ಕರ್ನಾಟಕ

karnataka

ETV Bharat / bharat

Exclusive: ಮಕ್ಕಳ ಮಾನಸಿಕ ಒತ್ತಡ ಮತ್ತು ಜಂಕ್​ ಫುಡ್ ಸೇವನೆಗಿದೆ ನಂಟು - ಜಂಕ್​ ಫುಡ್ ಸೇವನೆ

ಜಂಕ್ ಫುಡ್​ನಿಂದಾಗುವ ಅನಾಹುತ.. ಒತ್ತಡ ಎರಡು ವಿಧವಾಗಿರಬಹುದು. ಮೊದಲನೆಯದು ಮನೆಯಲ್ಲಿ ಪೋಷಕರ ನಡುವಿನ ಸಂಘರ್ಷ. ಅದರ ಪರಿಣಾಮ ಮಕ್ಕಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಎರಡನೆಯದು ಚೆನ್ನಾಗಿ ಓದಬೇಕೆಂಬ ಒತ್ತಡ. ಎಲ್ಲರೂ ಮೊದಲು ಸ್ಥಾನದಲ್ಲಿ ಬರಲು ಸಾಧ್ಯವಿಲ್ಲ. ಪ್ರತಿ ವಿದ್ಯಾರ್ಥಿಯು ವಿಭಿನ್ನ ಕೌಶಲ್ಯಗಳನ್ನು ಹೊಂದಿರುತ್ತಾನೆ. ಪೋಷಕರು ಹಾಗೂ ಶಾಲಾ ಶಿಕ್ಷಕರು ಇದನ್ನು ಅರಿತು ಪ್ರೋತ್ಸಾಹಿಸಬೇಕು.

If stress is reduced in children they will stay away from junk food
ಮಕ್ಕಳ ಮಾನಸಿಕ ಒತ್ತಡ ಮತ್ತು ಜಂಕ್​ ಫುಡ್ ಸೇವನೆಗಿದೆ ನಂಟು

By

Published : Aug 17, 2022, 1:14 PM IST

ಮಕ್ಕಳಲ್ಲಿ ಒತ್ತಡ ಕಡಿಮೆಯಾದರೆ ಅವರು ಜಂಕ್ ಫುಡ್ ನಿಂದ ದೂರ ಉಳಿಯುತ್ತಾರೆ. ದೈಹಿಕ ಚಟುವಟಿಕೆಯೂ ತಿಂಡಿ ತಿನಿಸುಗಳನ್ನು ಸೇವಿಸುವ ಆಸೆಯನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ಮಕ್ಕಳ ಮನಃಶಾಸ್ತ್ರಜ್ಞೆ ಸುಜಾತಾ ರಾಜಮಣಿ. ಮಕ್ಕಳು ಹಾಗೂ ಜಂಕ್ ಫುಡ್ ಕುರಿತಾಗಿ ‘ಈಟಿವಿ ಭಾರತ್’ ಜೊತೆ ವಿಶೇಷವಾಗಿ ಅವರು ಮಾತನಾಡಿದ್ದಾರೆ.

ಇತ್ತೀಚಿನ ಅಧ್ಯಯನದ ಪ್ರಕಾರ ಮಕ್ಕಳಲ್ಲಿನ ಒತ್ತಡವು ಅವರು ತಿನ್ನುವ ಆಹಾರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ ಮತ್ತು ಹೆಚ್ಚು ಒತ್ತಡವನ್ನು ಎದುರಿಸುವ ಮಕ್ಕಳು ಹೆಚ್ಚು ಜಂಕ್ ಫುಡ್ ಅನ್ನು ಸೇವಿಸುತ್ತಾರೆ. 'ಜರ್ನಲ್ ಆಫ್ ನ್ಯೂಟ್ರಿಷನ್ ಎಜುಕೇಶನ್ ಅಂಡ್ ಬಿಹೇವಿಯರ್'ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ಒತ್ತಡದ ಸಮಯದಲ್ಲಿ ಮಕ್ಕಳು ಸೇವಿಸುವ ಆಹಾರಗಳಲ್ಲಿ ಶೇಕಡಾ 40 ರಷ್ಟು ಸಿಹಿತಿಂಡಿಗಳು ಮತ್ತು ಪೇಸ್ಟ್ರಿ ಕೇಕ್​ಗಗಳಾಗಿವೆ.

