ಕರ್ನಾಟಕ

karnataka

ETV Bharat / bharat

ICSE 10th results-2022.. ಶೇ.99.97ರಷ್ಟು ವಿದ್ಯಾರ್ಥಿಗಳು ಪಾಸ್​ - ICSE results declared

ಇಂದು ಸಂಜೆ 5 ಗಂಟೆಗೆ 10ನೇ ತರಗತಿ ಫಲಿತಾಂಶ ಪ್ರಕಟ- ಸಿಐಎಸ್​ಸಿಇನ ಅಧಿಕೃತ ವೆಬ್​ಸೈಟ್​ www.cisce.org, ಕೆರಿಯರ್​ ಪೋರ್ಟಲ್​ನಲ್ಲಿ ಫಲಿತಾಂಶ ವೀಕ್ಷಿಸಿ...

ICSE class 10th results declared
ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ

By

Published : Jul 17, 2022, 5:56 PM IST

Updated : Jul 17, 2022, 7:15 PM IST

ನವದೆಹಲಿ: ಐಸಿಎಸ್‌ಇ (ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್) 10ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಶೇ.99.97ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.99.98ರಷ್ಟು ಬಾಲಕಿಯರ ಉತ್ತೀರ್ಣರಾಗಿದ್ದರೆ, ಶೇ.99.97ರಷ್ಟು ಬಾಲಕರು ಪಾಸ್​ ಆಗಿದ್ದಾರೆ.

ನಾಲ್ವರು ವಿದ್ಯಾರ್ಥಿಗಳು ಶೇ.99.8ರಷ್ಟು ಅಂಕಗಳೊಂದಿಗೆ ಟಾಪರ್ಸ್​​ ಆಗಿ ಹೊರಹೊಮ್ಮಿದ್ದರೆ, 34 ಜನ ವಿದ್ಯಾರ್ಥಿಗಳು ಶೇ.99.6ರಷ್ಟು ಅಂಕಗಳನ್ನು ಪಡೆದು ಎರಡನೇ ರ‍್ಯಾಂಕ್​​​​ ಪಡೆದಿದ್ದಾರೆ. 72 ಜನ ವಿದ್ಯಾರ್ಥಿಗಳು ಶೇ.99.4ರಷ್ಟು ಅಂಕಗಳು ಪಡೆಯುವ ಮೂಲಕ ಮೂರನೇ ರ‍್ಯಾಂಕ್​ ಗಳಿಸಿದ್ದಾರೆ.

ಮೊದಲ ಸೆಮಿಸ್ಟರ್​ ಪರೀಕ್ಷಾ ಫಲಿತಾಂಶ ಫೆಬ್ರವರಿ 7ರಂದು ಪ್ರಕಟವಾಗಿತ್ತು. ಈಗ ಎರಡನೇ ಸೆಮಿಸ್ಟರ್​ ಫಲಿತಾಂಶ ಪ್ರಕಟಿಸಲಾಗಿದೆ. ಟಾಪರ್ಸ್​ ಆಗಿರುವ ಹರಗುನ್ ಕೌರ್ ಮಥಾರು (ಪುಣೆ), ಅನಿಕಾ ಗುಪ್ತಾ (ಕಾನ್ಪುರ್), ಪುಷ್ಕರ್ ತ್ರಿಪಾಠಿ (ಬಲರಾಂಪುರ) ಮತ್ತು ಕನಿಷ್ಕ್ ಮಿತ್ತಲ್ (ಲಖನೌ) ಸಮನಾಗಿ ಶೇ.99.8ರಷ್ಟು ಅಂಕಗಳನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಈಗ ಪಡೆದ ಅಂಕಗಳಿಂದ ತೃಪ್ತಿಯಾಗದಿದ್ದರೆ, ಉತ್ತರ ಪತ್ರಿಕೆಗಳ ಮರು ಪರಿಶೀಲನೆ ಮಾಡಿಸಲು ಅವಕಾಶ ಇದೆ. ಮರುಪರಿಶೀಲನೆಯ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸಿದರೆ ಪ್ರತಿ ವಿಷಯಕ್ಕೆ 1,000 ರೂ. ಶುಲ್ಕ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ:ಕ್ರೈಂ ಧಾರಾವಾಹಿಯಿಂದ ಪ್ರೇರಣೆ: ಬಾಲಕನ ಕಿಡ್ನಾಪ್​ ಮಾಡಿ ಕೊಲೆಗೈದ 10ನೇ ಕ್ಲಾಸ್​ ವಿದ್ಯಾರ್ಥಿಗಳು!

Last Updated : Jul 17, 2022, 7:15 PM IST

ABOUT THE AUTHOR

...view details