ನವದೆಹಲಿ:ಹೊಸ ಕೋವಿಡ್ ರೂಪಾಂತರ ಇಲ್ಲದಿದ್ದರೆ, ಕೊರೊನಾ ಮೂರನೇ ಅಲೆಯು ಎರಡನೇ ಅಲೆಯಷ್ಟು ದುಷ್ಪರಿಣಾಮ ಬೀರುವುದಿಲ್ಲ ಎಂದು ಖ್ಯಾತ ಲಸಿಕಾ ತಜ್ಞೆ ಗಗನ್ದೀಪ್ ಕಾಂಗ್ ಮಾಹಿತಿ ನೀಡಿದ್ದಾರೆ.
ತಮಿಳುನಾಡಿನ ಸಿಐಐ ಲೈಫ್ಸೈನ್ಸ್ ಸಮ್ಮೇಳನದ ಪ್ರಯುಕ್ತ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಅವರು, ಹೊಸ ರೂಪಾಂತರಗಳನ್ನು ನಿಭಾಯಿಸಬಲ್ಲ ಉತ್ತಮ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕೂಡಾ ಕಾರ್ಯ ನಿರ್ವಹಿಸುತ್ತಿರುವ ಗಗನ್ದೀಪ್ ಕಾಂಗ್, ಕೊರೊನಾ ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಭಾರತದ ಲಸಿಕೆ ಉದ್ಯಮವು ಸಂಪೂರ್ಣವಾಗಿ ಯಶಸ್ವಿಯಾಗುತ್ತಿದೆ. ಆದರೆ ಇನ್ನೂ ಹೆಚ್ಚು ದೂರ ಸಾಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.