಟಕ

karnataka

ETV Bharat / bharat

ದಿವಂಗತ ನ್ಯಾಯಮೂರ್ತಿ ಮೋಹನ್ ಎಂ ಶಾಂತನಗೌಡರ್ ಅವರ ಪ್ರಮುಖ ತೀರ್ಪುಗಳು - ದಿವಂಗತ ನ್ಯಾಯಮೂರ್ತಿ ಮೋಹನ್ ಎಂ ಶಾಂತನಗೌಡರ್

ಏಪ್ರಿಲ್ 24ರಂದು ನಿಧನರಾದ ನ್ಯಾಯಮೂರ್ತಿ ಮೋಹನ್ ಎಂ ಶಾಂತನಗೌಡರ್ ಅವರಿಗೆ ಗೌರವ ಸಲ್ಲಿಸಲು ಸುಪ್ರೀಂ ಕೋರ್ಟ್ ಏಪ್ರಿಲ್ 26ರಂದು ತನ್ನ ನ್ಯಾಯಾಂಗ ಕಾರ್ಯವನ್ನು ಸ್ಥಗಿತಗೊಳಿಸಿದೆ.

SC judge Justice Mohan M Shantanagoudar
SC judge Justice Mohan M Shantanagoudar

By

Published : Apr 26, 2021, 5:24 PM IST

ಹೈದರಾಬಾದ್: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೋಹನ್ ಎಂ ಶಾಂತನಗೌಡರ್ ಅವರು ಏಪ್ರಿಲ್ 24ರಂದು ತಮ್ಮ 62ನೇ ವಯಸ್ಸಿನಲ್ಲಿ ಗುರುಗ್ರಾಮ್​ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನ್ಯಾಯಮೂರ್ತಿ ಶಾಂತನಗೌಡರ್ ಶ್ವಾಸಕೋಶದ ಸೋಂಕಿನಿಂದ ಮೇದಾಂತ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಅವರಿಗೆ ಗೌರವ ಸಲ್ಲಿಸಲು ಏಪ್ರಿಲ್ 26ರಂದು ಸುಪ್ರೀಂ ಕೋರ್ಟ್ ತನ್ನ ನ್ಯಾಯಾಂಗ ಕೆಲಸವನ್ನು ಸ್ಥಗಿತಗೊಳಿಸಿದೆ.

ಹೊಸದಾಗಿ ನೇಮಕಗೊಂಡ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ತಮ್ಮ ಮೊದಲ ಕೆಲಸದ ದಿನದಂದು, ಸುಪ್ರೀಂಕೋರ್ಟ್ ಆವರಣದಲ್ಲಿ ಸಂತಾಪ ಸಭೆ ನಡೆಸಿದರು ಮತ್ತು ಇತರ ಏಳು ನ್ಯಾಯಾಧೀಶರು ಸಭೆಯಲ್ಲಿ ಭಾಗಿಯಾಗಿದ್ದರು.

ಫೆಬ್ರವರಿ 201 ರಲ್ಲಿ ಸುಪ್ರೀಂಕೋರ್ಟ್‌ಗೆ ಉನ್ನತೀಕರಿಸಲ್ಪಟ್ಟ ಅವರು 2023ರ ಮೇ 5ರವರೆಗೆ ಅಧಿಕಾರಾವಧಿಯನ್ನು ಹೊಂದಿದ್ದರು. ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಯಾಗುವ ಮೊದಲು ಅವರು ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಅವರು ಮೂಲವಾಗಿ ಕರ್ನಾಟಕ ಹೈಕೋರ್ಟ್ ನವರಾಗಿದ್ದರು.