ಶೇ 25 ರಷ್ಟು ಮಕ್ಕಳು ಹೆಚ್ಚಿನ ಸಕ್ಕರೆ ಹೊಂದಿರುವ ತಂಪು ಪಾನೀಯಗಳನ್ನು ಸೇವಿಸಿದರೆ, 35 ರಷ್ಟು ಮಕ್ಕಳು ಚಿಪ್ಸ್ ಮತ್ತು ಇತರ ಕರಿದ ಆಹಾರವನ್ನು ಸೇವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಆಹಾರ ಪದ್ಧತಿ ಮತ್ತು ಅಡ್ಡ ಪರಿಣಾಮಗಳ ಕುರಿತು ಪ್ರಮುಖ ಮಕ್ಕಳ ಮನೋವಿಜ್ಞಾನಿ ಸುಜಾತಾ ರಾಜಮಣಿ ಅವರೊಂದಿಗೆ 'ಈಟಿವಿ ಭಾರತ್' ವಿಶೇಷ ಸಂದರ್ಶನ ಮಾಡಿದೆ.

ಪ್ರಶ್ನೆ: ಒತ್ತಡ ಮತ್ತು ಜಂಕ್ ಫುಡ್ ನಡುವಿನ ಸಂಬಂಧವೇನು?

: ಒತ್ತಡ ಹೆಚ್ಚಾದಾಗ ದೇಹವು ತಕ್ಷಣವೇ ಪ್ರತಿಕ್ರಿಯಿಸುತ್ತದೆ. ಮೆದುಳು ಕಾರ್ಬೋಹೈಡ್ರೇಟ್‌ಗಳನ್ನು ತಿನ್ನಲು ಸಂಕೇತಗಳನ್ನು ಕಳುಹಿಸುತ್ತದೆ. ಪರಿಣಾಮವಾಗಿ, ಚಿಪ್ಸ್, ಚಾಕೊಲೇಟ್, ಪೇಸ್ಟ್ರಿ ಕೇಕ್ ಮತ್ತು ಸಿಹಿತಿಂಡಿಗಳನ್ನು ತಿನ್ನಲು ಬಲವಾದ ಪ್ರಚೋದನೆ ಉಂಟಾಗುತ್ತದೆ. ಈ ಆಂತರಿಕ ಕ್ರಿಯೆಯ ಬಗ್ಗೆ ಮಕ್ಕಳಾಗಲಿ ಅಥವಾ ಪೋಷಕರಾಗಲಿ ತಿಳಿದಿರುವುದಿಲ್ಲ. ಮಕ್ಕಳು ತಿಂಡಿ ತಿನ್ನಲು ಒಲವು ತೋರಿದರೆ ಅವರು ಒತ್ತಡದಲ್ಲಿದ್ದಾರೆ ಎಂದರ್ಥ.

ಪ್ರಶ್ನೆ: ಎಲ್ಲಾ ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಓದಬೇಕೆಂದು ಬಯಸುತ್ತಾರೆ, ಅಲ್ಲವೇ?

ಉ: ಒತ್ತಡ ಎರಡು ವಿಧವಾಗಿರಬಹುದು. ಮೊದಲನೆಯದು ಮನೆಯಲ್ಲಿ ಪೋಷಕರ ನಡುವಿನ ಸಂಘರ್ಷ. ಅದರ ಪರಿಣಾಮ ಮಕ್ಕಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಎರಡನೆಯದು ಚೆನ್ನಾಗಿ ಓದಬೇಕೆಂಬ ಒತ್ತಡ. ಎಲ್ಲರೂ ಮೊದಲು ಸ್ಥಾನದಲ್ಲಿ ಬರಲು ಸಾಧ್ಯವಿಲ್ಲ. ಪ್ರತಿ ವಿದ್ಯಾರ್ಥಿಯು ವಿಭಿನ್ನ ಕೌಶಲ್ಯಗಳನ್ನು ಹೊಂದಿರುತ್ತಾನೆ.

