ನವದೆಹಲಿ:ಅಂಡಮಾನ - ನಿಕೋಬಾರ್ಗೆ ನೈರುತ್ಯ ಮಾನ್ಸೂನ್ ಕಾಲಿಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ ( ಐಎಂಡಿ) ಹೇಳಿದೆ. ದೇಶಾದ್ಯಂತ ಹಲವು ರಾಜ್ಯಗಳಲ್ಲಿ ತಾಪಮಾನ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕಡಿಮೆ ಉಷ್ಟವಲಯದ ಅಂಡಮಾನ್- ನಿಕೋಬಾರ್ ದ್ವೀಪಗಳ ಅಕ್ಕ- ಪಕ್ಕದಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳು ಬಲಗೊಳ್ಳುತ್ತಿರುವುದರಿಂದ ದ್ವೀಪಗಳಿಗೆ ಮಾನ್ಸೂನ್ ಕಾಲಿಟ್ಟಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ ಎರಡ್ಮೂರು ದಿನಗಳಲ್ಲಿ ನೈಋತ್ಯ ಮಾನ್ಸೂನ್, ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ಸಂಪೂರ್ಣ ಅಂಡಮಾನ್ ಮತ್ತು ಅಂಡಮಾನ್ ದ್ವೀಪಗಳು ಮತ್ತು ಪೂರ್ವ - ಮಧ್ಯ ಬಂಗಾಳ ಕೊಲ್ಲಿಯನ್ನು ಪ್ರವೇಶಿಸಲಿದ್ದು ಮಳೆಯನ್ನು ಸುರಿಸಲಿವೆ ಎಂದು ಹವಾಮಾನ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.