ನ್ಯಾಯಮೂರ್ತಿ ಶಾಂತನಗೌಡರ ಗಮನಾರ್ಹ ತೀರ್ಪುಗಳು:

ಬ್ಯಾಂಕ್ ಲಾಕರ್‌ಗಳ ಸುರಕ್ಷತೆಗಾಗಿ ಮಾರ್ಗಸೂಚಿ:

ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ, ನ್ಯಾಯಮೂರ್ತಿ ಶಾಂತನಗೌಡರ್ ನೇತೃತ್ವದ ನ್ಯಾಯಪೀಠವು ಅಮಿತಾಭ್ ದಾಸ್‌ಗುಪ್ತಾ ವರ್ಸಸ್ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಪ್ರಕರಣದಲ್ಲಿ ಬ್ಯಾಂಕ್ ಲಾಕರ್‌ಗಳಲ್ಲಿ ಅಮೂಲ್ಯ ವಸ್ತುಗಳನ್ನು ಸುರಕ್ಷತೆ ಖಚಿತಪಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ಜಾರಿಗೊಳಿಸಿತು.

ಖಾಸಗಿ ವಿವಾದಗಳ ಇತ್ಯರ್ಥವನ್ನು ಉತ್ತೇಜಿಸುವ ಪರಿಣಾಮ ಹೊಂದಿರುವ ತೀರ್ಪಿನಲ್ಲಿ, ನ್ಯಾಯಮೂರ್ತಿ ಶಾಂತನಗೌಡರ್ ನೇತೃತ್ವದ ನ್ಯಾಯಪೀಠವು ತಮ್ಮ ಪ್ರಕರಣಗಳನ್ನು ಖಾಸಗಿ ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸುವ ಪಕ್ಷಗಳು, ಸಿವಿಲ್ ಪ್ರೊಸೀಜರ್ ಕೋಡ್​ನ ಸೆಕ್ಷನ್ 89ರ ಅಡಿ ಪರಿಗಣಿಸಲಾದ ವಿಧಾನಗಳ ಹೊರತಾಗಿ, ಮರುಪಾವತಿ ಪಡೆಯಲು ಅರ್ಹವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಡೀಫಾಲ್ಟ್ ಜಾಮೀನು ಕುರಿತು ನ್ಯಾಯಾಲಯವು ಆರೋಪಿಗೆ ತಿಳಿಸಬೇಕು:

ನ್ಯಾಯಮೂರ್ತಿ ಶಾಂತನಗೌಡರ್ ಬರೆದಿರುವ ತೀರ್ಪು (ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ನ್ಯಾಯಪೀಠದ ಭಾಗವಾಗಿದ್ದಾಗ ಮತ್ತು ನ್ಯಾಯಮೂರ್ತಿ ವಿನೀತ್ ಸರನ್ ಸೇರಿದಂತೆ) ನ್ಯಾಯಮೂರ್ತಿಗಳು ಡೀಫಾಲ್ಟ್ ಜಾಮೀನು ಪಡೆಯುವ ಹಕ್ಕನ್ನು ಆರೋಪಿಗೆ ತಿಳಿಸುವ ಹೊಣೆಗಾರಿಕೆ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ಇಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ಕಾಳಜಿ ತೋರಿಸಲಾಗಿದೆ.

ಬೀಜ ಕಂಪನಿಯ ವಿರುದ್ಧ ಗ್ರಾಹಕ ದೂರು ದಾಖಲಿಸಲು ರೈತ ಅರ್ಹತೆ ಹೊಂದಿದ್ದಾನೆ:

ನಂದನ್ ಬಯೋಮ್ಯಾಟ್ರಿಕ್ಸ್ ಲಿಮಿಟೆಡ್ ವರ್ಸಸ್ ಅಂಬಿಕಾ ದೇವಿ ಪ್ರಕರಣದಲ್ಲಿ ಸೇವೆಯ ಕೊರತೆಗಾಗಿ ಬೀಜ ಕಂಪನಿಯ ವಿರುದ್ಧ ಗ್ರಾಹಕ ದೂರು ದಾಖಲಿಸಲು ಒಬ್ಬ ರೈತನಿಗೆ ಅರ್ಹತೆ ಇದೆ ಎಂದು ನ್ಯಾಯಮೂರ್ತಿ ಶಾಂತನಗೌಡರ್ ಕಾಲದಲ್ಲಿ ಸುಪ್ರೀಂ ಅಭಿಪ್ರಾಯಪಟ್ಟಿದೆ.