ಪೋಷಕರು ಹಾಗೂ ಶಾಲಾ ಶಿಕ್ಷಕರು ಇದನ್ನು ಅರಿತು ಪ್ರೋತ್ಸಾಹಿಸಬೇಕು. ಕೇವಲ ಅಂಕಗಳಿಗಷ್ಟೇ ಅಲ್ಲದೆ ಹವ್ಯಾಸವಾಗಿ ಕಲಿಯುವ ಸಂಗೀತ, ನೃತ್ಯ, ಕ್ರೀಡೆಯಲ್ಲೂ ತಮ್ಮ ಮಕ್ಕಳು ಉತ್ತಮ ಸಾಧನೆ ಮಾಡಿ ಇತರರಿಗಿಂತ ಮುಂದೆ ನಿಲ್ಲಬೇಕು ಎಂದು ಬಯಸುತ್ತಾರೆ. ಈ ಟ್ರೆಂಡ್ ಹುಡುಗಿಯರನ್ನು ಒತ್ತಡಕ್ಕೆ ದೂಡುತ್ತಿದೆ. ಹವ್ಯಾಸಗಳು ಮಕ್ಕಳಲ್ಲಿ ಒತ್ತಡವನ್ನು ಕಡಿಮೆ ಮಾಡಬೇಕು. ಅವರಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸಬೇಕು. ಅವು ನಕಾರಾತ್ಮಕ ಪರಿಣಾಮಗಳನ್ನು ಸಹ ಉಂಟುಮಾಡಬಾರದು.

ಪ್ರಶ್ನೆ: ಪಿಜ್ಜಾಗಳು ಮತ್ತು ಬರ್ಗರ್‌ಗಳು ಈಗ ಆಹಾರ ಪದ್ಧತಿಯ ಭಾಗವಾಗಿವೆ ಅಲ್ಲವೇ?

ಉ: ಕೆಲವು ಪೋಷಕರು ತಮ್ಮ ಮಕ್ಕಳಿಗೆ ಚಿಪ್ಸ್, ಬಿಸ್ಕತ್ತುಗಳು ಮತ್ತು ಚಾಕೊಲೇಟ್‌ಗಳಂತಹ ತಿಂಡಿಗಳನ್ನು ನೀಡುತ್ತಾರೆ. ಈ ವರ್ತನೆ ಸರಿಯಲ್ಲ. ತಮ್ಮ ಮಕ್ಕಳಿಗೆ ಯಾವ ರೀತಿಯ ಆಹಾರ ನೀಡಬೇಕು ಎಂಬ ಅರಿವು ಪೋಷಕರಲ್ಲಿ ಮೊದಲು ಬರಬೇಕು. ಅವರು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಮಕ್ಕಳೂ ಅದಕ್ಕೆ ಒಗ್ಗಿಕೊಳ್ಳಬೇಕು.

ವಿಶ್ವ ಆರೋಗ್ಯ ಸಂಸ್ಥೆಯು ಭಾರತೀಯ ಆಹಾರಗಳಲ್ಲಿ ಇಡ್ಲಿಯನ್ನು ಆರೋಗ್ಯಕರ ಉಪಹಾರವೆಂದು ಪರಿಗಣಿಸಿದೆ. ಅಂತಹ ವಿಷಯಗಳನ್ನು ಬಿಟ್ಟು, ನಾವು ನೂಡಲ್ಸ್ ಮತ್ತು ಗಾರ್ಲಿಕ್ ಬ್ರೆಡ್ ಹಿಂದೆ ಓಡುತ್ತಿದ್ದೇವೆ. ಮೇಲಾಗಿ ಮಕ್ಕಳು ತಾವು ತಿನ್ನುವುದಿಲ್ಲ ಎಂದು ವಾದಿಸಿದರೂ, ಪೋಷಕರು ಬಲವಂತವಾಗಿ ತಿನ್ನಿಸುತ್ತಾರೆ. ಪಾಲಕರು ಆಹಾರದ ರೂಪದಲ್ಲಿ ಪ್ರೀತಿಯನ್ನು ತೋರಿಸಲು ಯತ್ನಿಸುತ್ತಾರೆ. ಮಕ್ಕಳು ಕೂಡ ಯಾವುದೇ ಸಣ್ಣ ಅವಕಾಶದಲ್ಲಿ ಏನನ್ನಾದರೂ ತಿನ್ನುತ್ತಾರೆ. ಅದೊಂದು ಕೆಟ್ಟ ಸಂಸ್ಕೃತಿ.

ಪ್ರಶ್ನೆ: ಒತ್ತಡವನ್ನು ಕಡಿಮೆ ಮಾಡುವಲ್ಲಿ ಪೋಷಕರ ಪಾತ್ರವೇನು?