ರೈತ ಬೀಜ ಖರೀದಿಯನ್ನು ವಾಣಿಜ್ಯ ಉದ್ದೇಶವಾಗಿ ನಡೆಸಲಾಗುವುದಿಲ್ಲ ಎಂದು ತೀರ್ಪು ನೀಡಿದೆ. ರೈತರು ಎದುರಿಸುತ್ತಿರುವ ಕಷ್ಟಗಳು ಮತ್ತು ದೊಡ್ಡ ಕಾರ್ಪೋರೇಟ್‌ಗಳು ಅವುಗಳನ್ನು ಶೋಷಿಸುವ ಪ್ರವೃತ್ತಿಯ ಬಗ್ಗೆ ಅವರು ಕೆಲವು ಸಂಬಂಧಿತ ಟೀಕೆಗಳನ್ನು ಮಾಡಿದ್ದರು.

ವೈಯಕ್ತಿಕ ಸ್ವಾತಂತ್ರ್ಯ:

ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಕಳವಳವನ್ನು ಉಂಟುಮಾಡುವ ಮತ್ತೊಂದು ತೀರ್ಪಿನಲ್ಲಿ, ನ್ಯಾಯಮೂರ್ತಿ ಶಾಂತನಗೌಡರ್ ನೇತೃತ್ವದ ನ್ಯಾಯಪೀಠವು ಆರೋಪಿಗೆ ಯಾವುದೇ ಕಾನೂನು ಪ್ರಾತಿನಿಧ್ಯವಿಲ್ಲದಿದ್ದರೆ ನ್ಯಾಯಾಲಯಗಳು ಶಿಕ್ಷೆ ವಿಧಿಸಬಾರದು ಎಂದು ತೀರ್ಪು ನೀಡಿತು.

ತೀರ್ಪಿನಲ್ಲಿ ಆರೋಪಿಯು ನ್ಯಾಯಾಲಯದ ಮುಂದೆ ಪ್ರತಿನಿಧಿಸದಿದ್ದಾಗ, ಅದು ಅಮಿಕಸ್ ಕ್ಯೂರಿ ಅಥವಾ ವಕೀಲರನ್ನು ನೇಮಿಸಬೇಕಾಗುತ್ತದೆ ಎಂದು ಕಾನೂನು ಸೇವೆಗಳ ಸಮಿತಿಗೆ ಉಲ್ಲೇಖಿಸಲಾಗಿದೆ (ಪ್ರಕರಣ: ಶೈಕ್ ಮುಖ್ತಾರ್ ವರ್ಸಸ್ ಆಂಧ್ರಪ್ರದೇಶ ರಾಜ್ಯ)

ವ್ಯಾಲೆಟ್ ನಿಲುಗಡೆಗೆ ನೀಡಲಾದ ವಾಹನದ ಕಳ್ಳತನದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಹೋಟೆಲ್‌ಗಳು 'ಮಾಲೀಕರ ಅಪಾಯ' ಷರತ್ತನ್ನು ಅವಲಂಬಿಸಲಾಗುವುದಿಲ್ಲ:

ತಾಜ್ ಮಹಲ್ ಹೋಟೆಲ್ ವರ್ಸಸ್ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ನಲ್ಲಿ ನ್ಯಾಯಮೂರ್ತಿ ಶಾಂತನಗೌಡರ್ ಅವರ ತೀರ್ಪು, ವ್ಯಾಲೆಟ್ ನಿಲುಗಡೆಗೆ ನೀಡಲಾದ ವಾಹನದ ಕಳ್ಳತನದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಹೋಟೆಲ್‌ಗಳು 'ಮಾಲೀಕರ ಅಪಾಯ' ಷರತ್ತನ್ನು ಅವಲಂಬಿಸಲಾಗುವುದಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ:

ನೂತನ ಸಿಜೆಐ ಸವಾಲುಗಳನ್ನು ನಿಭಾಯಿಸಲು ಸಮರ್ಥರಿದ್ದಾರೆ: ನಿವೃತ್ತ ನ್ಯಾ. ವಿ.ಗೋಪಾಲಗೌಡ

For All Latest Updates

ABOUT THE AUTHOR

...view details