ಉ: ಪಾಲಕರು ಮಕ್ಕಳಿಗೆ ಒತ್ತಡದಿಂದ ಹೊರಬರಲು ಸಹಾಯ ಮಾಡಬೇಕು. ವ್ಯಾಯಾಮವು ಕುಟುಂಬದ ಅಭ್ಯಾಸವಾಗಬೇಕು. ಪೋಷಕರು ಬೇಗನೆ ಎದ್ದು ವಾಕಿಂಗ್ ಹೊರಟರೆ ಮಕ್ಕಳು ಅನುಸರಿಸುತ್ತಾರೆ. ನಡಿಗೆ, ಓಟ, ಯೋಗ, ಧ್ಯಾನ, ಪ್ರಾಣಾಯಾಮ, ಈಜು, ಆಟಗಳು ಇತ್ಯಾದಿಗಳ ರೂಪದಲ್ಲಿ ದೈಹಿಕ ಚಟುವಟಿಕೆಯು ಸಕಾರಾತ್ಮಕ ಮನಸ್ಥಿತಿಯನ್ನು ಸೃಷ್ಟಿಸುತ್ತದೆ.

ಇದರಿಂದ ಮಕ್ಕಳಿಗೆ ಜಂಕ್ ಫುಡ್ ತಿನ್ನುವ ಯೋಚನೆ ಕಡಿಮೆಯಾಗುತ್ತದೆ. ದೈಹಿಕ ಚಟುವಟಿಕೆಯು ಉತ್ತಮ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಡಾರ್ಕ್ ಚಾಕೊಲೇಟ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸುವಾಗ ಪರಿಶೀಲಿಸಬೇಕು. ಶಾಲೆಯಲ್ಲಿ ಆದ್ಯತೆ ಇರುವ ಕ್ರೀಡೆಗಳು ಮತ್ತು ಆಟಗಳಿವೆಯೇ? ಶಾಲೆಗೆ ಮೀಸಲಾದ ಆಟದ ಮೈದಾನವಿದೆಯೇ ಎಂಬುದನ್ನೆಲ್ಲ ತಿಳಿದುಕೊಳ್ಳಬೇಕು. ತಾಂತ್ರಿಕವಾಗಿ ಹೇಳುವುದಾದರೆ ನಮ್ಮ ಮೆದುಳು ನಿರಂತರವಾಗಿ 45 ನಿಮಿಷಗಳಿಗಿಂತ ಹೆಚ್ಚು ಕಾಲ ಓದುವುದಿಲ್ಲ. ಪ್ರತಿ 45-50 ನಿಮಿಷಗಳ ನಂತರ ಕನಿಷ್ಠ 10-15 ನಿಮಿಷಗಳ ಮಾನಸಿಕ ವಿಶ್ರಾಂತಿ ಅಗತ್ಯವಿದೆ. ಆಗ ಮಾತ್ರ ನೀವು ನವಚೈತನ್ಯ ಹೊಂದುತ್ತೀರಿ.

ಪ್ರಶ್ನೆ: ಜಂಕ್ ಫುಡ್ ನಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳೇನು?

ಉ: ಕಾರ್ಬೋಹೈಡ್ರೇಟ್‌ಗಳನ್ನು ತಿನ್ನುವಾಗ ದೇಹವು ಹೆಚ್ಚಿನ ಪ್ರಮಾಣದ ಕೊಬ್ಬನ್ನು ಪಡೆಯುವುದರಿಂದ, ಬಾಲ್ಯದಲ್ಲಿಯೇ ಸ್ಥೂಲಕಾಯತೆ ಹೆಚ್ಚುವ ಸಾಧ್ಯತೆಗಳಿವೆ. ಇದರೊಂದಿಗೆ ಹಲವಾರು ಸಮಸ್ಯೆಗಳು ಉದ್ಭವಿಸುತ್ತವೆ. ಸ್ವಯಂ ಅವಹೇಳನ ಮತ್ತು ನಕಾರಾತ್ಮಕ ಆಲೋಚನೆಗಳು ಹೆಚ್ಚಾಗುತ್ತವೆ. ಅಧಿಕ ರಕ್ತದೊತ್ತಡ, ಮಧುಮೇಹ, ಸಂಧಿವಾತ, ಹುಡುಗಿಯರಲ್ಲಿ ಮುಟ್ಟಿನ ಸಮಸ್ಯೆಗಳು, 25 ವರ್ಷಕ್ಕಿಂತ ಮೊದಲು ಹಾರ್ಮೋನ್ ಅಸಮತೋಲನ ಮುಂತಾದ ಸಮಸ್ಯೆಗಳು ಉದ್ಭವಿಸಬಹುದು.

ಇದನ್ನು ಓದಿ:ಹಲವು ಅನಾರೋಗ್ಯಕ್ಕೆ ಒಂದೇ ಔಷಧ ವಿನೆಗರ್.. ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತೇ?

ABOUT THE AUTHOR

...view details